ತುಮಕೂರು:ಪತ್ರಕರ್ತರ ರಾಜ್ಯ ಸಮ್ಮೇಳನ ಸಾಂಸ್ಕೃತಿಕವಾಗಿ ಯಶಸ್ವಿಯಾಗಲಿ-ಪತ್ರಿಕಾ ಭವನದಲ್ಲಿ ಸಾಂಸ್ಕೃತಿಕ ಸಮಿತಿ ಸಭೆ

ತುಮಕೂರು:ಕಲ್ಪತರು ನಾಡು ಶೈಕ್ಷಣಿಕ ಬೀಡು,ತುಮಕೂರು ಜಿಲ್ಲೆಯ ತನ್ನದೇ ಆದ ಐತಿಹ್ಯವನ್ನು ಹೊಂದಿದ್ದು ಸಾಹಿತ್ಯ,ಕಲೆ,ಸಂಸ್ಕೃತಿ ರoಗಭೂಮಿಯಲ್ಲೂ ಎಲ್ಲೆಡೆಯು ತನ್ನ ಚಾಪು ಮೂಡಿಸಿದೆ. ಇದಕ್ಕೆ ಪೂರಕವೆಂಬoತೆ ಕಲ್ಪತರು ನಾಡಿನಲ್ಲಿ ಜನವರಿ 18 ಮತ್ತು 19ರಂದು ನಡೆಯಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ತುಮಕೂರು ಜಿಲ್ಲೆಯ ವಿವಿಧ ಸಾಂಸ್ಕೃತಿಕ ಕಲೆ ಮತ್ತು ನೆಲಗಟ್ಟನ್ನು ರಾಜ್ಯದ ಪತ್ರಕರ್ತರಿಗೆ ಉಣಬಡಿಸಿ ಸಾಂಸ್ಕೃತಿಕವಾಗಿ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷ ಚಿನಿ.ಪುರುಷೋತ್ತಮ ಅವರು ತಿಳಿಸಿದರು.

ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಬಳಿ ಇರುವ ಪತ್ರಿಕಾ ಭವನದಲ್ಲಿ ರಾಜ್ಯಮಟ್ಟದ ಪತ್ರಕ ರ್ತರ ಸಮ್ಮೇಳನ ಕುರಿತಾಗಿ ಸಾಂಸ್ಕೃತಿಕ ಸಮಿತಿ ವತಿಯಿಂದ ನಡೆದ ಸಭೆಯಲ್ಲಿ ಭಾಗಿಯಾಗಿ ಮಾತನಾಡಿ, ರಾಜ್ಯದ ವಿವಿಧ ಮೂಲೆಗಳಿಂದ ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಪರಂಪ ರೆಗಳನ್ನು ಅರಿತ ಪತ್ರಿಕಾ ಬಂಧುಗಳು ಆಗಮಿಸುತ್ತಿದ್ದಾರೆ. ಸಮ್ಮೇಳನದಲ್ಲಿ ವಿವಿಧ ವಿಚಾರ ಗೋಷ್ಠಿಗಳು ಸೇರಿದಂತೆ ಇತರೆ ಕಾರ್ಯಕ್ರಮಗಳು ನಡೆಯಲಿವೆ.ಇದರ ನಡುವೆ ಸಮ್ಮೇಳನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಬಹು ಮುಖ್ಯವಾಗಿದ್ದು ಮೆರುಗು ನೀಡುವ ಕಾರ್ಯಕ್ರಮ ಗಳಾಗಿವೆ.

ಈ ಸಮ್ಮೇಳನದಲ್ಲಿ ಖ್ಯಾತ ಹಾಡುಗಾರ್ತಿ ಶಮಿತಾ ಮಲ್ನಾಡ್ ಅವರಿಂದ ಸುಗಮ ಸಂಗೀತ ಕಾರ್ಯಕ್ರಮವಿದ್ದು, ಗೀತ ಗಾಯನ, ಹಾಡುಗಾರಿಕೆ ನೃತ್ಯ, ಕಲಾ ಪ್ರಕಾರ, ರಂಗಗೀತೆ ಕಾರ್ಯಕ್ರಮಗಳನ್ನು ಏರ್ಪಡಿಸಿ ಸಮ್ಮೇಳನವನ್ನ ಸಾಂಸ್ಕೃತಿಕವಾಗಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಸಾoಸ್ಕೃತಿಕ ಸಮಿತಿಯ ಅಧ್ಯಕ್ಷ ಎಚ್ ಎಸ್ ಪರಮೇಶ್ ಅವರು ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನವನ್ನು ನಡೆಸುತ್ತಿರುವುದು ಹೆಮ್ಮೆಯ ವಿಚಾರ. ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸುವ ಪತ್ರಕರ್ತರುