ಅರಕಲಗೂಡು-ತಾಲ್ಲೂಕಿನ-ರಾಮನಾಥಪುರ-ಗ್ರಾಮದ-ಮುಸ್ಲಿಂ- ಸಮುದಾಯಕ್ಕೆ-ಮಂಜೂರಾಗಿದ್ದ-ಸ್ಮಶಾನ-ಜಾಗ-ಪರಿಶೀಲನೆ- ನಡೆಸಿದ-ತಹಸೀಲ್ದಾರ್-ಕೆ. ಸಿ. ಸೌಮ್ಯ

ಅರಕಲಗೂಡು – ತಾಲ್ಲೂಕಿನ ರಾಮನಾಥಪುರ ಗ್ರಾಮದ ಮುಸ್ಲಿಂ ಸಮುದಾಯಕ್ಕೆ ಮಂಜೂರಾಗಿದ್ದ ಬಿಳಗುಲಿ ಗ್ರಾಮದ ಸ. ನಂ. 17 ರಲ್ಲಿ ವಿಸ್ತೀರ್ಣ 1-00 ಎಕರೆ ಸ್ಮಶಾನ ಜಾಗದಲ್ಲಿ ಅಂತ್ಯಕ್ರಿಯೆ ಮಾಡಲು ರಸ್ತೆ ಇಲ್ಲದೆ ತೊಂದರೆಯಾಗುತ್ತಿದ್ದರ ಮೇರೆಗೆ ಮುಸ್ಲಿಂ ಜನಾಂಗದವರು ರಸ್ತೆಗೆ ಜಾಗ ಕೋರಿ ತಹಸೀಲ್ದಾರ್ ರವರಿಗೆ ಅರ್ಜಿ ಸಲ್ಲಿಸಿದ್ದು, ಇಂದು ಪರಿಶೀಲನೆ ನಡೆಸಿದರು.

ಈ ವೇಳೆ ತಹಸೀಲ್ದಾರ್ ಕೆ. ಸಿ. ಸೌಮ್ಯ ರವರ ಸೂಚನೆಯಂತೆ ಗ್ರೇಡ್ 2 ತಹಸೀಲ್ದಾರ್ ಆದ ಸಿ. ಸ್ವಾಮಿ ರವರು ಭೇಟಿ ನೀಡಿ ಮಾತನಾಡಿದ ಅವರು, ಸದರಿ ಬಿಳಗುಲಿ ಗ್ರಾಮದ ಸ. ನಂ.17 ರಲ್ಲಿ ಮುಸ್ಲಿಂ ಸಮ್ಮುದಾಯಕ್ಕೆ ಶವಸಂಸ್ಕಾರ ಮಾಡಲು 1-00 ಎಕರೆ ಜಾಗವನ್ನು 2016-2017 ನೇ ಸಾಲಿನಲ್ಲಿ ಮಂಜೂರಾಗಿದ್ದು ಮಂಜೂರಾಗಿರುವ ಪ್ರದೇಶಕ್ಕೆ ದಾರಿ ಅವಶ್ಯಕತೆ. ಇದರಿಂದ ತಾಲ್ಲೂಕು ಮೋಜಿಣಿದಾರಾರಿಂದ ಅಳತೆ ಕಾರ್ಯ ನಡೆಸಿ ಸದರಿ ಪ್ರದೇಶದಲ್ಲಿ ಅಕ್ರಮ ಸಕ್ರಮದಲ್ಲಿ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತಿದ್ದ ಬಿಳಗುಲಿ ಗ್ರಾಮದ ರೈತರ ಮನವೊಲಿಸಿ ಇಂದು ಜೆ. ಸಿ. ಬಿ. ಯಂತ್ರದಿಂದ ರಸ್ತೆ ಕೆಲಸ ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜಶ್ವನಿರೀಕ್ಷಕರಾದ ಬಾಸ್ಕರ್ ತಾಲ್ಲೂಕು ಮೋಜಿಣಿದಾರರಾದ ಅನಂತ್ ಗ್ರಾಮ ಆಡಳಿತ ಅಧಿಕಾರಿ ಕೆ. ಜೆ. ಧರ್ಮೇಶ್ ಹಾಗೂ ರಾಮನಾಥಾಪುರ ಗ್ರಾಮದ ಮುಸ್ಲಿಂ ಮುಖಂಡರು ಹಾಗೂ ಬಿಳಗುಲಿ ಗ್ರಾಮದ ಗ್ರಾಮಸ್ಥರು ಹಾಜರಿದ್ದರು.

  • ಶಿವಕುಮಾರ

Leave a Reply

Your email address will not be published. Required fields are marked *

× How can I help you?