ಮದುವೆ ಮನೆಯಲ್ಲಿ ಮೊಳಗಿದ ಪುಸ್ತಕಾಭಿಮಾನ
ತುಮಕೂರು : ಸಾಮಾನ್ಯವಾಗಿ ಮದುವೆ ಮನೆ ಎಂದರೆ ವಧುವರÀರಿಗೆ ಹರಸಿ ಹಾರೈಸಲು ಬಂದ ಬಂಧುಗಳಿಗೆ ಉಟೋಪಾಚಾರದ ಜೊತೆ ತಾಂಬೂಲದೊಂದಿಗೆ ಉಡುಗೊರೆ ನೀಡುವುದು ಸಾಮನ್ಯ ಆದರೆ ಇಲ್ಲೊಬ್ಬ ಪುಸ್ತಕ ಪ್ರೇಮಿ ಗ್ರಂಥಪಾಲಕರೊಬ್ಬರು ತನ್ನ ಮಗಳ ಮದುವೆಗೆ ಬಂದ ಎಲ್ಲಾ ಬಂಧುಗಳಿಗೆ ಪುಸ್ತಕ ವಿತರಿಸುವ ಮೂಲಕ ಪುಸ್ತಕಭಿಮಾನವನ್ನ ವ್ಯಕ್ತಪಡಿಸಿ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದಾರೆ.
ತಾಲೂಕಿನ ಹೆಬ್ಬೂರು ಹೋಬಳಿಯ ಸಿರಿವರ ಗ್ರಾಮದ ಶಿವಮೂರ್ತಿ ಎಂಬುವವರು ಆದೇ ಸಿರಿವರ ಗ್ರಾಮದ ಗ್ರಾಮ ಪಂಚಾಯ್ತಿಯ ಅರಿವು ಕೇಂದ್ರದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಯಿಸುತ್ತಿದ್ದು ತನ್ನ ಮಗಳ ವಿವಾಹವು ಹೆಬ್ಬೂರಿನ ಗಾಯಿತ್ರಿ ಪ್ಯಾಲೆಸ್‌ನಲ್ಲಿ ನಡೆದಿದ್ದು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಬಂಧುಗಳಿಗೂ ತಾವೇ ಸಂಪಾದಿಸಿದ “ಅರಿವಿನೆಡೆಗೆ ಕೆರೆದೊಯ್ಯವ ವಿಶ್ವ ಜ್ಙಾನಿಗಳ ನುಡಿಮುತ್ತುಗಳು” ಎಂಬ ಪುಸ್ತಕವನ್ನ ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ.
ವಿವಾಹ ಕಾರ್ಯಕ್ರಮದಲ್ಲಿ ಗಣ್ಯಾಥಿಗಣ್ಯರು ಸೇರಿದಂತೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆಯಾಗಿ ಪುಸ್ತಕ ವಿತರಣೆಮಾಡಿದ್ದಾರೆ.