ತುಮಕೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.)ದಿಂದ ಜನವರಿ 18 ಮತ್ತು 19 ರಂದು ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆಯಲಿರುವ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಸಾರಿಗೆ ಸಮಿತಿ ಸಭೆಯು ಸಮಿತಿಯ ಅಧ್ಯಕ್ಷ ಟಿ.ಎಸ್.ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಗುರುವಾರ ಪತ್ರಿಕಾ ಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಈ ಸಭೆಯಲ್ಲಿ ಹಾಜರಿದ್ದ ಸಮಿತಿಯ ಉಪಾಧ್ಯಕ್ಷರು,ಪ್ರಧಾನ ಸಂಚಾಲಕರು ಹಾಗೂ ಸಂಚಾಲ ಕರು ಹಲವು ಸಲಹೆಗಳನ್ನು ನೀಡಿ ಸಮ್ಮೇಳನ ಯಶಸ್ವಿಗೆ ಎಲ್ಲರೂ ಒಟ್ಟಾಗಿ ಕೈಜೋಡಿಸು ವುದಾಗಿ ತಿಳಿಸಿದರು.
ಜ.4 ರಂದು ಜಿಲ್ಲಾಧಿಕಾರಿಗಳು ಸಭೆ ಕರೆದಿದ್ದು,ಸಭೆಯ ಬಳಿಕ ಸಾರಿಗೆ ಸಮಿತಿಯ ಕಾರ್ಯ ಯೋಜನೆ ರೂಪಿಸುವ ಬಗ್ಗೆ ಚರ್ಚಿಸಲಾಯಿತು. ರಾಜ್ಯ ಸಂಘದ ಪದಾಧಿಕಾರಿಗಳು,ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಪತ್ರಕರ್ತರು ಹಾಗೂ ಅತಿಥಿಗಳಿಗೆ ಸಾರಿಗೆ ವ್ಯವಸ್ಥೆಯನ್ನು ಯಾವ ರೀತಿ ಮಾಡಬೇಕು, ಹಾಗೂ ಸಮ್ಮೇಳನಕ್ಕೆ ನೊಂದಾಯಿಸಿಕೊoಡಿರುವ ಪತ್ರಕರ್ತರಿಗೆ ನಿಗಧಿಯಾಗಿರುವ ವಸತಿ ಗೃಹಗಳಿಗೆ ತೆರಳಲು ಮತ್ತು ವಸತಿ ಗೃಹದಿಂದ ಸಮ್ಮೇಳನ ನಡೆಯಲಿರುವ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯಕ್ಕೆ ಕರೆ ತರಲು ಸಾರಿಗೆ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದರ ಜೊತೆಗೆ ಪತ್ರಕರ್ತರು ಧಾರ್ಮಿಕ ಕ್ಷೇತ್ರಗಳಾದ ಶ್ರೀ ಸಿದ್ಧಗಂಗಾ ಮಠ, ಕೈದಾಳ, ಪ್ರವಾಸಿ ತಾಣಗಳಾದ ನಾಮದ ಚಿಲುಮೆ, ದೇವರಾಯನದುರ್ಗ, ಬಸದಿ ಬೆಟ್ಟಕ್ಕೆ ಹೋಗಿ ಬರಲು ಸಾರಿಗೆ ವ್ಯವಸ್ಥೆಯನ್ನು ಮಾಡುವ ಕುರಿತು ಚರ್ಚಿಸಲಾಯಿತು. ಒಟ್ಟಾರೆಯಾಗಿ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನ ಯಶಸ್ವಿಯಾಗಿ ನಡೆಯಲು ತಮಗೆ ವಹಿಸಿರುವ ಸಾರಿಗೆ ಸಮಿತಿ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಶ್ರದ್ಧೆಯಿಂದ ಮಾಡಲು ಸಜ್ಜಾಗಿದ್ದಾರೆ.
ಈ ಸಂದರ್ಭದಲ್ಲಿ ಸಮ್ಮೇಳನದ ಸಾರಿಗೆ ಸಮಿತಿ ಅಧ್ಯಕ್ಷ ಟಿ.ಎಸ್.ಕೃಷ್ಣಮೂರ್ತಿ, ಉಪಾಧ್ಯ ಕ್ಷರಾದ ಪಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ಟಿ.ಯೋಗೀಶ್, ಪ್ರಧಾನ ಸಂಚಾಲಕರಾದ ಹಬೀಬ್ ಉರ್ ರೆಹಮಾನ್, ಇಸ್ತಿಯಾಕ್ ಅಹಮದ್, ಮೊಹಮ್ಮದ್ ಅತೀಕ್, ಸಂಚಾಲಕರಾದ
ಕೆ.ಗೋವಿoದರಾಜು, ಕುಣಿಗಲ್ ಶಿವಕುಮಾರ್, ತಿಪಟೂರಿನ ಎ.ಆರ್.ಕುಮಾರಸ್ವಾಮಿ, ಸಿದ್ಧೇಶ್ವರ್, ತುಮಕೂರಿನ ನರಸಿಂಹಮೂರ್ತಿ ಭಾಗವಹಿಸಿದ್ದರು.
———–——-ಕೆ. ಬಿ ಚಂದ್ರಚೂಡ