ತುಮಕೂರು:ಕರಿಷ್ಮಾ ಪ್ಯಾಲೇಸ್-ಕಲ್ಯಾಣ ಮಂಟಪ ಲೋಕಾರ್ಪ ಣೆಗೊಳಿಸಿದ ಗೃಹಸಚಿವ ಡಾ,ಜಿ.ಪರಮೇಶ್ವರ್

ತುಮಕೂರು:ತುಮಕೂರು ನಗರದ ರಿಂಗ್ ರಸ್ತೆಯಲ್ಲಿರುವ ಅತ್ಯಂತ ವೈಭವಯುತ,ವಿಶಾಲವಾದ ಕರಿಷ್ಮಾ ಪ್ಯಾಲೇಸ್ ನ್ನು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ,ಜಿ.ಪರಮೇಶ್ವರ್ ರವರು ಲೋಕಾರ್ಪಣೆಗೊಳಿಸಿದರು.

ಉದ್ಘಾಟನೆ ಮಾಡಿ ಮಾತನಾಡಿದ ಡಾ,ಜಿ.ಪರಮೇಶ್ವರ್‌ರವರು ಬಡವರು ಮತ್ತು ಮಧ್ಯಮ ವರ್ಗದವರಿಗೆ ಉಪಯೋಗ ವಾಗುವಂತಹ ಇಂತಹ ಕಲ್ಯಾಣ ಮಂಟಪಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಘಾಟನೆಯಾಗಲಿ.ಅಸ್ಲಾಂಪಾಷಾ ಮತ್ತು ಅವರ ಪುತ್ರರಾದ ಸಯ್ಯದ್ ಹುಸೇನ್ ರವರ ಕಾರ್ಯ ಎಲ್ಲರೂ ಮೆಚ್ಚುವಂತಹದ್ದು.ಬಡವರು ಇಂದು ತಮ್ಮ ಮಕ್ಕಳ ಮದುವೆ ಮಾಡುವುದು ದುಸ್ತರವಾಗಿದೆ.ಲಕ್ಷಾಂತರ ರೂಪಾಯಿ ಬೇಕು.ಕಡಿಮೆ ಬಾಡಿಗೆಯಲ್ಲಿ ಎಲ್ಲರ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಕಲ್ಯಾಣ ಮಂಟಪಗಳು ಸಿಕ್ಕರೆ ಎಲ್ಲರಿಗೂ ಉಪಯೋಗವಾಗಲಿದೆ,ಅದರಲ್ಲೂ ಬಡವರಿಗೆ ಹೆಚ್ಚಿನ ಉಪಯೋಗ ವಾಗಲಿದೆ. ಇಂತಹ ಉತ್ತಮ ಕಾರ್ಯ ಮಾಡಿದ ಅಸ್ಲಾಂಪಾಷಾರವರ ಕುಟುoಬ ಜನ ಮೆಚ್ಚುಗೆಗೆ ಪಾತ್ರವಾಗಿದೆ ಅವರಿಗೆ ಅವರ ಕುಟುಂಬಕ್ಕೆ ಒಳಿತಾಗಲಿ ಎಂದು ಶುಭ ಹಾರೈಸಿದರು.

ಮಾಜಿ ಉಪಮೇಯರ್ ಅಸ್ಲಾಂಪಾಷಾರವರು ಮಾತನಾಡುತ್ತಾ, ಇದು ನನ್ನ ಕನಸಿನ ಯೋಜನೆ,ಬಡವರು ಮತ್ತು ಮಧ್ಯಮ ವರ್ಗದವರನ್ನು ಗುರಿಯಾಗಿಟ್ಟುಕೊಂಡು ಇದನ್ನು ಮಾಡಿದ್ದೇವೆ.ತುಮಕೂರು ನಗರದಲ್ಲಿ ಮದುವೆ ಮಾಡುವವರು ಕನಿಷ್ಠ 3 ಲಕ್ಷ ಕಲ್ಯಾಣ ಮಂಟಪಕ್ಕೆ ಬಾಡಿಗೆ ಕೊಡುತ್ತಿದ್ದರು,ಇದನ್ನು ಮನಗಂಡು ನಾವು ಕಡಿಮೆ ಬಾಡಿಗೆಯಲ್ಲಿ ಅತ್ಯುತ್ತಮ ಸೌಕರ್ಯವುಳ್ಳ ವಿಶಾಲ ಕಲ್ಯಾಣ ಮಂಟಪವನ್ನು ಜನರಿಗೆ ನೀಡುತ್ತಿರುವುದು ನಮಗೆ ಹೆಮ್ಮೆ ತಂದಿದೆ ಎಂದರು.

