ಕೊರಟಗೆರೆ :– ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದ ವತಿಯಿಂದ ಕೊರಟಗೆರೆಯ ಕೆ ಎಸ್ ಪ್ರಶಾಂತ್ ರವರಿಗೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕೆ ಎಸ್ ಪ್ರಶಾಂತ್ ರವರ ತಂದೆ ಶ್ರೀನಿವಾಸ್ ಶೆಟ್ಟಿ ರವರು ಶಾಲಾ ಶಿಕ್ಷಕರಾಗಿದ್ದರು, ಪ್ರಶಾಂತ್ ರವರು ಛಾಯಾ ಗ್ರಾಹಕ ವೃತ್ತಿಯನ್ನು 1992 ರಲ್ಲಿ ಪ್ರಾರಂಭಿಸಿ, ಜೊತೆಗೆ ದಿನಪತ್ರಿಕೆಗಳ ವಿತರಕರಾಗಿ ಹಾಗೂ ಫೋಟೋ ಫ್ರೇಮ್ ವರ್ಕ್ ವೃತ್ತಿಗಳನ್ನು ಮಾಡಿಕೊಂಡು ಇದರ ಜೊತೆಗೆ ಕೆಲ ಸಂಘ ಸಂಸ್ಥೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ, ಕೊರಟಗೆರೆಯ ಛಾಯಾ ಗ್ರಾಹಕರ ಸಂಘದಲ್ಲಿ 2013ರಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದ ಖಜಾಂಚಿಯಾಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಗೌರವಾಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡು 33 ವರ್ಷಗಳ ಕಾಲ ಅನುಭವ ಛಾಯಾಗ್ರಾಹಕರಾಗಿದ್ದಾರೆ ಆದ್ದರಿಂದ ಇವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗಿ ಗೌರವಿಸಲಾಗಿದೆ.

ಈ ಸಂದರ್ಭದಲ್ಲಿ ತುಮಕೂರು ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ್, ಛಾಯಾಚಿತ್ರ ಗ್ರಾಹಕರ ಸಂಘದ ರಾಜ್ಯಾಧ್ಯಕ್ಷ ನಾಗೇಶ್, ತುಮಕೂರು ಜಿಲ್ಲಾಧ್ಯಕ್ಷ ಅನಿಲ್ ಕುಮಾರ್, ಕೊರಟಗೆರೆ ತಾಲೂಕು ಅಧ್ಯಕ್ಷ ಕಿರಣ್ ಕುಮಾರ್, ತಾಲೂಕು ಖಜಾಂಚಿ ಮಧು ಸ್ಟುಡಿಯೋ ರವೀಂದ್ರ ಸೇರಿದಂತೆ ಇತರರು ಹಾಜರಿದ್ದರು.
– ಶ್ರೀನಿವಾಸ್ , ಕೊರಟಗೆರೆ