ಕೊಟ್ಟಿಗೆಹಾರ- ಉಡುಪಿ ವೈಭವ ಹೋಟೆಲ್ ಹತ್ತಿರ ಭಾರೀ ಗಾತ್ರದ ಗೋದಿ ನಾಗರಹಾವು ಕಾಣಿಸಿಕೊಂಡಿತ್ತು. ವಿಶೇಷವೆಂದರೆ, ಈ ನಾಗರಹಾವು ಸುಡು ಬಿಸಿಲಿನಲ್ಲಿ ಹತ್ತು ಕೋಳಿ ಮೊಟ್ಟೆಗಳನ್ನು ನುಂಗಿದ್ದರಿಂದ ಚಲನೆ ಇಲ್ಲದಂತೆ ಅಸಹಾಯಕರಾಗಿತ್ತು.

ಸ್ಥಳೀಯರು ಇದನ್ನು ಗಮನಿಸಿ ಸ್ನೇಕ್ ಅರೀಫ್ ತಂಡಕ್ಕೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಬಂದ ಸ್ನೇಕ್ ಅರೀಫ್ ತಂಡ, ಎಚ್ಚರಿಕೆಯಿಂದ ಹಾವನ್ನು ಹಿಡಿದು ಸುರಕ್ಷಿತವಾಗಿ ಚಾರ್ಮಾಡಿ ಘಾಟ್‌ಗೆ ಬಿಟ್ಟಿತು.

ಹಾವು ಅತಿಯಾದ ಮೊಟ್ಟೆಗಳನ್ನು ತಿಂದಿದ್ದರಿಂದ ಸಂಚಲನ ಕಡಿಮೆಯಾಗಿ ಸಮಸ್ಯೆಗೆ ಒಳಗಾಗಿತ್ತು. ಇದು ನೋಡಿದ ಸಾರ್ವಜನಿಕರಲ್ಲಿ ಭಯ ಮತ್ತು ಕುತೂಹಲ ಉಂಟುಮಾಡಿತ್ತು. ಆದರೆ, ಸ್ನೇಕ್ ಅರೀಫ್ ತಂಡದ ಸಮಯೋಚಿತ ಕಾರ್ಯದಿಂದ ಹಾವು ಪ್ರಾಣಾಪಾಯದಿಂದ ಪಾರಾಗಿ ತನ್ನ ಸ್ವಾಭಾವಿಕ ವಾಸಸ್ಥಾನಕ್ಕೆ ಮರಳಿತು.

ಸ್ಥಳೀಯರು ಸ್ನೇಕ್ ಅರೀಫ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂಬ ಸಂದೇಶವೂ ಈ ಮೂಲಕ ಹರಡಿದೆ.