ಕೆ.ಆರ್.ಪೇಟೆ: ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಜೈನ್ನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ 12ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದಿಂದ ಸಿಂಗನಹಳ್ಳಿ ಪಿ.ಧರಣೇಶ್ ಪರಶುರಾಮೇಗೌಡ ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ.
ಅದೇ ರೀತಿ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಮುದ್ಲಾಪುರ ಎಂ.ಆರ್.ದೇವರಾಜೇಗೌಡ, ಜೈನ್ನಹಳ್ಳಿ ಜೆ.ಎಸ್.ಲಿಂಗರಾಜೇಗೌಡ, ಕುಂಟೇಗೌಡ, ಜೆ.ಜೆ.ಜಯರಾಮೇಗೌಡ, ಜೆ.ಎಸ್.ರಮೇಶ್, ಬಿಸಿಎಂ.ಎ ಮೀಸಲು ಕ್ಷೇತ್ರದಿಂದ ಹೊಸ ಮುದ್ಲಾಪುರ ಜವರೇಗೌಡ, ಬಿಸಿಎಂ.ಬಿ. ಮೀಸಲು ಕ್ಷೇತ್ರದಿಂದ ಜೈನ್ನಹಳ್ಳಿ ಬೋರೇಗೌಡ, ಮಹಿಳಾ ಮೀಸಲು ಕ್ಷೇತ್ರದಿಂದ ಮುದ್ಲಾಪುರ ಬಿ.ಗೀತಾಮಂಜುನಾಥ್, ಜೈನ್ನಹಳ್ಳಿ ಸುನಂದಮ್ಮಸೋಮೇಗೌಡ, ಪ.ಜಾ ಮೀಸಲು ಕ್ಷೇತ್ರದಿಂದ ಜೈನ್ನಹಳ್ಳಿ ಮಂಜುನಾಥ್, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಸಿಂಗನಹಳ್ಳಿ ಎಸ್.ಜೆ.ಶ್ರೀನಿವಾಸ್ ಅವರುಗಳು ಗೆಲುವು ಸಾಧಿಸಿ ನೂತನ ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿಯಾಗಿ ತಾಲ್ಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಹೆಚ್.ಬಿ.ಭರತ್ ಕುಮಾರ್ ಕಾರ್ಯನಿರ್ವಹಿಸಿದರು. ಸಹ ಚುನಾವಣಾಧಿಕಾರಿಯಾಗಿ ಸಂಘದ ಸಿಇಓ ಭಾನುಮತಿ ಕಾರ್ಯನಿರ್ವಹಣೆ ಮಾಡಿದರು.
ನೂತನ ನಿರ್ದೇಶಕರನ್ನುಜೆಡಿಎಸ್ ಯುವ ಮುಖಂಡರಾದ ಪಿ.ಎಲ್.ಡಿ.ಬ್ಯಾಂಕ್ ಮಾಜಿ ಅಧ್ಯಕ್ಷ ಎ.ಆರ್.ರಘು, ಮುಖಂಡರಾದ ಜೈನಹಳ್ಳಿ ಜೆ.ಎಸ್.ರಾಮಕೃಷ್ಣೇಗೌಡ, ಜೆ.ಪಿ.ಚನ್ನೇಗೌಡ, ಎಸ್.ರಾಜೇಗೌಡ, ಎಸ್.ರಾಮಕೃಷ್ಣೇಗೌಡ, ಶೇಷಾದ್ರಿಗೌಡ, ಜೆ.ಟಿ.ಜಗದೀಶ್, ಮುದ್ಲಾಪುರ ಹರೀಶ್, ಅನಂತ್, ಪುನೀತ್, ಶಿವೇಗೌಡ ಕಮಲಮ್ಮ ಶಿವರಾಮೇಗೌಡ , ದಿನೇಶ್, ಸಿಂಗನಹಳ್ಳಿ ಶಿವರಾಂನಾಯಕ, ಸಿಂಗನಹಳ್ಳಿ ಶಶಿಕುಮಾರ್, ಮತ್ತಿತರರು ಅಭಿನಂದಿಸಿದ್ದಾರೆ.
– ಕೆ.ಬಿ.ಚಂದ್ರಚೂಡ
–