
ತುಮಕೂರು-ಜಿಲ್ಲೆಯಲ್ಲಿ ಎಳನೀರನ್ನು ಅಧಿಕೃತವಾಗಿ 50-60 ರೂಗಳಿಗೆ ಮಾರಾಟ ಮಾಡುತ್ತಿದ್ದು ಆದರೆ ರೈತರಿಂದ ದಲ್ಲಾಳಿಗಳು ಅದೇ ಎಳನೀರನ್ನು 10,12,15 ರೂಗಳಷ್ಟು ಕನಿಷ್ಠ ಬೆಲೆಗೆ ಖರೀದಿ ಮಾಡಿ ದ್ರೋಹ ಎಸಗುತ್ತಿದ್ದು ಈ ಕೂಡಲೇ ಜಿಲ್ಲಾಧಿಕಾರಿಗಳು ಮದ್ಯ ಪ್ರವೇಶಿಸಿ ರೈತರಿಗಾಗುತ್ತಿರುವ ಅನ್ಯಾಯವನ್ನು ಸರಿಪಡಿಸುವಂತೆ ಕರ್ನಾಟಕ ರಾಜ್ಯ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆಯ ಜಿಲ್ಲಾಧ್ಯಕ್ಷರಾದ ಅರುಣ್ ಕುಮಾರ್ ಆಗ್ರಹಿಸಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಂದು ಜಿಲ್ಲಾಧಿಕಾರಿಗಳಿಗೆ ಸಂಘಟನೆಯ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಿ ಮಾತನಾಡಿದ ಅವರು,ಜಿಲ್ಲಾಧಿಕಾರಿಗಳು ರೈತರಿಗೆ ಹೆಚ್ಚಿನ ಬೆಲೆಯನ್ನು ಕೊಡಿಸುವುದರ ಜೊತೆಗೆ ಗ್ರಾಹಕರಿಗೂ ನಿಗದಿತ ಬೆಲೆಯಲ್ಲಿ ಎಳನೀರನ್ನು ವ್ಯಾಪಾರ ಮಾಡುವಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ಹೊರಡಿಸಬೇಕು.ಇದರಿಂದ ರೈತರು ಹಾಗು ಗ್ರಾಹಕರೆರಡು ಜನರಿಗೂ ನ್ಯಾಯ ದೊರೆಯಲಿದೆ ಎಂದು ಅವರು ಮನವಿ ಮಾಡಿಕೊಂಡರು.

ರಾಜ್ಯದಲ್ಲಿ ವ್ಯಾವಹಾರಿಕ ಸ್ಥಳಗಳಲ್ಲಿ ಹಾಕುವ ನಾಮಫಲಕಗಳಲ್ಲಿ ಕನ್ನಡ ಶೇಕಡ 60ಭಾಗ,ಇಂಗ್ಲೀಷ್ 40 ಭಾಗ ಇರಬೇಕೆಂಬ ಸರಕಾರದ ಆದೇಶವಿದ್ದರೂ ತುಮಕೂರಿನಲ್ಲಿ 60 ಇಂಗ್ಲೀಷ್ ಬಳಕೆಯಾಗಿದ್ದು ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯು ಮನವಿ ಸಲ್ಲಿಸಿರುವುದಾಗಿ ಅವರು ಮಾಹಿತಿ ನೀಡಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅರುಣ್ ಕುಮಾರ್, ರಾಜ್ಯಾಧ್ಯಕ್ಷರಾದ ರಾಜು, ರಾಜ್ಯ ಕಾರ್ಯದರ್ಶಿ ಲಕ್ಷ್ಮಿ ರಾಜ್ಯ ಉಪಾಧ್ಯಕ್ಷರಾದ ಮಹದೇವ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಯತೀಶ್,ಯುವ ಜಿಲ್ಲಾಧ್ಯಕ್ಷರಾದ ಕಿರಣ್ ರಾಜ್ಯ ಉಪಾಧ್ಯಕ್ಷರಾದ ಶ್ರೀನಿವಾಸ್, ಜಿಲ್ಲಾ ಕಾರ್ಯದರ್ಶಿ ರೋಷನ್ ಜುಬೇರ್ ಪಾಷಾ ಇದ್ದರು.