ತುಮಕೂರು:ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿದರೆ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂಬ ನಂಬಿಕೆಯಿದೆ: ಡಾ.ಜಿ.ಪರ ಮೇಶ್ವರ್

ತುಮಕೂರು:ದೇಶದ ಜನರಲ್ಲಿ ಭಕ್ತಿ ಭಾವನೆ ಉಳಿದಿರುವುದರಿಂದ ಆಧುನಿಕತೆಯಾ ಕಾರಣಕ್ಕೆ ಎಷ್ಟೇ ಬದಲಾವಣೆ ಗಳಾದರೂ ಆಚರಣೆಗಳಿಂದ ನಮ್ಮ ಸಂಸ್ಕೃತಿ, ಸoಪ್ರದಾಯಗಳು ಉಳಿದು ಮುಂದುವರೆದಿವೆ.ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿದರೆ ಜೀವನದಲ್ಲಿ ಬದಲಾವಣೆ ಆಗುತ್ತದೆ ಎಂದು ಅಲ್ಲಿಗೆ ಹೋಗಿಬಂದ ಅನೇಕರು ಹೇಳಿದ್ದಾರೆ.ಈ ನಂಬಿಕೆಯಿoದಲೇ ಶಬರಿಮಲೆ ಕ್ಷೇತ್ರ ವಿಶ್ವವಿಖ್ಯಾತವಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಗೋಕುಲ ಬಡಾವಣೆಯ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ಬಳಗದಿಂದ ಭಾನುವಾರ ಸಂಜೆ ನಡೆದ 30ನೇ ವರ್ಷದ ಅಯ್ಯಪ್ಪ ಸ್ವಾಮಿ ಭಜನಾ ಮಹೋತ್ಸವದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವರಿಗೆ ಈ ವೇಳೆ ಅಯ್ಯಪ್ಪ ಸ್ವಾಮಿ ಭಕ್ತಿ ಬಳಗ ತುಮಕೂರು ದಸರಾ ಹಮ್ಮೀರ ಪ್ರಧಾನ ಮಾಡಿದರು.

ಪ್ರಶಸ್ತಿ ಹಾಗೂ ಬೆಳ್ಳಿ ಖಡ್ಗ ಸ್ವೀಕರಿಸಿ ಸಚಿವರು ಮಾತನಾಡಿ,ಶಬರಿಮಲೆ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಿ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾಪನೆ ಮಾಡಿ, ಶಬರಿಮಲೆಗೆ ಹೋಗಲು ಸಾಧ್ಯವಾಗದವರಿಗೆ ಇಲ್ಲಿಯೇ ಅಯ್ಯಪ್ಪನ ದರ್ಶನದ ವ್ಯವಸ್ಥೆ ಮಾಡಿದ್ದಾರೆ. ಅಯ್ಯಪ್ಪಸ್ವಾಮಿಗೆ ಹೊರದೇಶಗಳಲ್ಲೂ ಭಕ್ತರಿದ್ದಾರೆ. ಅವರೂ ಶಬರಿಮಲೆಗೆ ಬಂದು ದೇವರ ದರ್ಶನ ಮಾಡುತ್ತಾರೆ ಎಂದರು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಮಾತನಾಡಿ, ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ಆಚರಣೆಯಾದ ದಸರಾ ಮಹೋತ್ಸವ ನಾವೆಲ್ಲಾ ಹೆಮ್ಮೆ ಪಡುವಂತಾದ್ದು, ಮುಂದಿನ ದಿನಗಳಲ್ಲೂ ವೈಭವದ ದಸರಾ ಮಹೋತ್ಸವ ಮುಂದುವರೆಯಲಿ ಎಂದು ಆಶಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಯ್ಯಪ್ಪ ಭಕ್ತ ಬಳಗದ ಗೌರವಾಧ್ಯಕ್ಷ ಎಸ್.ಎಲ್.ಆರ್.ಗ್ರೂಪ್ ನ ಮಾಲೀಕರೂ ಪ್ರಥಮ ದರ್ಜೆ ಗುತ್ತಿಗೆದಾರರೂ ಆದ ಅಶೋಕ್, ಅಧ್ಯಕ್ಷ ಪ್ರತಾಪ್ ಮದಕರಿ, ಮೊದಲಾದವರು ಭಾಗವಹಿಸಿದ್ದರು.

——–——-ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?