ತುಮಕೂರು:ಕೆಂಪನದೊಡ್ಡೇರಿ ಗ್ರಾಮದಲ್ಲಿ ಧರ್ಮಸ್ಥಳ ಸಂಸ್ಥೆಯಿoದ ಸಿರಿಧಾನ್ಯ ಬೇಸಾಯ ಮತ್ತು ಜೇನು ಕೃಷಿ ಬಗ್ಗೆ ರೈತರಿಗೆ ಮಾಹಿತಿ

ತುಮಕೂರು:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗ್ರಾಮಾಂತರ ಯೋಜನಾ ಕಚೇರಿ ವ್ಯಾಪ್ತಿಯ ಕೋರ ವಲಯದ ಕೆಂಪನದೊಡ್ಡೇರಿ ಗ್ರಾಮದಲ್ಲಿ ಸಿರಿಧಾನ್ಯ ಬೇಸಾಯ ಮತ್ತು ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಶ್ರೀಮತಿ ವರಲಕ್ಷ್ಮಿ ರವರು ಉದ್ಘಾಟಿಸಿದರು.

ಪ್ರಾಸ್ತವಿಕ ಮಾಹಿತಿ ಮತ್ತು ಸಿರಿಧಾನ್ಯ ಬೆಳೆಗಳ ಬಗ್ಗೆ ಕೃಷಿ ಮೇಲ್ವಿಚಾರಕ ರಾಘವೇಂದ್ರ.ಎನ್ ರವರು ಮಾನವನ ಉತ್ತಮ ಆರೋಗ್ಯ ಪಡೆಯಲು ಸಿರಿಧಾನ್ಯ ಬಳಕೆ ಉತ್ತಮ ಮತ್ತು ಸಿರಿಧಾನ್ಯ ಬೆಳೆಗಳಾದ ಹಾರಕ, ನವಣೆ ಕೊರಲೆ,ಬರಗು,ಉದಲು ಬೆಳೆಯುವುದರಿಂದ ನಮ್ಮ ಹಿಂದಿನ ಬೆಳೆಯನ್ನು ಉಳಿಸಿದಂತೆ ಹಾಗೂ ಕಡಿಮೆ ನೀರಿನಲ್ಲಿ ಬೆಳೆಯಬಹುದು ಪ್ರಸ್ತುತ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಇದರಿಂದ ರೋಗ ಮುಕ್ತ ಮತ್ತು ಸರಳ ಜೀವನ ನಡೆಸಲು ಸಾಧ್ಯ ಎಂದು ಬೆಳೆಗಳ ಬೇಸಾಯ ವಿಧಾನ ಮತ್ತು ಕೃಷಿ ಇಲಾಖೆ ಅನುದಾನದ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಜೇನು ಕೃಷಿ ಸಹಾಯಕರಾದ ಜಗದೀಶ್ ರವರು ರೈತನ ಮಿತ್ರ ಎರೆಹುಳು ಹಾಗೂ ಜೇನು ನೋಣ ಆಗಿರುವುದರಿಂದ ರೈತರು ತಮ್ಮ ಕೃಷಿ ಭೂಮಿಯಲ್ಲಿ,ತೋಟಗಳಲ್ಲಿ ಜೇನು ಸಾಕಾಣಿಕೆ ಮಾಡುವುದರಿಂದ ತಮ್ಮ ಹೊಲದಲ್ಲಿರುವ ಬೆಳೆಗಳಿಗೆ ಪರಾಗಸ್ಪರ್ಶ ಆಗುವುದರಿಂದ ಹೆಚ್ಚು ಇಳುವರಿ ಬರುತ್ತದೆ ಮತ್ತು ಜೇನು ತುಪ್ಪದ ಮಾರಾಟದಿಂದ ಆದಾಯವನ್ನು ಗಳಿಸಬಹುದು ಹಾಗೂ ತೋಟಗಾರಿಕೆ ಇಲಾಖೆ ಅನುದಾನದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಸಿದ್ದಲಿಂಗಪ್ಪ,ಶಾನುಬೋಗರಾದ ಆನಂದಮೂರ್ತಿ,ಮೇಲ್ವಿಚಾರಕ ಸೋಮಶೆಟ್ಟಿ,ಗ್ರಾಮದ ಮುಖಂಡರು,ಸೇವಾಪ್ರತಿನಿಧಿ ಶ್ರೀಮತಿ ಶಶಿಕಲಾ,ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘದ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

——––ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?