ತುಮಕೂರು:ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ ಉತ್ತಮ ಎನ್.ಎಸ್.ಎಸ್. ಘಟಕ ಮತ್ತು ಉತ್ತಮ ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿಯಾಗಿ ವಿದ್ಯೋದಯ ಕಾನೂನು ಕಾಲೇಜಿನ ಡಾ||ಕಿಶೋರ್.ವಿ.ರವರಿಗೆ “ರಾಜ್ಯ ಮಟ್ಟದ ಪ್ರಶಸ್ತಿ”ಯನ್ನು ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಪ್ರಧಾನ ಮಾಡಿದರು.
ರಾಜ್ಯ ಪ್ರಶಸ್ತಿಯಿಂದ ತುಮಕೂರು ಜಿಲ್ಲೆಗೆ ಮತ್ತು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಕೀರ್ತಿ ತರುವಂತಹ ಸಾಧನೆಯನ್ನು ಮಾಡಿದೆ. ರಾಜ್ಯ ಎನ್.ಎಸ್.ಎಸ್.ಕೋಶ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸೋಮವಾರ ರಾಜಭವನದ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ೨೦೨೨-೨೩ನೇ ಸಾಲಿನ ಎನ್.ಎಸ್.ಎಸ್. ರಾಜ್ಯ ಪ್ರಶಸ್ತಿ ಪ್ರಧಾನ ಮಾಡಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ರಾಷ್ಟ್ರೀಯ ಸೇವಾ ಯೋಜನೆ ಎನ್.ಎಸ್.ಎಸ್.ಸೇರ್ಪಡೆಗೊಂಡು ಸಮಾಜ ಸುಧಾರಣಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಕರೆ ನೀಡಿದರು. ಹಾಗೂ ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ರಾಜ್ಯ ಪ್ರಶಸ್ತಿ ವಿಜೇತರ ಕೈಪಿಡಿಯನ್ನು ಬಿಡುಗಡೆ ಮಾಡಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಾರ್ಯದರ್ಶಿ ರಂದೀಪ್.ಡಿ, ಇಲಾಖೆಯ ಆಯುಕ್ತ ಚೇತನ್.ಆರ್ ರಾಜ್ಯ ಎನ್.ಎಸ್.ಎಸ್.ಅಧಿಕಾರಿ ಪ್ರತಾಪ್ ಲಿಂಗಯ್ಯ ಮತ್ತು ಎನ್ ಎಸ್ ಎಸ್ ಪ್ರಾದೇಶಿಕ ನಿರ್ದೇಶಕರಾದ ಡಿ.ಕಾರ್ತಿಗೆಯೇನ್, ಹೆಚ್.ಎಸ್.ರಾಜು,ಪ್ರಾಂಶುಪಾಲರಾದ ಶ್ರೀಮತಿ ಶಮಾಸೈದಿ, ಎನ್.ಎಸ್.ಎಸ್.ಕಾರ್ಯಕ್ರಮ ಅಧಿಕಾರಿಗಳಾದಂತಹ ಡಾ||ಕಿಶೋರ್.ವಿ,ಶ್ರೀಮತಿ ಪುಷ್ಪ,ಮಧುಸೂದನ್ ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಡಾ||ವಿ.ಕಿಶೋರ್ ರವರಿಗೆ ಶ್ರೀ ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.
-ಕೆ.ಬಿ.ಚಂದ್ರಚೂಡ