ತುಮಕೂರು-ಹೆಣ್ಣು ಮಕ್ಕಳ ಜಾಗೃತಿ ದಿನಗಳಿವು.ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಮರ್ಥ್ಯವನ್ನು ಬೆಳೆಸಿಕೊಳ್ಳ ಬೇಕಾದ ಅನಿವಾರ್ಯತೆ ಇದೆ.ಶಿಕ್ಷಣ ಇಂದು ಹೆಣ್ಣು ಮಕ್ಕಳು ಜಾಗೃತಿ ವಹಿಸಲು ಸಹಕಾರಿಯಾಗಿದೆ. ಇಂದಿನ ದೌರ್ಜನ್ಯಪೂರಿತ ಸಮಾಜದಲ್ಲಿ ಅತ್ಯಂತ ಎಚ್ಚರಿಕೆಯಿದ ಬಾಳಬೇಕಿದೆ. ಆದರ್ಶಗಳನ್ನು ಇಟ್ಟುಕೊಂಡು ಗುರಿ ತಲುಪಲು ಶ್ರಮವಹಿಸಬೇಕು. ಹದಿಹರೆಯ, ಸವಾಲಿನ ಕಾಲಘಟ್ಟ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಸಕಾರಾತ್ಮ ಕವಾಗಿ ಆಲೋಚಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಲೇಖಕಿ ಸುಶೀಲಾ ಸದಾಶಿವಯ್ಯ ಸಲಹೆ ನೀಡಿದರು.
ಅವರು ಜಿಲ್ಲಾ ಮಹಿಳಾ ಸಂಘಟನೆ, ನಗರದ ಅನನ್ಯ ಕಾಲೇಜಿನಲ್ಲಿ ಏರ್ಪಡಿಸಿದ್ದ ಮಹಿಳಾ ಜಾಗೃತಿ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಮಹಿಳಾ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷೆಯಾದ ಲೇಖಕಿ ಡಾ. ಬಿ.ಸಿ. ಶೈಲಾನಾಗರಾಜ್ ಮಾತನಾಡಿ ,ಹೆಣ್ಣನ್ನು ಶತಮಾನಗಳ ಕಾಲ ಅಕ್ಷರ ವಂಚಿತಳನ್ನಾಗಿ ಮಾಡಿ ಆ ಮೂಲಕ ಜ್ಞಾನ ಹಾಗೂ ಪ್ರತಿಭಾ ಕ್ಷೇತ್ರವನ್ನು ಪುರುಷ ವ್ಯವಸ್ಥೆ ತನ್ನ ಹಿಡಿತದಲ್ಲಿ ಇಟ್ಟುಕೊಂದಿತ್ತು.
ಈ ದಿನಗಳಲ್ಲಿ ಹೆಣ್ಣುಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಪುರುಷರಿಗಿಂತ ಮುಂದಿದ್ದು,ಇದು ಸಾಧನೆಯ ಹಾದಿಯಲ್ಲಿರುವ ಬಹುದೊಡ್ಡ ಸಂಘಟಿತ ಹೋರಾಟವಾಗಿದೆ. ತಮ್ಮ ಮೇಲಿನ ದೌರ್ಜನ್ಯಗಳನ್ನು ಮೆಟ್ಟಿನಿಂತು ಸಮಾನತೆಯಿಂದ ಬದುಕು ರೂಪಿಸಿಕೊಳ್ಳುತ್ತಿದ್ದಾರೆ. ಹೆಣ್ಣುಮಕ್ಕಳು ಎಲ್ಲ ಕ್ಷೇತ್ರಗಳಲ್ಲೂ ದಾಪುಗಾಲಿಟ್ಟು ತನ್ನ ಛಾಪನ್ನು ಬೀರುತ್ತಿದ್ದಾರೆ. ಕೀಳರಿಮೆಯನ್ನು ದಾಟಿ ಮುನ್ನೆಡೆಯುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ವಿಶ್ವಾಸ್, ಸಂಘಟನೆಯ ಸoಚಾಲಕರಾದ ನಾಗರತ್ನಈಶ್ವರಯ್ಯ,ಲಕ್ಷ್ಮಿ ದೇವಮ್ಮ, ಶಾಂತಕುಮಾರಿ, ಪ್ರಮೀಳಾ, ಶೈಲಜಾಮಂಜುನಾಥ್, ಸರ್ವಮಂಗಳ, ಚoದ್ರಕಲ, ವಿಜಯಲಕ್ಷ್ಮಿ, ದೊಂಬರನಹಳ್ಳಿ ನಾಗರಾಜ್ ಮತ್ತು ಕಾಲೇಜಿನ ಉಪನ್ಯಾಸಕವೃಂದ ಉಪಸ್ಥಿತರಿದ್ದರು.
ಸರಳ ಮತ್ತು ಸಂಗಡಿಗರು ಮಹಿಳಾ ಗೀತೆಗಳನ್ನು ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಅನಂತಲಕ್ಷಿö್ಮ ಸ್ವಾಗತಿಸಿದರು. ಲೇಖಕಿ ನಿರ್ಮಲ ಗೂಲಹರವೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.