ತುಮಕೂರು:ಡಾ.ವಿಷ್ಣುಸೇನಾ ಸಮಿತಿ ತುಮಕೂರು ಹಾಗೂ ಸದಾಶಿವನಗರದ ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ 15ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿoದ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಮಾಡಿ ಅನ್ನ ಸಂತರ್ಪಣೆ
ಮಾಡುವುದರ ಮೂಲಕ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಡಾ. ವಿಷ್ಣು ಸೇನಾ ಸಮಿತಿಯ ಜಿಲ್ಲಾಧ್ಯಕ್ಷ ರಾದ ಮೂರ್ತಿ ಎಸ್ ಸಿಂಹ, ಕನ್ನಡಿಗರ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿರುವ ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ ಅವರು ನಮನ್ನು ಆಗಲಿ ಇಂದಿಗೆ 15 ವರ್ಷಗಳೇ ಕಳೆದು ಹೋದವು.ಆದರೆ ಅವರು ಅಭಿನಯದ ಚಿತ್ರಗಳು ಮಾತ್ರ ಅವರನ್ನು ಇಂದಿಗೂ ಜೀವಂತವಾ ಗಿರಿಸಿವೆ.ಇoದು 15ನೇ ಪುಣ್ಯ ಸರಣೆ ಅಂಗವಾಗಿ ರಾಜ್ಯದೆಲ್ಲಡೆ ತಮ ಪ್ರೀತಿಯ ಕರ್ಣನನ್ನ ವಿವಿಧ ರೀತಿಯಲ್ಲಿ ನೆನೆಯುತ್ತಿದ್ದಾರೆ. ರಕ್ತದಾನ ಶಿಬಿರ, ಅನ್ನಸಂಪರ್ಪಣೆ, ಉಚಿತ ವೈದ್ಯಕೀಯ ತಪಾಸಣೆ, ಶಾಲಾ ಮಕ್ಕಳಿಗೆ ಆರ್ಥಿಕ ನೆರವು ಹೀಗೆ ವಿವಿಧ ರೀತಿಯಲ್ಲಿ ತಮ ನೆಚ್ಚಿನ ನಟನನ್ನು ಸ್ಮರಿಸಿ ಪೂಜಿಸುತ್ತಿದ್ದಾರೆ ಎಂದು ತಿಳಿಸಿದರು.
ತುಮಕೂರು ಜಿಲ್ಲಾ ವಿಷ್ಣು ಸೇನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ರಾಮಚಂದ್ರ ರಾವ್(ಚoದ್ರು) ಮಾತನಾಡಿ ಡಾ. ವಿಷ್ಣುವರ್ಧನ್ ಅವರು ಕನ್ನಡದ ಹೆಸರಾಂತ ನಟ, ಇವರು ನಟನಾಗಿ 1872 ರಲ್ಲಿ ಪುಟ್ಟಣ್ಣ ಕಣಗಾಲ್’ ನಿರ್ದೇಶನದ
ನಾಗರಹಾವು ‘ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು.
ವಿಷ್ಣುವರ್ಧನ್ ಕನ್ನಡ ಚಿತ್ರರಂಗದ ಮೊದಲ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು. ಸಾಹಸ ಸಿಂಹ, ಅಭಿನಯ ಭಾರ್ಗವ,ಮೈಸೂರು ರತ್ನ ಎಂದೇ ಹೆಸರಾಗಿದ್ದರು,ಇಂದು ನಟ ಡಾ. ವಿಷ್ಣುವರ್ಧನ್ ಅವರ ಪುಣ್ಯತಿಥಿ ಅವರು ಕನ್ನಡ ಚಿತ್ರರಂಗದಲ್ಲಿ ದಾದಾ ಎಂದೇ ಮೆರೆದಿದ್ದಾರೆ. ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರ ಸ್ಮರಣೆಗಳು ಕನ್ನಡ ಚಿತ್ರರಂಗಕ್ಕೆ ಪ್ರೇರಣೆ ನೀಡಿದ್ದವು. ನಟನೆ ಮತ್ತು ವೈಯಕ್ತಿಕ ಬದುಕಿನ ಸ್ತೋತ್ರ ಪ್ರಪಂಚದ ವರೆಗೂ ಮುಟ್ಟಿದೆ. ಈ ಪುಣ್ಯತಿಥಿ ದಿನದಲ್ಲಿ ಚಿತ್ರರಂಗ ಮತ್ತು ವಿಷ್ಣುವರ್ಧನ್ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರವಿಕುಮಾರ್, ವಿಷ್ಣು ಕುಮಾರ್, ಅನಿಲ್ ಕುಮಾರ್,ಕುಮಾರಣ್ಣ, ಆಂಜನೇಯ, ರಾಕೇಶ್, ಉಮೇಶ್, ವೆಂಕಟೇಶ್, ಶಿವು,ದೀನಿವರ್ಧನ್ , ದರೇಶ್, ವೆಂಕಟೇಶ್, ಇಮ್ರಾನ್ ಅಹಮದ್ ಇನ್ನು ಮುಂತಾದವರು ಉಪಸ್ಥಿತರಿದ್ದರು.
————-—ಕೆ.ಬಿ ಚಂದ್ರಚೂಡ