ಮೂಡಿಗೆರೆ-ಟೈಲರ್ಸ್ ಸಂಘದ ಕಟ್ಟಡಕ್ಕೆ ನಿವೇಶನ ನೀಡುವಂತೆ ಪ.ಪo.ಅಧ್ಯಕ್ಷರಲ್ಲಿ ಸಂಘದ ಪದಾಧಿಕಾರಿಗಳಿಂದ ಮನವಿ

ಮೂಡಿಗೆರೆ:ಟೈಲರ್ಸ್ ಸಂಘಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ನಿವೇಶನ ಒದಗಿಸಿಕೊಡುವಂತೆ ತಾಲೂಕು ಟೈಲರ್ಸ್ ಸಂಘದ ವತಿಯಿಂದ ಮೂಡಿಗೆರೆ ಪ.ಪಂ.ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್,ಉಪಾಧ್ಯಕ್ಷ ಹೊಸ್ಕೆರೆ ರಮೇಶ್, ಸದಸ್ಯ ಕೆ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಲೂಕಿನಲ್ಲಿ ಬಹಳಷ್ಟು ವೃತ್ತಿಪರ ದರ್ಜಿಗಳಿದ್ದು ಹಲವು ವರ್ಷಗಳ ಹಿಂದೆಯೇ ಟೈಲರ್ ಸಂಘವನ್ನು ಸ್ಥಾಪಿಸಿ ಸಂಘದ ವತಿಯಿoದ ರಾಷ್ಟ್ರೀಯ ಮತ್ತು ನಾಡಹಬ್ಬಗಳನ್ನು ಆಚರಿಸುತ್ತಾ ಬಂದಿರುತ್ತೇವೆ.ಇದಲ್ಲದೆ ಹೊಸತಾಗಿ ವೃತ್ತಿ ಆರಂಭಿಸುವ ಬಡ ಟೈಲರ್‌ಗಳಿಗೆ ಬದುಕು ಕಟ್ಟಿಕೊಳ್ಳಲು ಸಹಾಯವಾಗುವಂತೆ ಸoಘದಿoದ ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಿದ್ದೇವೆ.ಪಟ್ಟಣದಲ್ಲಿ ನಡೆಯುವ ಎಲ್ಲ ಸಾಮಾಜಿಕ,ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಸಂಘದ ಎಲ್ಲ ಸದಸ್ಯರು ಒಟ್ಟಾಗಿ ಪಾಲ್ಗೊಂಡು ಸಹಕಾರ ಸಾಮರಸ್ಯವನ್ನು ಎತ್ತಿಹಿಡಿಯುತ್ತಿದ್ದೇವೆ.ಆದರೆ ಸಂಘಟನೆಗೆ ಸಭೆ ಸೇರುವುದಕ್ಕಾಗಲಿ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗಲಿ ಅಥವಾ ರಾಷ್ಟ್ರೀಯ ಮತ್ತು ನಾಡಹಬ್ಬಗಳನ್ನು ಆಚರಿಸುವುದಕ್ಕಾಗಲಿ ಒಂದು ಸ್ವಂತ ಕಟ್ಟಡವಿಲ್ಲದೆ ಪರದಾಡುವಂತಾಗಿದೆ.

ಸಂಘಟನೆಯಿoದ ಇಲ್ಲಿವರೆಗೂ ಚುನಾಯಿತ ಪ್ರತಿನಿಧಿಗಳ ಬಳಿ ಯಾವುದೇ ಸಹಾಯ ಸವಲತ್ತುಗಳಿಗೂ ಬೇಡಿಕೆಯಿಟ್ಟಿರುವುದಿಲ್ಲ.ಈಗ ಸಂಘಕ್ಕೆ ಸ್ವಂತ ಕಟ್ಟಡದ ಅವಶ್ಯಕತೆಯಿದ್ದು, ಟೈಲರ್ಸ್ ಭವನ ನಿರ್ಮಿಸಲು ಪಟ್ಟಣದಲ್ಲಿ ಒಂದು ನಿವೇಶನ ನೀಡಿ, ಭವನ ನಿರ್ಮಾಣಕ್ಕೆ ಎಲ್ಲ ರೀತಿಯಲ್ಲೂ ಸಹಕರಿಸಲು ಮನವಿ ನೀಡಲಾಯಿತು.

ಮನವಿ ಸಲ್ಲಿಸಿದ ನಂತರ ಪ.ಪಂ.ನೂತನ ಅಧ್ಯಕ್ಷೆ ಗೀತಾ ರಂಜನ್ ಅಜಿತ್ ಕುಮಾರ್,ಉಪಾಧ್ಯಕ್ಷ ಹೊಸ್ಕರೆ ರಮೇಶ್, ಸದಸ್ಯ ಕೆ.ವೆಂಕಟೇಶ್ ಅವರನ್ನು ಸನ್ಮಾನಿಸಲಾಯಿತು.

ಟೈಲರ್ಸ್ ಸಂಘದ ತಾಲೂಕು ಅಧ್ಯಕ್ಷ ಹೆಚ್.ಎಂ.ಶಿವೇಗೌಡ, ಉಪಾದ್ಯಕ್ಷ ಎಂ.ಕೆ. ಷಣ್ಮುಖಾನಂದ, ಪದಾಧಿಕಾರಿಗಳಾದ ನರಸಿಂಹ ಟೈಲರ್, ಗಿರೀಶ್, ಪ್ರದೀಪ್, ಲೋಲಾಕ್ಷಿ,ತೀರ್ಥ,ಸತೀಶ್ ಇದ್ದರು.
.

……………………………. ವಿಜಯ ಕುಮಾರ್.ಟಿ.ಮೂಡಿಗೆರೆ

Leave a Reply

Your email address will not be published. Required fields are marked *

× How can I help you?