ಮಂಡ್ಯ– ತಾಲೂಕು ಹೊಳಲು ಗ್ರಾಮದ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ಚುನಾವಣೆಯು ಈ ದಿನ ನಡೆಯಿತು.
ಸುಮಾರು 13 ಸದಸ್ಯ ಬಲವಿರುವ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಕೆ.ಅರ್ಪಿತರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಯಾರು ಸಹ ನಾಮಪತ್ರ ಸಲ್ಲಿಸದ ಕಾರಣ ಅಧ್ಯಕ್ಷರಾಗಿ ಸುಧಾರವರನ್ನು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಂ.ಎಸ್.ವೀಣಾ ಕಾರ್ಯನಿವಾಹಣಾಧಿಕಾರಿ ತಾಲೂಕು ಪಂಚಾಯತ್ ಮಂಡ್ಯರವರು ಘೋಷಿಸಿದರು.
ನೂತನ ಅಧ್ಯಕ್ಷರಾಗಿ ಸುಧಾರವರು ಆಯ್ಕೆಯಾಗಿ ಅಭಿನಂದನೆ ಸ್ವೀಕರಿಸಿ, ಮಾತನಾಡಿಮ ಗ್ರಾಮದ ಮುಖಂಡರು ಹಾಗೂ ಪಂಚಾಯತಿಯ ಸರ್ವ ಸದಸ್ಯರ ಸಹಕಾರದಿಂದ ಈ ದಿನ ಒಮ್ಮತದಿಂದ ಆಯ್ಕೆಯಾಗಿದ್ದೇನೆ. ಎಲ್ಲರ ಸಹಕಾರದಿಂದ ಪ್ರಾಮಾಣಿಕವಾಗಿ ಹೊಳಲು ಗ್ರಾಮವನ್ನ ಮಾದರಿ ಗ್ರಾಮವನ್ನಾಗಿ ಮಾಡುತ್ತೇನೆಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರಾದ ಎಚ್.ಎಲ್.ಅಭಿನಂದನ್, ಎಚ್.ಡಿ.ರವಿ, ಉಪಾಧ್ಯಕ್ಷರಾದ ನಾರಾಯಣ, ಪಿಡಿಒ ಸಂತೋಷ್ ಕುಮಾರ್, ಹಾಗೂ ಸರ್ವ ಸದಸ್ಯರುಗಳು, ಮತ್ತು ಗ್ರಾಮದ ಮುಖಂಡರಾದ ನಾರಾಯಣ,ಎಚ್.ಬಿ.ಶಿವಣ್ಣ, ರಾಮಕೃಷ್ಣ, ದೇವರಾಜು, ಎಚ್.ಎಸ್. ಯೋಗೇಶ್ ಕುಮಾರ್, ಜಟ್ಟಿಕುಮಾರ್, ಎಚ್.ಎಸ್.ನಂದೀಶ್, ಸಚ್ಚಿದಾನಂದ, ಎಚ್.ಎಸ್.ಆನಂದ್, ಎಚ್.ಆರ್.ಸುನಿಲ್, ಹಾಗೂ ಗ್ರಾಮಸ್ಥರು , ಸಿಬ್ಬಂದಿ ವರ್ಗದವರು ನೂತನ ಅಧ್ಯಕ್ಷರಿಗೆ ಸನ್ಮಾನಿಸಿ, ಅಭಿನಂದಿಸಿ ಶುಭ ಕೋರಿದರು.
-: ಕೆ.ಪಿ.ಕುಮಾರ್, ಹೊಳಲು.