ಚಿಕ್ಕಮಗಳೂರು– ಶ್ರೀ ರೇವಣಸಿದ್ದೇಶ್ವರರು ಗುರುಗಳು ಸರ್ವಧರ್ಮಿಯರಿಗೆ ದೇಗುಲ ನಿರ್ಮಿಸುವ ಮೂಲಕ ಜಾತ್ಯಾತೀತವಾಗಿ ಗುರುತಿಸಿಕೊಂಡಿದ್ದಾರೆ ಎಂದು ಶ್ರೀ ರೇವಣ ಸಿದ್ಧೇಶ್ವರರ ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಹಿರೇನಲ್ಲೂರು ಶಿವು ಹೇಳಿದರು.
ಕಡೂರು ಪಟ್ಟಣದ ಪರವಂಜಿ ವೃತ್ತದಲ್ಲಿ ಜಗದ್ಗುರು ಶ್ರೀ ರೇವಣಸಿದ್ಧೇಶ್ವರರ ಜಯಂತಿ ಪ್ರಯುಕ್ತ ಭಾವಚಿತ್ರಕ್ಕೆ ಗುರುವಾರ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಸಾಮಾಜಿಕ ನ್ಯಾಯದ ಪರಿಕಲ್ಪನೆ ಯಲ್ಲಿ ಆಧ್ಯಾತ್ಮಿಕ ಸಂಘಟನೆ ಮಾಡಿ ಜಾಗೃತಿ ಮೂಡಿಸಿದ ಕಾರ್ಯವನ್ನು ಶ್ಲಾಘಿಸಿದರು.

ಜಿಲ್ಲಾ ಸಂಘದ ಅಧ್ಯಕ್ಷ ಎಸ್ ಬಿ.ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾತ್ವಿಕ ತಳಹದಿಯ ಮೇಲೆ ಧರ್ಮವನ್ನು ಕಟ್ಟಿ ಬೆಳೆಸಿದ ಕೀರ್ತಿ ಜಗದ್ಗುರು ಅವರಿಗೆ ಸಲ್ಲುತ್ತದೆ ಎಂದ ಅವರು ವಸ್ತು ಸ್ಥಿತಿಯ ಸತ್ಯಾಸತ್ಯತೆ ಅರಿಯಬೇಕು ಎಂದರು.
ಹಾಲುಮತ ಧರ್ಮಗುರು ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಲಾ ರ್ಪಣೆ ಮಾಡುವ ಮೂಲಕ ಶ್ರೀ ರೇವಣಸಿದ್ದೇಶ್ವರ ಜಯಂತೋತ್ಸವ ಕಾರ್ಯಕ್ರಮವನ್ನು ಸರೂರು ಮೂಲ ಪೀಠದ ಶ್ರೀ ಶರಭಯ್ಯ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರುಗಳಾದ ಕೃಷ್ಣಮೂರ್ತಿ, ಬಸವರಾಜ್, ಜಿ.ಕೆ.ಕುಮಾರ್ ಮತ್ತಿತರರಿದ್ದರು.
-ಸುರೇಶ್ ಎನ್