ಮಂಡ್ಯ – ಇತ್ತೀಚಿನ ದಿನಗಳಲ್ಲಿ ಸಮಾಜವು ಕಲುಷಿತವಾಗಿದೆ. ಆದರಿಂದ ಸಮಾಜವನ್ನು ತಿದ್ದಿ, ತಿಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮಾಜಿ ಶಾಸಕ ಎಚ್. ಬಿ. ರಾಮು ಹೇಳಿದರು.
ಅವರು ತಾಲೂಕು ಹೊಳಲು ಗ್ರಾಮದ ಶ್ರೀ ವೆಂಕಟೇಶ್ವರ ವಿದ್ಯಾನಿಕೇತನ (ಅಭಿನವ ಭಾರತಿ ಶಿಕ್ಷಣ ಟ್ರಸ್ಟ್ ,ರಿ. ಮಂಡ್ಯ) ಶಾಲೆಯಲ್ಲಿ,
ಶಾಲಾ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಾಜವು ಕಲುಷಿತವಾಗಿದೆ. ಆದರಿಂದ ಸಮಾಜವನ್ನು ಉತ್ತಮ ರೀತಿಯಲ್ಲಿ ತಿದ್ದಿ, ತಿಡುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಆದ್ಯತೆ ನೀಡಿ. ಶಾಲೆಗೆ ಹಾಗೂ ಜಿಲ್ಲೆಗೆ ಕೀರ್ತಿ ತರಬೇಕೆಂದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗ ಸಂಘದ ಮಾಜಿ ಉಪಾಧ್ಯಕ್ಷ ಎಚ್. ಎಲ್. ಶಿವಣ್ಣ ಶಾಲೆಯಲ್ಲಿ (ಎಸ್.ಎಸ್.ಎಲ್ .ಸಿ.) ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಅಭಿನಂದಿಸಿ. ಮಾತನಾಡಿ, ಗ್ರಾಮಾಂತರ ವಿದ್ಯಾರ್ಥಿ ಈ ಶಾಲೆಯಿಂದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಈ ಶಾಲೆಯಿಂದ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉನ್ನತ ಮಟ್ಟದ ಉದ್ಯೋಗದಲ್ಲಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯ ಜೊತೆಯಲ್ಲಿ , ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಒಲವು ಇರಬೇಕು. ಹಾಗೂ ಜಿಲ್ಲೆಯಲ್ಲಿಯೇ ಉತ್ತಮ ಶಿಕ್ಷಣ ಸಂಸ್ಥೆಯಾಗಿದೆ. ಎಂದು ಶಾಲೆಯ ಶಿಕ್ಷಕರನ್ನ ಶ್ಲಾಘಿಸಿದರು.

ಹೊಂಬೆಗೌಡ ರಿಕ್ರಿಯೇಶನ್ ಕ್ಲಬ್, ಶಿಕ್ಷಣ ಟ್ರಸ್ಟ್, ಮಂಡ್ಯ .ವಕೀಲರು ಮತ್ತು ಅಧ್ಯಕ್ಷರು, ಸಿ.ಎಲ್. ಶಿವಕುಮಾರ್ ಮಾತನಾಡಿ, ಮಕ್ಕಳಿಗೆ ಕಾನೂನಿನ ಬಗ್ಗೆ ಹಾಗೂ ಮೊಬೈಲ್ ಗಳ ಬಳಸುವ ಬಗ್ಗೆ ವಿವರವಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರ್ಪಿತ ಶಿವಲಿಂಗೇಗೌಡ, ಉಪಾಧ್ಯಕ್ಷ ನಾರಾಯಣ, ಮುಖಂಡರಾದ ಎಚ್. ಸಿ. ಹರಿಪ್ರಸಾದ್, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಹೆಚ್.ಎನ್. ಶಿವರಾಮು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್. ಜಿ. ನಿಂಗೇಗೌಡ, ಜಿಲ್ಲಾ ಬಿಜೆಪಿ,ಮಹಿಳಾ ಘಟಕದ ಅಧ್ಯಕ್ಷ ಅನುಸೂಯ ಕುಮಾರಸ್ವಾಮಿ, ಕೃಷಿಕ ಸಮಾಜದ ನಿರ್ದೇಶಕರಾದ ಎಚ್. ಎಲ್. ಶಂಕರ್, ರೈತ ಸಂಘದ ಮುಖಂಡರಾದ ರಾಘವ್, ಹಾಗೂ ಶಾಲಾ ಮುಖ್ಯೋಪಾಧ್ಯಾಯ ಸಿ.ಜೆ. ಜವರೇಗೌಡ, ಆಡಳಿತ ಅಧಿಕಾರಿಯಾದ ಸುಮಾ, ಸಂಯೋಜಕ ಶೋಭಾ, ಶಿಕ್ಷಕರಾದ ವೀಣಾ, ಕುಸುಮ, ಪ್ರಸನ್ನ ಕುಮಾರ್, ಹಾಗೂ ಇತರರು ಉಪಸ್ಥಿತರಿದ್ದರು.
-ಕೆ.ಪಿ.ಕುಮಾರ್ ಹೊಳಲು