ಕೊರಟಗೆರೆ-ಕಿಡಿಗೇಡಿಗಳ-ಅಟ್ಟಹಾಸಕ್ಕೆ-ಬಡವರ-ಪೆಟ್ಟಿಗೆ-ಅಂಗಡಿ- ಬೆಂಕಿಗೆ-ಹಾವುತಿ

ಕೊರಟಗೆರೆ :– ಕಿಡಿಗೇಡಿಗಳ ಅಟ್ಟಹಾಸಕ್ಕೆ ಬಡವನ ಪೆಟ್ಟಿಗೆ ಅಂಗಡಿ ಸುಟ್ಟು ಬಸ್ಮವಾಗಿ ಸಾವಿರಾರು ರೂಪಾಯಿ ಮೌಲ್ಯದ ದಿನಸಿ ಹಾಗೂ ನಗದು ಸುಟ್ಟು ಬಸ್ಮವಾಗಿರುವ ಘಟನೆ ಕೊರಟಗೆರೆ ವ್ಯಾಪ್ತಿಯಲ್ಲಿ ನಡೆದಿದೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹುಲಿಕುಂಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೌರಗಾನಹಳ್ಳಿ ಕ್ರಾಸ್ ನ ಬಳಿ ಈ ದುರ್ಘಟನೆ ನಡೆದಿದ್ದು, ಯಾರೋ ಕಿಟಗೇಡಿಗಳು ಇಟ್ಟ ಬೆಂಕಿಗೆ ಇದೇ ಗೌರಗಾನಹಳ್ಳಿ ಗ್ರಾಮದ ರಂಗಪ್ಪ ಎಂಬುವರ ಪೆಟ್ಟಿಗೆ ಅಂಗಡಿ ಸುಟ್ಟು ಬಸ್ಮವಾಗಿದ್ದು, ಅದರಲ್ಲಿದ್ದ 60 ಸಾವಿರ ದಿನಸಿ ಸಾಮಾನುಗಳು ಹಾಗೂ 15 ಸಾವಿರ ನಗದು ಸುಟ್ಟು ಬಸ್ಮವಾಗಿದೆ ಎನ್ನಲಾಗಿದೆ.

ಯುಗಾದಿ ಹಬ್ಬದ ಪ್ರಯುಕ್ತ ಎಲ್ಲರೂ ಮನೆಗೆ ಹೋದ ಸಂದರ್ಭದಲ್ಲಿ ಮಧ್ಯರಾತ್ರಿಯಲ್ಲಿ ಅಗ್ನಿ ಅವಘಡ ಸಂಭವಿಸಿರಬಹುದು ಎನ್ನಲಾಗಿದ್ದು, ಒಂದುವರೆ ವರ್ಷದ ಹಿಂದಷ್ಟೇ ಇತ್ತೀಚಿಗೆ ತೆರೆಯಲಾಗಿದ್ದ ಪೆಟ್ಟಿಗೆ ಅಂಗಡಿ ಕಿಡಿಗೇಡಿಗಳ ಕೆಂಗಣ್ಣಿಗೆ ಗುರಿಯಾಗಿ ಅಗ್ನಿಗೆ ಅಹುತಿಯಾಗಿರುವುದು, ಬಡ ಕುಟುಂಬಕ್ಕೆ ತುಂಬಲಾಗದ ನಷ್ಟವಾಗಿದ್ದು, ನಾಷ್ಟ ತುಂಬಲು ಸಂಬಂಧ ಪಟ್ಟಂತ ಇಲಾಖೆಗಳು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡದ್ದಾರೆ.

