ತಿಪಟೂರು-ಡಾ||ಡಿ.ವೀರೇಂದ್ರಹೆಗ್ಗಡೆರವರು-ಈ ದೇಶದ ಆಸ್ತಿ-ಅವರ ನಿಸ್ವಾರ್ಥ-ಸೇವೆಯಿಂದ-ಗ್ರಾಮಾಭಿವೃದ್ಧಿ-ಕೇಂದ್ರ ಸಚಿವ-ವಿ.ಸೋಮಣ್ಣ-ಶ್ಲಾಘನೆ


ತಿಪಟೂರು-ನಂಬಿಕೆಗಿಂತ ದೊಡ್ಡದು ಯಾವುದೂ ಇಲ್ಲ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಹಲವಾರು ಕಾರ್ಯಕ್ರಮ ನಡೆಯುತ್ತಿದ್ದೂ ತಮಗೋಸ್ಕರ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಒಂದು ತಾಲ ಕಿಗೆ ಸೀಮಿತವಾಗದೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸ್ತ್ರೀ ಶಕ್ತಿ ಸಂಘಗಳನ್ನು ಸಂಘಟನೆ ಮಾಡಿ ಬಡವರ್ಗದ ಏಳಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಕೇಂದ್ರ ಜಲಶಕ್ತಿ ಮತ್ತು ರಾಜ್ಯ ರೈಲ್ವೆ ಸಚಿವ ವಿ.ಸೋಮಣ್ಣ ಹೇಳಿದರು.

ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ತಿಪಟೂರು ತಾಲ್ಲೋಕು ಬಿದರೆಗುಡಿ ವಲಯದ ಮತ್ತಿಹಳ್ಳಿ ಗ್ರಾಮದಲ್ಲಿ ಸಾಮೂಹಿಕ ಶಿವ ಪಂಚಾಕ್ಷರಿ ಪಠಣ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ನಿಸ್ವಾರ್ಥ ಸೇವೆಯನ್ನು ನಾನು 65 ವರ್ಷದಿಂದ ನಾನು ಕಣ್ಣಾರೆ ಕಂಡಿದ್ದೇನೆ.

ಅವರು ಈ ದೇಶದ ಆಸ್ತಿ, ಒಬ್ಬ ಧರ್ಮಾಧಿಕಾರಿಯಾಗಿ ಯಾರ ಹಿತವನ್ನು ಕಸಿಯದೆ ಇನ್ನೊಬ್ಬರ ಒಳಿತಾಗಿ ತಮ್ಮ ಸಂಸ್ಥೆಯನ್ನೆ ಮೂಡುಪಾಗಿ ಇಟ್ಟಿರುತ್ತಾರೆ. ಈ ದಿನ ತಾವೆಲ್ಲರೂ ತಾಯಂದಿರು ಶಿವಪಂಚಾಕ್ಷರಿ ಪಠಣ ಮಾಡಿ ಭಗವಂತನ ಕೃಪೆಗೆ ಪಾತ್ರರಾಗಿರುತ್ತಿರಿ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಕಾಮಗಾರಿ ನಡೆಸಿ ಕೆರೆಗಳನ್ನು ಪುನಶ್ಚೇತನಗೊಳಿಸುತ್ತಿದ್ದು ಪ್ರಸ್ತುತ ತಿಪಟೂರು ತಾಲ್ಲೋಕಿನ ಮತ್ತಿಹಳ್ಳಿ ಕೆರೆ ಕಾಮಗಾರಿ ಪ್ರಾರಂಭಿಸಲು ಯೋಜನೆ ರೂಪಿಸಿದ್ದು ಮುಂದಿನ ತಯಾರಿಗೆ ಶ್ರೀ ಮಂಜುನಾಥಸ್ವಾಮಿಯ ಕೃಪೆ ಇರಲಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಸೋಮಣ್ಣನವರು ಕೊಡಿ ಚಿಕ್ಕಮ್ಮ ಮತ್ತು ಶ್ರೀ ಲಕ್ಷ್ಮಿ ಸ್ವ ಸಹಾಯ ಸಂಘಕ್ಕೆ 1 ಲಕ್ಷ ಮೊತ್ತದ ಲಾಭಾಂಶ ವಿತರಣೆ ಮತ್ತು ಮಹಾದೇವಮ್ಮರವರಿಗೆ ಜನಮಂಗಳ ಕಾರ್ಯಕ್ರಮದ ವೀಲ್ ಚೇರ್ ವಿತರಣೆ ಮಾಡಿದರು.


ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ಸಿ.ನಾಗೇಶ್,ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಯೋಜನೆಯ ಕಾರ್ಯಕ್ರಮ ಹಾಗೂ ಪೂಜಾ ಕಾರ್ಯಕ್ರಮದ ಮಹತ್ವದ ಬಗ್ಗೆ ಮಾತನಾಡಿದರು ಶ್ರೀ ಪವನ್ ಕುಮಾರ್,ತಹಸೀ ಲ್ದಾರ್ ತಿಪಟೂರ್. ಉದಯ್.ಕೆ ಯೋಜನಾಧಿಕಾರಿಗಳು. ನಂತರ ಧಾರ್ಮಿಕ ಉಪನ್ಯಾಸ ಡಾ. ಸುಮನ.ಟಿ.ಎಂ. ಹಿರಿಯ ಆಯುಷ್ ವೈದ್ಯಾಧಿಕಾರಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕೊನೆಹಳ್ಳಿ,ರವರು ಶಿವರಾತ್ರಿ ಆಚರಣೆ ಮಾಡುವ ಕ್ರಮ, ಶಿವ ಪಂಚಾಕ್ಷರಿ ಪಠಣದ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಜ್ಯೋತಿ ಅಧ್ಯಕ್ಷರು ಗ್ರಾಮ ಪಂಚಾಯತಿ ಅಧ್ಯಕ್ಷರು. ಈ.ಜೆ.ಶಿವರಾಜ್ ಪಿ.ಡಿ.ಓ ಗ್ರಾ.ಪ.ಮತ್ತಿಹಳ್ಳಿ. ಷಡಕ್ಷರಿ ಅರ್ಚಕರು ವಲಯದ ಮೇಲ್ವಿಚಾರಕರು ಅನಿತಾ ಸೇವಾಪ್ರತಿನಿಧಿಗಳು,ಸ್ವ ಸಹಾಯ ಪ್ರಗತಿಬಂದು ಗ್ರಾಮಸ್ಥರು ಭಾಗವಹಿಸಿದ್ದರು.

-ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?