ಮೂಡಿಗೆರೆ-ಪಟ್ಟಣದ-ರಸ್ತೆಯ-ಹಂಪ್ ಗಳಿಗೆ-ಬಣ್ಣ-ಹಾಗೂ-ರಿಫ್ಲೆಕ್ಟರ್- ಅಳವಡಿಸಿ-ಸಾಮಾಜಿಕ-ಕಾರ್ಯಕರ್ತ-ಸಾಜೀದ್-ಮನವಿ

ಬಣಕಲ್ : ಮೂಡಿಗೆರೆ ಪಟ್ಟಣದ (ಆಸ್ಪತ್ರೆ ಮುಂಭಾಗ, ಹಾಗೂ ಮುದ್ರೆಮನೆ) ಮುಖ್ಯ ರಸ್ತೆ ಯಲ್ಲಿ ಅಲ್ಲಲ್ಲಿ ವೇಗದ ನಿಯಂತ್ರಣ ಕ್ಕಾಗಿ ಹಂಪ್ ಗಳನ್ನು ಅಳವಡಿ ಸಲಾಗಿದೆ ಆದರೆ ಹಂಪ್ ಗೆ ಹಾಕಿರುವ ಬಣ್ಣಗಳು ಮಾಸಿರುವುದರಿಂದ ವಾಹನ ಸವಾರರಿಗೆ ಹಂಪ್ ಇರುವುದು ತಿಳಿಯದೆ ಅಪಘಾತ ಗಳು ಸಂಭವಿಸುತ್ತಿದೆ.

ಸಣ್ಣ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಬರುವ ಸವಾರರಿಗೆ ಹಂಪ್ ಇರುವ ವಿಚಾರ ಗಮನಕ್ಕೆ ಬಾರದೆ ಮಕ್ಕಳು ಗಾಡಿಯಿಂದ ಬಿದ್ದಿರುವ ಉದಾಹರಣೆ ಬಹಳಷ್ಟಿದೆ. ಕೆಲವೊಮ್ಮೆ ದಿಢೀರನೆ ಬ್ರೇಕ್ ಹಾಕಿದಾಗ ಅವಘಡ ಸಂಭವಿಸುವ ಸಾಧ್ಯತೆಯೂ ಇದೆ ದಯಮಾಡಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇದರ ಬಗ್ಗೆ ಗಮನ ಹರಿಸಬೇಕು. ಆದಷ್ಟು ಬೇಗ ಹಂಪ್ ಗೆ ಬಣ್ಣ ಬಳಿಸಬೇಕು ಹಾಗೆ ರಿಫ್ಲೆಕ್ಟರ್ ಅಳವಡಿಸಿ ಜನರ ಜೀವ ಕಾಪಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸಾಜೀದ್ ಬಣಕಲ್ ಮನವಿ ಮಾಡಿದ್ದಾರೆ.

-✍️ಸೂರಿ ಬಣಕಲ್

Leave a Reply

Your email address will not be published. Required fields are marked *

× How can I help you?