ಬೇಲೂರು-ಅನಾಥ-ಮಕ್ಕಳಿಗೆ-ಸಹಾನುಭೂತಿ-ತೋರಿದ-ತಹಶೀಲ್ದಾರ್-ಎಂ.ಮಮತಾ-ದಾಖಲೆಗಳಿಲ್ಲದೆ-ಸರ್ಕಾರಿ- ಸೌಲಭ್ಯಗಳಿಂದ-ವಂಚಿತರಾಗಿದ್ದ-ಬಡ-ಮಕ್ಕಳು

ಬೇಲೂರು-ಕಳೆದ ಆರೇಳು ವರ್ಷಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಹೆತ್ತ ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾದ ಇಬ್ಬರು ಮಕ್ಕಳ ಪೋಷಣೆ ಜವಾಬ್ದಾರಿಯನ್ನ ಅತ್ತೆ ಮಾವ ವಹಿಸಿಕೊಂಡಿದ್ದಾದರು ಯಾವುದೇ ದಾಖಲೆಗಳಿಲ್ಲದೆ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತವಾಗಿದ್ದರು. ಈ ಬಗ್ಗೆ ತಹಶೀಲ್ದಾರ್ ರವರ ಗಮನಕ್ಕೆ ತಂದ ಕೆಲವೇ ಘಂಟೆಗಳಲ್ಲಿ ಸ್ಪಂದಿಸಿದ ಅವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಸಹಾನುಭೂತಿ ತೋರಿರುವುದು ನಿಜವಾಗಲೂ ಅತ್ಯುತ್ತಮ ಕಾರ್ಯವಾಗಿದೆ ಎಂದು ಸಂಬಂಧಿಕರು ತಮ್ಮ ಕೃತಜ್ಞತೆಯನ್ನು ಮಾಧ್ಯಮದ ಮೂಲಕ ತೋಡಿಕೊಂಡಿದ್ದಾರೆ.

    ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಕಡೇಗರ್ಜೆ ಗ್ರಾಮದ 13 ವರ್ಷದ ವೈಶಾಂತ್ ಹಾಗು 14 ವರ್ಷದ ವಿನಂತ್ ಎಂಬಿಬ್ಬರು ಚಿಕ್ಕ ವಯಸ್ಸಿನಲ್ಲಿಯೇ ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಕಳೆದುಕೊಂಡ  ದುರದೃಷ್ಟಶಾಲಿಗಳು. ಕಳೆದ ಆರೇಳು ವರ್ಷಗಳ ಹಿಂದೆ ಅನಾರೋಗ್ಯದಿಂದ ಬಳಲಿ ಮರಣ ಹೊಂದ್ದಿದ್ದ ಹೆತ್ತ ತಂದೆ ತಾಯಿಯ ಬಳಿಕ ಇಬ್ಬರು ಮಕ್ಕಳ ಪೋಷಣೆಯ ಜವಾಬ್ದಾರಿಯಯನ್ನು ಅತ್ತೆ ಮಾವಂದಿರು ವಹಿಸಿಕೊಂಡಿದ್ದರು.


ಆದರೆ ಇಬ್ಬರೂ ಮಕ್ಕಳಿಗೂ ದಾಖಲೆಗಳಲ್ಲಿ ಬಹು ಮುಖ್ಯವಾದ ಆಧಾರ್ ಕಾರ್ಡ್ವಿಲ್ಲದೆ ಸರ್ಕಾರದ ಹಲವಾರು ಸೌಲಭ್ಯಗಳಿಂದ ವಂಚಿತರಾಗಿದ್ದಾರು, ಅಲ್ಲದೆ ಹಿರಿಯ ಮಗ ವಿನಂತ್ ಎಂಬುವವರಿಗೆ ಅಂಗ ವೈಕಲ್ಯವಿದ್ದು  ಸರ್ಕಾರದ ಯಾವುದೇ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ, ಅವಿದ್ಯಾವಂತರಾದ ಪೋಷಕರು ಕಳೆದ ಒಂದು ವರ್ಷದಿಂದ ಇಬ್ಬರಿಗೂ ಆಧಾರ್ ಕಾರ್ಡ್ ಮಾಡಿಸಲು ತಾಲೂಕು ಹಾಗೂ ಜಿಲ್ಲೇಯ ವಿವಿಧೆಡೆ ತಿರುಗಾಡಿದರು ಸರಿಯಾದ ಮಾಹಿತಿ ಸಿಗದೇ ಹರಸಾಹಸ ಪಟ್ಟಿದ್ದಾದರು ಸಾಧ್ಯವಾಗಿರಲಿಲ್ಲ.

ಅಂತಿಮವಾಗಿ ಈ ವಿಷಯವನ್ನು ಕಡೇಗರ್ಜೆ ವಿಜಯರಾಜುರವರ ಗಮನಕ್ಕೆ ತಂದಿದ್ದು ಅವರು ಕೂಡಲೇ ತಾಲೂಕಿನ ತಹಸೀಲ್ದಾರ್ ಮಮತಾರವರಿಗೆ ಮಾಹಿತಿ ರವಾನಿಸಿದ್ದಾರೆ. ಅ ಬಳಿಕ ಕೆಲವೇ ಘಂಟೆಗಳಲ್ಲಿ ತಹಶೀಲ್ದಾರ್ ರವರು ನಮ್ಮ ಮನೆಗೆ ಬೇಟಿ ಕೊಟ್ಟು ಇಬ್ಬರು ಮಕ್ಕಳನ್ನು ಖುದ್ದಾಗಿ ಹತ್ತಿರದ ಆಧಾರ್ ಸೇವಾ ಸೆಂಟರ್ ಗೆ ಕರೆದುಕೊಂಡು ಹೋಗಿ ಆಧಾರ್ ಕಾರ್ಡ್ ನೋಂದಣಿ ಮಾಡಿಸಿದ್ದರಲ್ಲೆದೆ ಅಂಗ ವೈಕಲ್ಯದಿಂದ ಬಳಲುತ್ತಿರುವ ಮಗುವಿಗೆ ಸರ್ಕಾರದಿಂದ ದೊರಕುವಂತಹ ಸೌಲಭ್ಯವನ್ನು ಕೊಡಿಸುವುದಾಗಿ ಭರವಸೆ ನೀಡಿದ್ದಾರೆ. ಇಂಥಹ ನಿಷ್ಠಾವಂತ ಸಹಾನುಭೂತಿ ಹೊಂದಿರುವ ಅಧಿಕಾರಿಗಳು ನಮ್ಮ ತಾಲೂಕಿನಲ್ಲಿ ಮಾತ್ರವಲ್ಲದೆ ಬೇರೆ ಬಾಗಗಳಿಲ್ಲಿಯೂ ಇದ್ದರೆ ನಮ್ಮಂತಹ ಬಡ ವರ್ಗದವರಿಗೆ ಅನುಕೂಲವಾಗುತ್ತದೆ ಎಂದು ಮಕ್ಕಳ ಸಂಬಂಧಿ ಭವ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?