ಕೊರಟಗೆರೆ-ಎಲ್ಲೆಡೆ-ನೂತನ-ದೇವಾಲಯ ಮತ್ತು ಜೀರ್ಣೋದ್ದಾರ ಕಾರ್ಯಕ್ರಮಗಳು-ನಡೆಯುತ್ತಿರುವುದು-ಸ್ವಾಗತಾರ್ಹ-ವೀರಭದ್ರ ಶಿವಾಚಾರ್ಯ-ಸ್ವಾಮೀಜಿ

ಕೊರಟಗೆರೆ:-ಆಧುನಿಕತೆ ಹೆಚ್ಚಿದಂತೆ ಧಾರ್ಮಿಕ ಆಚರಣಗೆಗಳಿಂದ ಜನ ದೂರಾಗುತ್ತಾರೆ ಎನ್ನುವ ಆತಂಕ ವ್ಯಕ್ತವಾಗುತ್ತಿತ್ತು ಆದರೆ ಇಂದು ಇದಕ್ಕೆ ವ್ಯತಿರಿಕ್ತವಾಗಿ ಎಲ್ಲೆಡೆಯೂ ಧಾರ್ಮಿಕ ಆಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದ್ದು ಎಲ್ಲೆಡೆ ನೂತನ ದೇವಾಲಯ ಮತ್ತು ಜೀರ್ಣೋದ್ದಾರ ಕಾರ್ಯಕ್ರಮಗಳು ನಡೆಯುತ್ತಿರುವುದು ಸ್ವಾಗತಾರ್ಹ ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರಿನ ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರಶಿವಾಚರ‍್ಯ ಸ್ವಾಮೀಜಿ ತಿಳಿಸಿದರು.

ಪಟ್ಟಣದ 1ನೇ ವಾರ್ಡ ನ ಪದವಿ ಕಾಲೇಜಿನ ಹಿಂಬಾದಲ್ಲಿರುವ ವೀರಭದ್ರಸ್ವಾಮಿ ನೂತನ ದೇವಾಲಯ ಮತ್ತು ಪುನರ್ ಪ್ರತಿಷ್ಠಾಪನಾ ಹಾಗೂ ಶಿಖರ ಕಲಶಾರೋಹಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಮೌಲ್ಯ ಮತ್ತು ಹಿನ್ನೆಲೆ ಇರುತ್ತದ್ದೆ ಈ ಹಿನ್ನೆಲೆಯಲ್ಲಿ ನಮ್ಮ ಪೂರ್ವಿಕರು ಇವುಗಳನ್ನು ನಮ್ಮ ಸಮುದಾಯದ ಹಂತದಲ್ಲಿ ಆಚರಣೆಗೆ ತಂದಿದ್ದು ಪ್ರತಿಯೊಂದು ಪ್ರಾಂತ್ಯಸಲದಲ್ಚಲಿ ಆರಣೆಗಳ ಶೈಲಿ ಬದಲಾದರೂ ಸಹ ಮೂಲವಾಗಿ ಎಲ್ಲದರ ಸಾರ ಒಂದೇ ಆಗಿದ್ದು ನಾವುಗಳು ನಮ್ಮ ಮುಂದಿನ ಪೀಳಿಗೆಗೆ ನಮ್ಮ ಆಚಾರ ವಿಚಾರಗಳನ್ನು ತಲುಪಿಸಲು ಧಾರ್ಮಿಕ ಆಚರಣೆಗಳು ಸೇತುವೆಗಳಾಗಿದ್ದು ಇವುಗಳನ್ನು ಶ್ರದ್ಧಾ ಪೂರ್ವಕವಾಗಿ ಆಚರಿಸಬೇಕು ಎಂದು ಹೇಳಿದರು. 

ಧಾರ್ಮಿಕ ಕಾರ್ಯಕ್ರಮದಲ್ಲಿ ಮೈಸೂರಿನ ನಾಗೇಶ ಶರ್ಮ ಮತ್ತು ಪುಟ್ಟವೀರಯ್ಯ ನೇತೃತ್ವದಲ್ಲಿ ಹೋಮ ಮತ್ತು ಯಾಗಗಳನ್ನು ನಡೆಸಲಾಯಿತು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರುಗಳಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ಸದಸ್ಯರುಗಳಾದ ನವೀನ್, ವೀರಭದ್ರಸ್ವಾಮಿ, ಹೇಮಂತ್, ದೊಡ್ಡವೀರಯ್ಯ, ನಾಗರಾಜು,ಬಸವರಾಜು,ಕೊಂಡಪ್ಪ, ಮೂಡ್ಲಯ್ಯ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *

× How can I help you?