ತರೀಕೆರೆ-ಆತ್ಮ ಗೌರವಕ್ಕೆ,ಸ್ವಾಭಿಮಾನಕ್ಕೆ ಮತ್ತು ಸಮಾನತೆಗಾಗಿ ನಡೆದಿದ್ದ ಭೀಮಾ ಕೋರೆ ಗಾಂವ್ ಯುದ್ದ-ಪ್ರಾಧ್ಯಾಪಕ ಮಲ್ಲೇನಹಳ್ಳಿ ರಮೇಶ್

ತರೀಕೆರೆ-ಪ್ರಪಂಚದಲ್ಲಿ ಹಲವಾರು ಯುದ್ದಗಳು ನಡೆದಿವೆ ಆದರೆ ಆತ್ಮ ಗೌರವಕ್ಕೆ,ಸ್ವಾಭಿಮಾ ನಕ್ಕೆ ಮತ್ತು ಸಮಾನತೆಗಾಗಿ ನಡೆದಿರುವಂತಹ ಯುದ್ದವೆಂದರೆ ಭೀಮಾ ಕೋರೆಗಾಂವ್ ಯುದ್ದ ಎಂದು ಪ್ರಾಧ್ಯಾಪಕ ಮಲ್ಲೇನಹಳ್ಳಿ ರಮೇಶ್ ಬಣ್ಣಿಸಿದರು.

ಅವರು ತಾಲ್ಲೂಕಿನ ಕಾಮನದುರ್ಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಂತವೇರಿ ಗ್ರಾಮದಲ್ಲಿ ಬುಧವಾರ ಸಂಜೆ ವಿದ್ಯಾನಗರ ಬಡಾವಣೆಯ ಛಲವಾದಿ ಸಮುದಾಯದ ವತಿಯಿಂದ ಆಯೋಜಿಸಿದ್ದ ಭೀಮಾ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.

ಭಾರತದ ಇತಿಹಾಸದಲ್ಲಿ ಮಹಾರಾಷ್ಟ್ರದ ಅಸ್ಪೃಶ್ಯ ಸಮುದಾಯಕ್ಕೆ ಸೇರಿದ್ದ ಮಹಾರ್ ಸಮುದಾಯದ ವಿರುದ್ದ ವೈರುತ್ವ ದಾಖಲು ಮಾಡಲು ಇತಿಹಾಸ ಬರೆಯಲಿಲ್ಲ. ಮನುವಾದಿಗಳು, ಅಸ್ಪೃಶ್ಯರು ಮತ್ತು ಶೂದ್ರರು ಆಯುಧಗಳನ್ನು ಹಿಡಿಯಲು ನಿಷೇಧ ಮಾಡಿದ್ದರು. ಅಂತಹ ಕಾಲಘಟ್ಟದಲ್ಲಿ 1818 ಡಿಸೆಂಬರ್ 31 ರಂದು ಇಂತಹ ವೀರತ್ವದ ಘಟನೆ ನಡೆದಿರುವುದು ಇತಿಹಾಸ ಎಂದರು.

ಶಿವಾಜಿ ನಂತರ ಆಡಳಿತದಲ್ಲಾದ ಬದಲಾವಣೆಗಳಲ್ಲಿ ಅಲ್ಲಿನ ಬ್ರಾಹ್ಮಣ ಪೇಶ್ವೆಗಳು ಮನು ಧರ್ಮ ಶಾಸ್ತ್ರವನ್ನು ಕಟ್ಟುನಿಟ್ಟಾಗಿ ಕಾನೂನು ಜಾರಿಗೊಳಿಸಿ, ಮನುಷ್ಯರನ್ನು ಮನುಷ್ಯರನ್ನಾಗಿ ನೋಡದೆ, ಅದರಲ್ಲೂ ವಿಶೇಷವಾಗಿ ಮಹಾರ್ ಸಮುದಾಯವನ್ನು ಎಷ್ಟು ಹೀನಾಯವಾಗಿ ಶೋಷಣೆ ಮಾಡುತ್ತಿದ್ದರೆಂದರೆ, ಗ್ರಾಮದ ಒಳಗೆ ಅಸ್ಪೃಶ್ಯರು ಬಾರದಂತೆ ತಡೆಯೊಡ್ಡುತ್ತಿದ್ದರು ಎಂದು ವಿಷಾದ ವ್ಯಕ್ತಪಡಿಸಿದರು.

