ಕೊರಟಗೆರೆ-ಬಂಜಾರ-ಸಮುದಾಯದ-ಅಭಿವೃದ್ಧಿಗೆ-ಸರ್ಕಾರ-ವಿಶೇಷ-ಗಮನಹರಿಸಬೇಕು-ಬಂಜಾರ-ಸೇವಾ-ಸಂಘದ-ತಾಲ್ಲೂಕು- ಅಧ್ಯಕ್ಷ-ಲಕ್ಷ್ಮಣ-ನಾಯ್ಕ-ಒತ್ತಾಯ

ಕೊರಟಗೆರೆ:- ಸರ್ಕಾರ ಒಳ ಮೀಸಲಾತಿ ಅನುಷ್ಠಾನವನ್ನು ಸಮರ್ಪಕವಾಗಿ ಜಾತಿಗಣತಿಯನ್ನು ಮಾಡುವ ಮೂಲಕ ಸರಿಯಾದ ಕ್ರಮದಲ್ಲಿ ಮಾಡಬೇಕು. ಕೊಲಂಬೋ ಸಮುದಾಯಕ್ಕೆ ಅನ್ಯಾಯವಾಗದಂತೆ ಕ್ರಮವಹಿಸಬೇಕು ಎಂದು ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ನಾಯ್ಕ ಒತ್ತಾಯಿಸಿದರು.

ಕೊರಟಗೆರೆಯ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಬಂಜಾರ (ಲಂಬಾಣಿ) ಸೇವಾ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ವಿವಿಧ ಬಂಜಾರ ಸಮುದಾಯದ ಸಮಸ್ಯೆಗಳು, ಅಭಿವೃದ್ಧಿಯ ಪ್ರಗತಿ ಹಾಗೂ ಸರ್ಕಾರದ ನಿರ್ಲಕ್ಷ್ಯತೆಯನ್ನು ಕುರಿತು ಚರ್ಚಿಸಲಾಯಿತು.

ತಾಲೂಕಿನಲ್ಲಿ 23 ಬಂಜಾರ ತಾಂಡಗಳಿದ್ದು, ಇನ್ನೂ ಸೂಕ್ತ ಅಭಿವೃದ್ಧಿಯನ್ನು ಕಂಡಿಲ್ಲ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಮುದಾಯದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ತಾಂಡಗಳಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್, ಆರೋಗ್ಯ ಹಾಗೂ ಶಿಕ್ಷಣದ ಮೂಲ ಸೌಕರ್ಯಗಳನ್ನು ಸರ್ಕಾರ ಒದಗಿಸಬೇಕು ಎಂದು ಸಂಘದ ಪದಾಧಿಕಾರಿಗಳು ಆಗ್ರಹಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ವಿ ಎನ್ ಮೂರ್ತಿ ಮಾತನಾಡಿ, ತಾಲೂಕಿನಲ್ಲಿ 8 ಸೇವಾಲಾಲ್ ಸಮುದಾಯ ಭವನಗಳಿದ್ದು, ಅವುಗಳ ಕಾಮಗಾರಿಗಳು ಅಪೂರ್ಣವಾಗಿದೆ,ಸರ್ಕಾರ ಶೀಘ್ರವಾಗಿ ಈ ಭವನಗಳನ್ನು ಪೂರ್ಣಗೊಳಿಸಿ ಸಮುದಾಯದ ಜನರಿಗೆ ಬಳಸುವ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಂಘದ ಖಜಾಂಚಿ ವಿಜಯಶಂಕರ್ ಬಂಜಾರ ಸಮುದಾಯದ ಅಭಿವೃದ್ಧಿಗೆ ಸರ್ಕಾರದಿಂದ ಇನ್ನಷ್ಟು ಅನುದಾನ ಒದಗಿಸಬೇಕು. ಮೀಸಲಾತಿಯ ಸೌಲಭ್ಯ, ಉಚಿತ ಶಿಕ್ಷಣ, ಉದ್ಯೋಗ ಸೌಲಭ್ಯ, ಆರ್ಥಿಕ ಬೆಂಬಲ, ಹಾಗೂ ಸ್ವ-ಉದ್ಯೋಗ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.

ಬಂಜಾರ ಸಮುದಾಯದ ಒಟ್ಟು ಹಿತಾಸಕ್ತಿಗಾಗಿ ಸರ್ಕಾರ ಸ್ಪಂದಿಸಬೇಕು. ಎಲ್ಲಾ ತಾಂಡಗಳಿಗೆ ಸಮಾನ ಅಭಿವೃದ್ಧಿ ನೀಡುವ ದೃಷ್ಟಿಯಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಬಂಜಾರ ಸೇವಾ ಸಂಘದ ಮುಖಂಡರು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷರಾಗಿ ಮೀಸೆ ಲಕ್ಷ್ಮ ನಾಯ್ಕ, ಕಾರ್ಯಾಧ್ಯಕ್ಷರಾಗಿ ನಾಗ ನಾಯ್ಕ, ಅಧ್ಯಕ್ಷರಾಗಿ ಲಕ್ಷ್ಮಣ್ ನಾಯ್ಕ, ಉಪಾಧ್ಯಕ್ಷರಾಗಿ ಹರೀಶ್ ಬಾಬು, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎನ್ ಮೂರ್ತಿ, ಸಹ ಕಾರ್ಯದರ್ಶಿಯಾಗಿ ಸಿದ್ದೇಶ್, ಖಜಾಂಚಿಯಾಗಿ ವಿಜಯಶಂಕರ್, ತಾಲೂಕು ಸಂಘಟನಾ ಕಾರ್ಯದರ್ಶಿಯಾಗಿ ಲಕ್ಷ್ಮಣ ನಾಯಕ, ತಾಲೂಕು ಸಂಚಾಲಕರಾಗಿ ಲಕ್ಷ್ಮಣ ನಾಯಕ, ಕಸಬಾ ಹೋಬಳಿ ಸಂಘಟನಾ ಕಾರ್ಯದರ್ಶಿಯಾಗಿ ಪುಟ್ಟರಾಜು, ಲಕ್ಷ್ಮಣ ನಾಯ್ಕ, ಯುವ ಸಂಗಡನ ಕಾರ್ಯದರ್ಶಿಯಾಗಿ ಬಾಬು ನಾಯ್ಕ, ಕಸಬಾ ಹೋಬಳಿ ಸಂಚಾಲಕರಾಗಿ ಕೃಷ್ಣನಾಯಕ, ಹೊಳವನಹಳ್ಳಿ ಹೋಬಳಿ ಕಾರ್ಯ ಸಂಚಾಲಕರಾಗಿ ರಂಜಿತ್ ಕುಮಾರ್, ನಿರ್ದೇಶಕರಾಗಿ ಆನಂದ್, ಕೃಷ್ಣ ನಾಯ್ಕ, ಮಾನಸಿಂಗ್ ನಾಯಕ, ಉಮೇಶ್ ಪಿ ಆರ್, ಸೇರಿದಂತೆ ಇತರರು ಇದ್ದರು.

– ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?