ತುಮಕೂರು: ಸಂಸ್ಕೃತಿ, ಸಂಸ್ಕಾರ, ಮಕ್ಕಳ ಶಿಕ್ಷಣಕ್ಕೆ ತಂದೆ ತಾಯಿಯರು ಪ್ರಗತಿ ನಿಧಿ ಪಡೆದು ಅತ್ತ್ಯುತ್ತಮ ಶಿಕ್ಷಣ ನೀಡುತ್ತಿದ್ದು ಎಲ್ಲಾ ಮಕ್ಕಳು ಉತ್ತಮ ಫಲಿತಾಂಶ ಪಡೆಯಿರಿ ಎಂದು ತುಮಕೂರು ಜಿಲ್ಲೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಹೊನ್ನುಡಿಕೆ ವಲಯದ ಶ್ರೀ ಸ್ವರ್ಣಾಂಭ ಪ್ರೌಢ ಶಾಲೆಯ ಎಸ್.ಎಸ್.ಎಲ್.ಸಿ.ಮಕ್ಕಳಿಗೆ ಮೂರು ತಿಂಗಳು ಟ್ಯೂಷನ್ ಕ್ಲಾಸ್ ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿನ ಯೋಜನೆಗಳಾ ಮಹಿಳಾ ಜ್ಞಾನ ವಿಕಾಸ, ಸುಜ್ಞಾನ ನಿಧಿ, ವಾತ್ಸಲ್ಯ ಪರಿಸರ, ಜ್ಞಾನ ದೀಪ ಶಿಕ್ಷಕರ ಆಯ್ಕೆ, ಶಾಲೆಗೆ ಡೆಸ್ಕ್ ಬೆಂಚ್, ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಮಾತನಾಡಿ, 10 ನೇ ತರಗತಿಯಲ್ಲಿ ಮಕ್ಕಳು ಉತ್ತಮ ಅಂಕಗಳಿಸಿ ಎಲ್ಲರು ಪ್ರಥಮ ದರ್ಜೆಯಲ್ಲಿ ಪಾಸಾಗಿ ಎಂದು ಸಣ್ಣ ಸಣ್ಣ ಕಥೆಗಳ ಮೂಲಕ ಮಾಹಿತಿ ನೀಡಿ ಶುಭಹಾರೈಸಿದರು.
ಶಾಲೆಯ ಮುಖ್ಯೋಪಾಧ್ಯಾಯ ಜಗದಾಂಬರವರು ಮಾತನಾಡಿ, ಮಕ್ಕಳು ಬೆಳಿಗ್ಗೆ ಬೇಗ ಎದ್ದು ಓದುವ ಬಗ್ಗೆ ತಿಳಿಸಿ ಮಕ್ಕಳಿಗೆ ಛಲ ಇರಬೇಕು. ಹಸಿವು ನಿದ್ರೆ ಬಿಟ್ಟು ಓದಿ ಉತ್ತಮ ಫಲಿತಾಂಶ ಬಂದರೆ ನಾವು ಧರ್ಮಸ್ಥಳಕ್ಕೆ ಮತ್ತು ಪೂಜ್ಯ ದಂಪತಿಗಳಿಗೆ ಅದೇ ನಮ್ಮ ಶಾಲೆಯ ಕೊಡುಗೆ ಆಗಬೇಕು ಎಂದು ತಿಳಿಸಿ ಯೋಜನೆಯ ಕಾರ್ಯಕ್ರಮ ಅತ್ತ್ಯುತ್ತಮ ಎಂದರು.

ಗ್ರಾಮ ಪಂಚಾಯತ್ ಸದಸ್ಯೆ ಗೀತಾರಾಜುರವರು ಯೋಜನೆಯ ಕಾರ್ಯಕ್ರಮಗಳ ಪೂಜ್ಯ ಹೆಗ್ಗಡೆ ದಂಪತಿಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಒಕ್ಕೂಟದ ಅಧ್ಯಕ್ಷ ಅಮಿತ್ ಪಾಶಾರ್ ಅವರು ಯೋಗ ಹಾಗೂ ಯೋಗ್ಯತೆಯ ಬಗ್ಗೆ ವಿವರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಶಾಲೆಯ ಶಿಕ್ಷಕ ಗಂಗಾಧರಯ್ಯ ರವರು ನಮ್ಮ ಶಾಲೆಗೆ ಶ್ರೀ ಮಂಜುನಾಥ ಸ್ವಾಮಿ ಕೃಪೆಯಿಂದ, ಪೂಜ್ಯ ಹೆಗ್ಗಡೆ ದಂಪತಿಗಳ ಆಶೀರ್ವಾದದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಈ ಕಾರ್ಯಕ್ರಮದಿಂದ ನಮ್ಮ ಶಾಲೆಗೆ ಹಾಗೂ ನಮ್ಮ ವಿದ್ಯಾರ್ಥಿಗಳಿಗೆ ವರದಾನವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳದ ಪ್ರಭಾಕರ್‌ರಾಮ್ ನಾಯಕ್, ವಲಯ ಮೇಲ್ವಿಚಾರಕರಾದ ಮಹಂತೇಶ್, ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಎನ್.ವಿ.ನಾಗಮಣಿ,ಸೇವಾಪ್ರತಿನಿಧಿಗಳು,ಶಾಲಾ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
- ಕೆ.ಬಿ.ಚಂದ್ರಚೂಡ