ಕೆ.ಆರ್.ಪೇಟೆ: ತಾಲೂಕಿನ ಶರಣರ ಶ್ರದ್ಧಾ ಕೇಂದ್ರವಾದ ಕಾಪನಹಳ್ಳಿ ಗವಿಮಠದ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಯವರ ಮಹಾ ರಥೋತ್ಸವವು ವಿಜೃಂಭಣೆಯಿAದ ನಡೆಯಿತು.
ಕಾಪನಹಳ್ಳಿ ಗ್ರಾಮದ ಅಧಿದೇವತೆ ಶ್ರೀ ಮಡಿಲಮ್ಮ ದೇವಿಯ ಉತ್ಸವ ಮೂರ್ತಿಯು ಕ್ಷೇತ್ರಕ್ಕೆ ಆಗಮಿಸಿದ ನಂತರ ಮಡಿಲಮ್ಮ ದೇವಿಯ ಸಮ್ಮುಖದಲ್ಲಿ ಶ್ರೀ ಸ್ವತಂತ್ರ ಸಿದ್ಧಲಿಂಗೇಶ್ವರ ಸ್ವಾಮಿಯವರ ಮಹಾ ರಥೋತ್ಸವಕ್ಕೆ ಶಾಸಕ ಹೆಚ್.ಟಿ.ಮಂಜು, ಬೆಂಗಳೂರಿನ ಕೆಂಗೇರಿಯ ಬಂಡೆಮಠದ ಶ್ರೀಸಚ್ಚಿದಾನಂದ ಮಹಾಸ್ವಾಮೀಜಿ ಹಾಗೂ ಕಾಪನಹಳ್ಳಿ ಗವಿಮಠದ ಪೀಠಾಧಿಪತಿಗಳಾದ ಶ್ರೀಸ್ವತಂತ್ರ ಚನ್ನವೀರ ಸ್ವಾಮೀಜಿ, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹಾಗೂ ವಿಠಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಮಾರ್ ಮತ್ತಿತರ ಗಣ್ಯರು ಸಾಂಪ್ರಧಾಯಿಕ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದಲ್ಲಿ ಭಾಗವಹಿಸಿದ್ದ ಶಾಸಕ ಹೆಚ್.ಟಿ.ಮಂಜು ಅವರು ಮಾತನಾಡಿ, ತಾಲ್ಲೂಕಿನ ಬೂಕನಕೆರೆ ಹೋಬಳಿಯ ಕಾಪನಹಳ್ಳಿ ಗವೀಮಠದ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರ ಕ್ಷೇತ್ರವು ನಾಡಿನ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನದೇವರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅವರು ಮುಖ್ಯಮಂತ್ರಿಗಳಾಗಿದ್ದ ವೇಳೆ ಸಾಕಷ್ಟು ಅನುಧಾನ ನೀಡಿ ಕ್ಷೇತ್ರದ ಗತವೈಭವಕ್ಕೆ ಕಾಣಿಕೆ ನೀಡಿದ್ದಾರೆ. ಶ್ರೀ ಕ್ಷೇತ್ರವು ವಿವಿಧತೆಯಲ್ಲಿ ಏಕತೆಯ ಸಂದೇಶ ನೀಡುವ ಶ್ರದ್ಧಾ ಕೇಂದ್ರವಾಗಿದೆ.

ಗವಿಮಠದ ವ್ಯಾಪ್ತಿಯಲ್ಲಿರುವ ವಿಠಲಾಪುರ, ಕಾಪನಹಳ್ಳಿ, ದೊದ್ದನಕಟ್ಟೆ, ನಾಟನಹಳ್ಳಿ, ಬಳ್ಳೇಕೆರೆ, ಅರಳಕುಪ್ಪೆ, ಕಾಳೇಗೌಡನಕೊಪ್ಪಲು, ಯಡಹಳ್ಳಿ, ಮತ್ತಿಘಟ್ಟ ಸೇರಿದಂತೆ 9 ಗ್ರಾಮಗಳ ಸಮಸ್ತ ಭಕ್ತಾಧಿಗಳು ನೂರಾರು ವರ್ಷಗಳಿಂದ ಶ್ರೀ ಕ್ಷೇತ್ರದಲ್ಲಿ ನಡೆಯುವ ಜಾತ್ರೆ, ರಥೋತ್ಸವ, ದಾಸೋಹ ಸೇರಿದಂತೆ ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕೈಜೋಡಿಸಿ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರವುದು ಶ್ಲಾಘನೀಯ ಈ ಸಂಪ್ರದಾಯ ಸದಾ ಹೀಗೆಯೇ ಮುಂದುವರೆಯಲಿ, ಕ್ಷೇತ್ರದ ಅಭಿವೃದ್ಧಿಗೆ ತನು, ಮನ, ಧನ ಅರ್ಪಿಸಿ ಸಡಗರ ಸಂಭ್ರಮದಿAದ ಭಾಗವಹಿಸಬೇಕು ಎಂದು ಆಶಯ ವ್ಯಕ್ತಪಡಿಸಿದರು.
ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಆರ್.ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ ತಾಲ್ಲೂಕಿನ ಮೊದಲ ಸಾಹಿತಿಗಳೂ ಆಗಿರುವ ಪವಾಡ ಪುರುಷ ಶ್ರೀ ಸ್ವತಂತ್ರ ಸಿದ್ದಲಿಂಗೇಶ್ವರರು ತಮ್ಮ ವಚನಗಳ ಮೂಲಕ ಸಾಮಾಜಿಕ ಸಂದೇಶ ನೀಡಿದ್ದಾರೆ. ಜಾತ್ರೆ ಹಾಗೂ ರಥೋತ್ಸವವು ನಮ್ಮ ನೆಲದ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಮೇಲೆ ಬೆಳಕು ಚೆಲ್ಲುವ ಜಾತ್ರೆಯಾಗಿದೆ.
ಗವಿಮಠವು ವೀರಶೈವ ಸಾಂಪ್ರಧಾಯಕ್ಕೆ ಸೇರಿರುವ ಮಠವಾಗಿದ್ದರೂ ಎಲ್ಲಾ ಜಾತಿ ವರ್ಗಗಳ ಸಮುದಾಯಗಳಿಗೆ ಪೂಜೆಗಳು ಹಾಗೂ ಸಾಂಪ್ರದಾಯಕ ವಿಧಿವಿಧಾನಗಳ ಹಕ್ಕನ್ನು ನೀಡಿರುವ ಶ್ರೀಮಠವು ನಮ್ಮ ತಾಲೂಕಿನ ಶರಣ ಶ್ರದ್ಧಾ ಕೇಂದ್ರವಾಗಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ. ನಮಗೆ ಏನೇ ಕಷ್ಟವಾದರೂ ಸರಿಯೇ ನ್ಯಾಯ, ನೀತಿ ಧರ್ಮ ಹಾಗೂ ಸತ್ಯದ ಹಾದಿಯಲ್ಲಿಯೇ ಸಾಗುವ ಮೂಲಕ ದೇವರ ಆಶೀರ್ವಾದಕ್ಕೆ ಪಾತ್ರರಾಗೋಣ ಎಂದು ಹೇಳಿದರು.

ರಥೋತ್ಸವದಲ್ಲಿ ತಾಲೂಕು ವೀರಶೈವ-ಲಿಂಗಾಯಿತ ಮಹಾಸಭಾದ ಅಧ್ಯಕ್ಷ ವಡ್ಡರಹಳ್ಳಿ ಸುಜೇಂದ್ರಕುಮಾರ್, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್, ಮಾಜಿ ನಿರ್ದೇಶಕ ತೋಟಪ್ಪಶೆಟ್ಟಿ, ಬ್ಯಾಂಕ್ ಪರಮೇಶ್, ನಿವೃತ್ತ ಪ್ರಾಂಶುಪಾಲ ಎಸ್.ಬಿ.ಲೋಕೇಶ್, ಚೋಕನಹಳ್ಳಿ ಅಪ್ಪಾಜಿ, ಧಾನಿಗಳಾದ ವಿ.ಡಿ.ಮೋಹನ್, ಶೈಲೇಂದ್ರ, ಆಧಾಯ ತೆರಿಗೆ ಅಧಿಕಾರಿ ಮಂಜುನಾಥ್, ಗ್ರಾ.ಪಂ.ಅಧ್ಯಕ್ಷ ಕುಮಾರ್, ಗ್ರಾ.ಪಂ.ಸದಸ್ಯ ಸುರೇಶ್, ಕೂಡಲಕುಪ್ಪೆ ಹರೀಶ್, ನಿವೃತ್ತ ತಾಲ್ಲೂಕು ಸರ್ವೆ ಅಧಿಕಾರಿ ನಾಟನಹಳ್ಳಿ ದೇವೇಗೌಡ, ಬಿ.ವರದರಾಜೇಗೌಡ, ಬಳ್ಳೇಕೆರೆ ಸುರೇಶ್, ಕೆ.ಆರ್.ಪೇಟೆ ಗಣಪತಿ ದೇವಾಲಯ ಟ್ರಸ್ಟಿನ ಅಧ್ಯಕ್ಷ ಕೆ.ಬಿ.ಚಂದ್ರಶೇಖರ್, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ರವರ ಧರ್ಮಪತ್ನಿನಾಗಮ್ಮ ಪುಟ್ಟರಾಜು, ವಿಜಯ್ ಕುಮಾರ್, ಕಟ್ಟಹಳ್ಳಿ ಪ್ರಕಾಶ್, ಉಪನ್ಯಾಸಕ ಎಸ್.ಚಂದ್ರಶೇಖರ್, ಉಪನ್ಯಾಸಕಿ ರಾಧಾಚಂದ್ರಶೇಖರ್, ಸೇರಿದಂತೆ ವಿಠಲಾಪುರ, ಕಾಪನಹಳ್ಳಿ, ದೊದ್ದನಕಟ್ಟೆ, ನಾಟನಹಳ್ಳಿ, ಬಳ್ಳೇಕೆರೆ, ಅರಳಕುಪ್ಪೆ, ಕಾಳೇಗೌಡನಕೊಪ್ಪಲು, ಯಡಹಳ್ಳಿ, ಮತ್ತಿಘಟ್ಟ ಗ್ರಾಮಗಳ ಭಕ್ತರು ಸೇರಿಂದ ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತಾಧಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
-ಶ್ರೀನಿವಾಸ್ . ಕೆ.ಆರ್.ಪೇಟೆ