ಕೊರಟಗೆರೆ ;- ಮಡಿವಾಳ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು ಸಮಾಜದಲ್ಲಿ ಸಮುದಾಯವು ಮುನ್ನೆಲೆಗೆ ಬರಬೇಕಾದರೆ ನಮ್ಮ ಮಕ್ಕಳು ಕಡ್ಡಾಯವಾಗಿ ವಿದ್ಯಾವಂತಗರಾಗಲೇಬೇಕು ಅದಕ್ಕಾಗಿ ಮಡಿವಾಳ ಯುವ ವೇದಿಕೆಯಿಂದ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡಲಾಗುವುದು ಎಂದು ವೇದಿಕೆಯ ಅಧ್ಯಕ್ಷ ಕಾಂತರಾಜು ತಿಳಿಸಿದರು.
ಅವರು ಪಟ್ಟಣದ ಹೊರವಲಯದ ನವೀನ್‌ಕಂಫರ್ಟ್ ಸಭಾಂಗಣದಲ್ಲಿ ಮಡಿವಾಳ ಯುವ ವೇದಿಕೆ ಮತ್ತು ಮಡಿವಾಳ ಮಲ್ಲಿಗಮ್ಮ ಸೇವಾ ಟ್ರಸ್ಟ್ ವತಿಯಿಂದ ನಡೆದ ಮಡಿವಾಳ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ ಮಡಿವಾಳ ಜನಾಂಗವು ಹಿಂದುಳಿದ ಜನಾಂಗಗಳಲ್ಲಿ ಅತ್ಯಂತ ಹಿಂದೆ ಇರುವ ಸಮುದಾಯವಾಗಿದೆ. ಹಿಂದಿನಿಂದಲೂ ಈ ಸಮುದಾಯವನ್ನು ಸಮಾಜದಲ್ಲಿ ಕೀಳು ಭಾವನೆಯಿಂದ ನೋಡುತ್ತಿದ್ದಾರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಜನಾಂಗಕ್ಕೆ ಸಿಗಬೇಕಿದ್ದ ಪರಿಶಿಷ್ಠ ಜಾತಿಯ ಸ್ಥಾನ ಸಿಗಲಿಲ್ಲ ಆದರ ಹೋರಾಟ ಮುಂದುವರೆಯುತ್ತಿದೆ, ನಮ್ಮ ಸಮುದಾಯಕ್ಕೆ ಸರ್ಕಾರವು ನೀಡುತ್ತಿರುವ ಸವಲತ್ತುಗಳು ಇತರ ಸಮುದಾಯಗಳ ಪಾಲಾಗುತ್ತಿವೆ ಇದರಿಂದ ನಮ್ಮ ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ತೋಂದರೆಯಾಗುತ್ತಿದ್ದು ಆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಯುವ ವೇದಿಕೆ ಸದಾ ದುಡಿಯುತ್ತದೆ ಎಂದರು.

ಮಡಿವಾಳ ಮಲ್ಲಿಗಮ್ಮ ಸೇವಾ ಟ್ರಸ್ಟ್ನ ಕಾರ್ಯದರ್ಶಿ ತೋಳಸಮ್ಮ ಮಾತನಾಡಿ ಈ ಸಮಾಜಕ್ಕೆ ಮಡಿವಾಳ ಜನಾಂಗ ಅನೇಕ ಕೊಡಿಗೆಗಳನ್ನು ನೀಡಿದೆ ಸಮಾಜದ ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸೇವಾ ಟ್ರಸ್ಟ್ ಕೆಲಸ ಮಾಡುತ್ತದೆ ಸರ್ಕಾರವು ಮಡಿವಾಳ ಜನಾಂಗಕ್ಕೆ ಇತರ ಜನಾಂಗಳಿಗೆ ನೀಡಿದಂತೆ ಸೌಲತ್ತುಗಳನ್ನು ನೀಡಬೇಕಿದೆ ಹಾಗೂ ಮಡಿವಾಳ ಜನಾಂಗಕ್ಕೆ ನಿಗಮ ಮಂಡಲಿಯನ್ನು ಮಡಬೇಕಿದೆ ಎಂದರು.
