ಕೆ.ಆರ್.ಪೇಟೆ- ತಾಲೂಕಿನ ಕೈಗೋನಹಳ್ಳಿಯ ಗ್ರಾಮ ರಕ್ಷಕ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವವು ಇಂದು ಕೆ.ಆರ್. ಪೇಟೆ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು.
ರಂಗದ ಹಬ್ಬದ ಅಂಗವಾಗಿ ಹೇಮಗಿರಿಗೆ ವೀರಭದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಕೊಂಡೊಯ್ದು ನದಿಯಲ್ಲಿ ಪುಣ್ಯ ಸ್ನಾನ ಮಾಡಿಸಿದ ನಂತರ, ಮಾರ್ಗ ಮಧ್ಯದಲ್ಲಿ ಕೆ.ಆರ್.ಪೇಟೆ ಪಟ್ಟಣದಲ್ಲಿ ಮಾಜಿ ಸಚಿವ ನಾರಾಯಣ ಗೌಡರ ಮನೆಗೆ ಉತ್ಸವ ಮೂರ್ತಿಯನ್ನು ಭಕ್ತರು ಕೊಂಡೊಯ್ದರು. ಈ ವೇಳೆ ಮಾಜಿ ಸಚಿವ ನಾರಾಯಣ ಗೌಡ ದಂಪತಿಗಳು ಉತ್ಸವ ಮೂರ್ತಿಯನ್ನು ಭಕ್ತಿ ಪೂರ್ವಕವಾಗಿ ಬರಮಾಡಿಕೊಂಡು ವಿಶೇಷ ಪೂಜೆ ಸಲ್ಲಿಸಿದರು.

ರಾಜ್ಯದ ಮಾಜಿ ಸಚಿವ. ನಾರಾಯಣಗೌಡ ಅವರು ಅಡ್ಡ ಪಲ್ಲಕಿಯನ್ನು ಹೆಗಲ ಮೇಲೆ ಹೊತ್ತು ಭಕ್ತಿಭಾವ ಪ್ರದರ್ಶಿಸಿದರು.
ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ ನೆಮ್ಮದಿಯು ದೊರೆಯುವ ಜೊತೆಗೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕೂಡಾ ದೊರೆಯುತ್ತದೆ ಆದ್ದರಿಂದ ಕೆಲಸಗಳ ಒತ್ತಡದ ಮಧ್ಯದಲ್ಲಿ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ದೇವಾಲಯಗಳಿಗೆ ಹೋಗುವ ಹವ್ಯಾಸವನ್ನು ಜೀವನದಲ್ಲಿ ಬೆಳಸಿಕೊಳ್ಳಬೇಕು. ದೇವರನ್ನು ನಂಬಿದವರನ್ನು ಭಗವಂತನು ಎಂದಿಗೂ ಕೈಬಿಡುವುದಿಲ್ಲ ವಾದ್ದರಿಂದ ಜನರು ಧರ್ಮದ ಮಾರ್ಗದಲ್ಲಿಯೇ ಸಾಗಿ ಗುರಿಮುಟ್ಟಬೇಕು. ಸೇವಾ ಮನೋಭಾವನೆ ಹಾಗೂ ಪರೋಪಕಾರ ಗುಣಗಳು ಜೀವನದ ಉಸಿರಾಗಬೇಕು ಎಂದು ನಾರಾಯಣ ಗೌಡ ಕರೆ ನೀಡಿದರು.

ಅಡ್ಡ ಪಲಕ್ಕಿ ಉತ್ಸವ ಕಾರ್ಯಕ್ರಮದಲ್ಲಿ ಕೈಗೋನಹಳ್ಳಿ ಗ್ರಾಮದ ಮುಖಂಡರು ಹಾಗೂ ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಜಯರಾಮು, ಕುಮಾರ್, ಮುದ್ದೇಗೌಡ, ಪಟೇಲ್ ನಂಜಪ್ಪ, ಯುವ ಮುಖಂಡರಾದ ಲೋಹಿತ್, ಸುನಿಲ್, ಅನಿಲ್, ಮೋದೂರು ಮಂಜು, ದಯಾನಂದ್ , ನಂದೀಶ್, ನಾರಾಯಣಗೌಡರ ಧರ್ಮಪತ್ನಿ ದೇವಕಿ ಸೇರಿದಂತೆ ನೂರಾರು ಗ್ರಾಮಸ್ಥರು ಭಾಗವಹಿಸಿದ್ದರು.
- ಶ್ರೀನಿವಾಸ್ ಆರ್.