ತುಮಕೂರು-ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ತೆಹ್ರೀಕ್-ಎ-ಉರ್ದು-ಅದಬ್ ಇವರ ಸಹಯೋಗದೊಂದಿಗೆ ನಗರಕ್ಕೆ ಸಮೀಪದ ಮೆಳೆಕೋಟೆಯ ಧಾನಿಷ್ ಸಭಾಂಗಣದಲ್ಲಿ ಜ.4 ರಂದು ಬೆಳಿಗ್ಗೆ 10 ಗಂಟೆಗೆ ಶೈಕ್ಷಣಿಕ ಮತ್ತು ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾ ಅಧಿಕಾರಿಯವರ ಅಧೀನದಲ್ಲಿರುವ ರಾಷ್ಟ್ರೀಯ ಮತ್ತು ಅಂತ ರಾಷ್ಟ್ರೀಯ ಪ್ರಮಾಣಿಕೃತ ಪ್ರೇರಕರಾದ ಸೈಯದ್ ಸಾದಾದ್ ಪಾಷ ಇವರು 10 ನೇ ತರಗತಿ ಮಕ್ಕಳಿಗಾಗಿ ಪ್ರೇರಣೆ ಅಧಿ ವೇಶನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸಾ ಕಾರ್ಯಕ್ರಮ ಉದ್ಘಾಟಿಸುವರು.ಇಲಾಖೆಯ ಜಿಲ್ಲಾ ಅಧಿಕಾರಿ ಶಬ್ಬೀರ್ ಅಹಮದ್ ಸರ್ಜಾಪುರ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಬ್ದುಲ್ ಖಾದರ್ ಶಾಲಾ ಶಿಕ್ಷಣ ಸಾಕ್ಷರತೆ ಇಲಾಖೆ ಉಪನಿರ್ದೇಶಕ ಮನಮೋಹನ, ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಲೀಮ್ ಉಲ್ಲಾ, ಬಿಇಒ ಹನುಮಂತಪ್ಪ, ಮೌಲನಾ ಆಜಾದ್ ಮಾದರಿ ಪಿಯು ಕಾಲೇಜು ಪ್ರಾಚಾರ್ಯ ಎಸ್.ಎಂ.ಹರೀಶ್, ತೆಹ್ರರಿಕ್ ಉರ್ದು ಅದಾದ್ ಅಧ್ಯಕ್ಷ ತಾಜುದ್ದೀನ್ ಷರೀಪ್, ಕೆಎಂಇಸಿಎ ರಾಜ್ಯ ಸಮಿತಿ ಇಆರ್‌ಒ ಅಬ್ಜಲ್‌ಖಾನ್, ಮತ್ತಿತರರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.