ತುಮಕೂರು-39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಯಶಸ್ವಿಗೊಳಿ ಸಲು ಮಹಿಳಾ ಪಡೆ ಸನ್ನದ್ಧ-ಕಮಲ ಗಂಗನಮಯ್ಯ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆ

ತುಮಕೂರು:ಕಲ್ಪತರು ನಗರಿಯಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ವನ್ನು ತುಮಕೂರು ಜಿಲ್ಲಾ ಘಟಕ ಆತಿಥ್ಯ ವಹಿಸಿಕೊಂಡು ಯಶಸ್ವಿಗೊಳಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು,ವಿವಿಧ ಸಂಘ ಸoಸ್ಥೆಗಳ ಮಹಿಳೆಯರು ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಮ್ಮೇಳನವನ್ನು ಯಶಸ್ವಿಗೊಳಿಸಲು ಅಣಿಯಾಗಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ,ಮಹಿಳಾ ಸಮಿತಿಯಿಂದ ಸಭೆ ನಡೆಸಲಾಯಿತು.ಮಹಿಳಾ ಸಮಿತಿಯ ಗೌರವ ಅಧ್ಯಕ್ಷರಾದ ಕಮಲ ಗಂಗನಮಯ್ಯ ಬ್ರಹ್ಮ ಕುಮಾರಿಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ಈ ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾಕ್ಟರ್ ಲೀಲಾವತಿಯವರು ಮಾತನಾಡಿ, ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿಯೂ ತನ್ನದೇ ಆದ ಸಾಧನೆಯನ್ನು ಮಾಡಿರುವುದು ಎಲ್ಲರಿಗೂ ತಿಳಿದ ವಿಚಾರ. ಅದೇ ರೀತಿಯಾಗಿ ಪತ್ರಿಕಾ ರಂಗದಲ್ಲೂ ಮಹಿಳೆ ತನ್ನ ಚಾಪನ್ನು ಮೂಡಿಸಿದ್ದು ತನ್ನದೇ ಆದ ಬರಹ ವಿಚಾರವಂತಿಕೆಯನ್ನು ಮೈಗೂಡಿಸಿಕೊಂಡು ಬೆಳೆಯುತ್ತಿರುವುದು ಶ್ಲಾಘನೀಯವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮಹಿಳೆಯರಿಗೂ 39ನೇ ಸಮ್ಮೇಳನದಲ್ಲಿ ವಿವಿಧ ಕೆಲಸ ಕಾರ್ಯಗಳನ್ನು ಹಂಚಿಕೆ ಮಾಡಿ ಗುರುತರವಾದ ಜವಾಬ್ದಾರಿಗಳನ್ನು ನೀಡಿದೆ.

ಈ ನಿಟ್ಟಿನಲ್ಲಿ ನಮ್ಮ ಸಮಿತಿಯ ಎಲ್ಲ ಸದಸ್ಯರು ಕೂಡಾ ಸ್ಮರಣ ಸಂಚಿಕೆಗೆ ಕಥೆ, ಲೇಖನ, ಕವನ ಸೇರಿದಂತೆ ತುಮಕೂರು ಜಿಲ್ಲೆಯಲ್ಲಿ ಪ್ರಸ್ತುತಪಡಿಸುವ ವಿಚಾರಧಾರೆಗಳನ್ನು ನೀಡುವುದಲ್ಲದೆ ಅವುಗಳನ್ನು ತಿದ್ದುವ ಕೆಲಸ ಮಾಡಿದ್ದಾರೆ. ಅಲ್ಲದೆ ಸಮ್ಮೇಳನದಲ್ಲಿ ಪಾಲ್ಗೊಂಡು ವಿವಿಧ ಗೋಷ್ಠಿಗಳನ್ನು ನಡೆಸುವುದರ ಜೊತೆಗೆ ಅನೇಕ ಜವಾಬ್ದಾರಿ ಯುತ ಕೆಲಸ ಕಾರ್ಯಗಳನ್ನು ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಭಾ.ಹಾ. ರಾಮಕುಮಾರಿ ಅವರು ಮಾತನಾಡಿ,ಸಮಾಜ ತಿದ್ದುವಂತಹ ಕೆಲಸ ಮಾಡುವ ಪತ್ರಕರ್ತರು ರಾಜ್ಯಮಟ್ಟದ ಸಮ್ಮೇಳನವನ್ನ ಕಲ್ಪತರು ನಗರಿಯಲ್ಲಿ ನಡೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಪತ್ರಕರ್ತರು ಒಂದೆಡೆ ಸೇರಿ ವಿಚಾರಗಳನ್ನ ಚರ್ಚಿಸಿ ಅವುಗಳಿಗೆ ಪರಿಹಾರ ಮಾರ್ಗೋಪಾಯಗಳನ್ನ ಕಂಡುಕೊಳ್ಳುವ ನಿಟ್ಟಿನಲ್ಲಿ ತುಮಕೂರಿನಲ್ಲಿ ಆಯೋಜನೆ ಮಾಡಿರುವ ರಾಜ್ಯಮಟ್ಟದ 39ನೇ ಪತ್ರಕರ್ತರ ಸಮ್ಮೇಳನ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಚೀನಿ ಪುರುಷೋತ್ತಮ್, ಪ್ರಧಾನ ಕಾರ್ಯದರ್ಶಿ ಟಿ ಈ ರಘುರಾಮ್, ಹಿರಿಯ ಪತ್ರಕರ್ತರಾದ ಮಲ್ಲೇಶ್, ಮಹಿಳಾ ಸಮಿತಿಯ ಅಧ್ಯಕ್ಷರಾದ ನಾಗರತ್ನ ಶಿವಣ್ಣ, ಉಪಾಧ್ಯಕ್ಷರಾದ ಬಿಸಿ ಶೈಲಜಾ ನಾಗರಾಜ್, ಶಿಲ್ಪ,ಡಾ ಲೀಲಾವತಿ, ಪ್ರಧಾನ ಸಂಚಾಲಕರುಗಳಾದ ಮಹಾಲಕ್ಷ್ಮಿ, ಆಶಾ, ಪುಟ್ಟ ತಾಯಿ, ಪದ್ಮಜಾ, ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಉಪನ್ಯಾಸಕರುಗಳಾದ ಡಾ.ಜ್ಯೋತಿ ತಿಮ್ಮೇಗೌಡ, ಎಂ.ಪಿ. ಶ್ವೇತಾ, ಸಂಚಾಲಕರುಗಳಾದ ಶಾಂತ ಪುರುಷೋತ್ತಮ್, ಪಾರ್ವತಮ್ಮ, ಮೀನಾ ಕುಮಾರಿ, ಸುಮಲತಾ ರಂಗರಾಜು, ಕೋಮಲ ಜಯಣ್ಣ, ಭವ್ಯಶ್ರೀ ಹರೀಶ್ ನಾಗವೇಣಿ ಅರ್ಚನಾ ಧನಲಕ್ಷ್ಮಿ ಲಲಿತಮ್ಮ ಸುನಿತಾ ಲಕ್ಷ್ಮಮ್ಮ ಶಿವಮ್ಮ ಲತಾ ಶಾಲಿನಿ ಶೆಟ್ಟಿ, ಶಶಿಕಲಾ, ಅಂಜು, ಚೈತ್ರಾ, ರಾಧಿಕಾ, ಚಿತ್ರಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?