ಸ್ಥಳೀಯ ನಿವಾಸಿ ಹನುಮಂತರಾಯಪ್ಪ ಮಾತನಾಡಿ, ರಂಗಪ್ಪ ಕಡುಬುಡುವ ಮೂರು ಜನ ಹೆಣ್ಣು ಮಕ್ಕಳನ್ನು ಹಾಗೂ ಕುಟುಂಬ ನಿರ್ವಹಣೆಗೆ ಇದೊಂದೇ ಮಾರ್ಗವಾಗಿದ್ದು, ಪೆಟ್ಟಿಗೆ ಅಂಗಡಿಗೆ ಯುಗಾದಿ ಹಬ್ಬದ ಪ್ರಯುಕ್ತ 60 ಸಾವಿರ ಫೈನಾನ್ಸ್ ನಿಂದ ಹಣ ಪಡೆದು ದಿನಸಿ ಸಾಮಾನುಗಳನ್ನು ಹಾಕಲಾಗಿತ್ತು, ಈಗ ಬೆಂಕಿ ಅವಘಡಕ್ಕೆ ಇಡೀ ಪೆಟ್ಟಿಗೆ ಅಂಗಡಿ ಸುಟ್ಟು ಹೋಗಿರುವುದು ಬಡವನಿಗೆ ತುಂಬಲಾಗದ ನಷ್ಟವಾಗಿದೆ ಎಂದರು.

ಅಂಗಡಿ ಕಳೆದುಕೊಂಡ ವ್ಯಕ್ತಿ ರಂಗಪ್ಪ ಮಾತನಾಡಿ, ಯುಗಾದಿ ಹಬ್ಬದ ಪ್ರಯುಕ್ತ ಫೈನಾನ್ಸಲ್ಲಿ 60,000 ಹಣ ಪಡೆದು ಅಂಗಡಿಗೆ ಬಹಳಷ್ಟು ಸಾಮಾನುಗಳನ್ನು ತರಲಾಗಿತ್ತು, ಯಾರೊ ನನ್ನ ಶತ್ರುಗಳು ಪೆಟ್ಟಿಗೆ ಅಂಗಡಿಗೆ ಬೆಂಕಿ ಇಟ್ಟ ಪರಿಣಾಮ ಬಹಳಷ್ಟು ನಷ್ಟವಾಗಿದೆ, ನನಗೆ ಮುಂದಿನ ದಾರಿ ಕಾಣದಾಗಿದೆ, ದಯಮಾಡಿ ನನಗೆ ಸಂಬಂಧಪಟ್ಟ ಇಲಾಖೆಗಳು ನನಗಾದ ನಷ್ಟವನ್ನು ಬಾರಿಸಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯತಿ ಸದಸ್ಯ ಗೌರಗಾನಹಳ್ಳಿ ಸಿದ್ದೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ಜನತೆ ಜೀವನೋಪಯಕ್ಕಾಗಿ ಯಾವುದಾದರೂ ಒಂದು ವ್ಯವಹಾರ ಮಾಡುವುದು ಸಹಜ, ಅದೇ ಮಾದರಿಯಲ್ಲಿ ಈ ಬಡ ಕುಟುಂಬ , ಸಂಸಾರ ನಿರ್ವಹಣೆಗೆ ಈ ಪಟ್ಟಿಗೆ ಅಂಗಡಿಯನ್ನು ಅವಲಂಬಿಸಿದರು, ಕಿಡಿಗೇಡಿಗಳ ಈ ಕುಚ್ಚೆಸ್ಟೆ ಗೆ ಬಡ ಕುಟುಂಬ ಬಹಳಷ್ಟು ನೊಂದಿದೆ , ಇಲ್ಲಿನ ರಾಜಕಾರಣಿಗಳು ಹಾಗೂ ಸಂಬಂಧಪಟ್ಟಂತ ಇಲಾಖೆ ಅವರಿಗೆ ಆಶ್ರಯ ಆಗಬೇಕು ಗ್ರಾಮ ಪಂಚಾಯಿತಿ ಯಿಂದ ಒಂದಷ್ಟು ಸಹಕಾರ ನೀಡಲಾಗುವುದು ಎಂದರು.

– ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?