ಕರಿಷ್ಮಾ ಪ್ಯಾಲೇಸ್ ನ ಮಾಲೀಕರಾದ ಸಯ್ಯದ್ ಹುಸೇನ್ ರವರು ಮಾತನಾಡುತ್ತಾ, ಕರಿಷ್ಮಾ ಪ್ಯಾಲೇಸ್ 3 ಅಂತಸ್ತು ಹೊಂದಿದ್ದು ಮೊದಲನೆ ಮಹಡಿಯಲ್ಲಿ 2 ವಿಭಾಗಗಳ ಬೃಹತ್ ಸಭಾಂಗಣವಿದೆ 1ರಲ್ಲಿ ಗಂಡು ಮತ್ತೊoದರಲ್ಲಿ ಹೆಣ್ಣಿನ ಆರತಕ್ಷತೆ ಮಾಡಬಹುದು. ಇದರಲ್ಲಿ ಸುಮಾರು 300 ಜನ ಕುಳಿತುಕೊಳ್ಳಬಹುದು.2ನೇ ಮಹಡಿಯಲ್ಲಿ ಬೃಹತ್ ಊಟದ ಹಾಲ್ ಇದೆ. ಅಲ್ಲಿ ಒಮ್ಮೆಗೆ 300 ಜನ ಕುಳಿತು ಊಟ ಮಾಡಬಹುದು.3ನೇ ಮಹಡಿಯಲ್ಲಿ 560 ಜನ ಕುಳಿತುಕೊಳ್ಳುವ ಬೃಹತ್ ಸುಸಜ್ಜಿತ ಎಸಿ ಹಾಲ್,ವಿಐಪಿ ಊಟದ ಹಾಲ್ ಇದೆ.ಇದರಲ್ಲಿ ಡಿಜೆ,ಶೌಚಾಲಯ,ಗಂಡು-ಹೆಣ್ಣು ಫೋಟೋ ಶೂಟ್ ರೂಂ,ಧಾರಾಮoಟಪ ಇದೆ. ಈ ಎಲ್ಲಾ ಹಾಲ್ ನಲ್ಲಿ ಹೊಚ್ಚ ಹೊಸ ದರ್ಬಾರ್ ಚೇರುಗಳು,ವಿಐಪಿ ಚೇರುಗಳು,ಸೋಫಾ,ಲಿಫ್ಟ್ ಇತರೆ ಎಲ್ಲಾ ಸೌಕರ್ಯಗಳನ್ನು ಒಳಗೊಂಡಿದೆ.ಒoದು ಮದುವೆಗೆ 1.25 ಲಕ್ಷ ಮಾತ್ರ ಇದರಲ್ಲಿ ಲಿಫ್ಟ್,ಜನರೇಟರ್,ಹಾಲ್,ವಾಹನಗಳ ಪಾರ್ಕಿಂಗ್,ನೀರು,ವಿದ್ಯುತ್,ಎಲ್ಲವೂ ಒಳಗೊಂಡಿದೆ ಎಂಬ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಮಾಜಿ ಶಾಸಕರಾದ ಡಾ||ಎಸ್.ರಫೀಕ್ ಅಹಮದ್,ಅಫ್ತಾಬ್ ಅಹಮದ್,ಶಫಿ ಅಹಮದ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೆಹಬೂಬ್ ಪಾಷಾ,ಮಾಜಿ ಪಾಲಿಕೆ ಸದಸ್ಯರಾದ ಅಫೀಜ್,ಟಿ.ಎಂ.ಮಹೇಶ್(ಮೆಸ್)ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಶ್ರೀಮತಿ ಕೆ.ಎಂ.ಸುಜಾತ,ತೋವಿನಕೆರೆ ಪುಟ್ಟರಾಜು,ಇಕ್ಬಾಲ್ ಅಹಮದ್,ಮುಂತಾದವರು ಉಪಸ್ಥಿತರಿದ್ದರು.ಜಿಲ್ಲೆಯ ಗಣ್ಯರು,ರಾಜಕಾರಣಿಗಳು,ವಿವಿಧ ಸಂಘ-ಸoಸ್ಥೆಗಳ ಪದಾಧಿಕಾರಿಗಳು ಶುಭ ಹಾರೈಸಿದರು.

————–—-ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?