ತಾಲೂಕು ಮಡಿವಾಳ ಸಂಘದ ಗೌರಾವಾದ್ಯಕ್ಷ ಹಾಗೂ ಬಗರ್ ಹುಕ್ಕುಂ ಕಮಿಟಿ ಸದಸ್ಯ ಸಿ.ರಂಗಯ್ಯ ಮಾತನಾಡಿ ಮಡಿವಾಳ ಜನಾಂಗವು ಸಮಾಜದಲ್ಲಿ ಶಕ್ತಿಹೊಂದಬೇಕಾದರೆ ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಸದೃಡರಾಗಬೇಕು, ಆದರೆ ರಾಜಕೀಯವಾಗಿ ಜನಾಂಗವು ಇನ್ನು ಸದೃಡವಾಗಿಲ್ಲ ಹಿಂದುಳಿದ ವರ್ಗದಲ್ಲಿರುವ ಪ್ರಬಲ ಸಮುದಾಯಗಳು ಮಡಿವಾಳ ಜನಾಂಗವನ್ನು ಮುಂದುವರೆಯಲು ಬಿಡುತ್ತಿಲ್ಲಾ ಅದರೂ ಸಹ ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ರವರು ನಮ್ಮ ಸಮುದಾಯಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ, ನನ್ನನ್ನು ಬಗರ್ ಹುಕುಂ ಕಮಿಟಿ ಸದಸ್ಯರನ್ನಾಗಿ ಮಾಡಿದ್ದಾರೆ, ಆದರೂ ರಾಜಕೀಯವಾಗಿ ನಾವಿನ್ನು ಸದೃಡರಾಗಬೇಕಿದೆ ಎಂದರು.

ನಿವೃತ್ತ ಶಿಕ್ಷಕ ಕೃಷ್ಣಪ್ಪ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಜನಾಂಗವು ಕಡು ಬಡತನದಲ್ಲಿದ್ದು ಸಂಕಷ್ಠದಲ್ಲಿದೆ, ನಮ್ಮ ಮೂಲವೃತ್ತಿ ಇಲ್ಲವಾಗುತ್ತಿದೆ ಇದರಿಂದ ಹೊರಬರಬೇಕಾದರೆ ಶಿಕ್ಷಣ ಒಂದೇ ಮಾರ್ಗವಾಗಿದೆ, ನಾವು ಶೈಕ್ಷಣಿಕವಾಗಿ ಪ್ರಗತಿ ಹೊಂದಿದರೆ ಸಮಾಜದಲ್ಲಿ ಮುನ್ನೆಲೆಗೆ ಬರಲಿದ್ದೇವೆ ಸರ್ಕಾರವು ಕೊಡುವ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಮುಂದೆ ಬರಬೇಕಿದೆ ನಮ್ಮ ಮನೆಯಲ್ಲಿ ಏನೆ ಕಷ್ಟವಿರಲಿ ಮೊದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಪ್ರತಿಭಾವಂತರನ್ನಾಗಿ ಮಾಡಿ ಆಗ ಸಮುದಾಯ ಸಧೃಢವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿ ಯಲ್ಲಿ ತೇರ್ಗಡೆಯಾದ 4೦ ಕ್ಕೂ ಹೆಚ್ಚು ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರನ್ನು ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಸಮುದಾಯದ ಗೌರವಾದ್ಯಕ್ಷ ಅಶ್ವತ್ಥಪ್ಪ, ಮಡಿವಾಳ ಮಲ್ಲಿಗಮ್ಮ ಟ್ರಸ್ಟ್ ಅಧ್ಯಕ್ಷೆ ಉಮಾದೇವಿ, ಶಿಕ್ಷಕಿ ವಿಶಾಲಕ್ಷಮ್ಮ, ಯುವ ವೇದಿಕೆಯ ಸತೀಶ್, ನವೀನ್‌ಕುಮಾರ್, ಪಾಂಡುವರ್ದನ್, ಶರತ್, ಮಹೇಶ್, ರಾಜೇಶ್, ಮಂಜುನಾಥ್, ಗಿರೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ – ಶ್ರೀನಿವಾಸ್ ಕೊರಟಗೆರೆ