ಅನಿಷ್ಟ ಪದ್ಧತಿಯನ್ನು ಬದಲಾಯಿಸಬೇಕು ಎಂಬುದನ್ನು ಸಿದ್ಧನಾಥ ಎರಡನೇ ಬಾಜಿರಾಯ ಬಳಿ ನಮಗೂ ನಿಮ್ಮ ಹಾಗೆ ಬದುಕಲು ಅವಕಾಶ ಕೊಡಿ ಎಂದು ಅಂಗಲಾಚಿದಾಗ ಬಾಜಿರಾಯ ಒಪ್ಪುವುದಿಲ್ಲ. ಸೈನ್ಯದ ಮುಖಂಡ ಸಿದ್ದನಾಥ ತಮ್ಮ 500 ಮಹಾರ್ ಸೈನಿಕರೊಂದಿಗೆ 28 ಸಾವಿರ ಬಾಜಿರಾಯನ ಸೈನ್ಯದೊಂದಿಗೆ ಹೋರಾಡಿ ವಿಜಯವನ್ನು ಕೊಟ್ಟಿರುವ ಸ್ಥಳ ಭೀಮಾ ನದಿ ತೀರದ ಭೀಮಾ ಕೋರೆಗಾಂವ್ ಗ್ರಾಮದಲ್ಲಿ ಇದ್ದು, ಅಂದಿನಿoದ ಇಲ್ಲಿಯವರೆಗೆ ಬೀಮಾ ಕೋರೆಗಾಂವ್ ವಿಜಯೋತ್ಸವವನ್ನು ಜನವರಿ 1 ರಂದು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.

ಲಂಡನ್‌ನಿoದ ಬಂದು ನಮ್ಮ ಸಮುದಾಯ ಜನ ಆತ್ಮ ಗೌರವಕ್ಕಾಗಿ ಮಾಡಿದ ತ್ಯಾಗ ಮತ್ತು ಬಲಿದಾನದ ಸಂಕೇತ ವಿಜಯೋತ್ಸವ ಸ್ತಂಭ ಎಂದು ಪ್ರತಿ ವರ್ಷ ಕುಟುಂಬ ಸಮೇತರಾಗಿ ಭೀಮಾ ಕೋರೆಗಾಂವ್ ಇರುವ ಸ್ತಂಭಕ್ಕೆ ಭೇಟಿ ನೀಡಿ ಅಲ್ಲಿನ ವೀರರನ್ನು ಸ್ಮರಿಸಿ, ಗೌರವ ಕೊಡುವ ಮೂಲಕ ಇತಿಹಾಸವನ್ನು ಪರಿಚಯ ಮಾಡಿಸಿದ್ದು, ಅಂಬೇಡ್ಕರ್ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಛಲವಾದಿ ಸಮುದಾಯದ ಹಿರಿಯರಾದ ಮರಿಯಪ್ಪ, ಮಂಜುನಾಥ್, ರಾಜು, ಮುಖಂಡರಾದ ಗಂಗಪ್ಪ, ಚನ್ನಪ್ಪ, ಅನಿಲ್ ಸಿ, ನಾಗೇಶ್, ಪ್ರದೀಪ್, ವಿದ್ಯಾನಗರ ಬಾಯ್ಸ್ ಮುಖಂಡರು, ಮಹಿಳೆಯರು, ಮಕ್ಕಳು, ಗ್ರಾಮಸ್ಥರು, ವಿವಿಧ ಸಮುದಾಯಗಳ ಮುಖಂಡರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮಕ್ಕೂ ಮೊದಲು ಗ್ರಾಮದ ಬೈಪಾಸ್ ರಸ್ತೆಯಿಂದ ಪ್ರಮುಖ ಬೀದಿಯಲ್ಲಿ ಜಯ ಘೋಷಗಳನ್ನು ಕೂಗುತ್ತಾ, ಪಟಾಕಿ ಸಿಡಿಸಿ, ಸಿಹಿ ಹಂಚಿ ಮೆರವಣಿಗೆ ಮೂಲಕ ಸಾಮೂಹಿಕವಾಗಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *

× How can I help you?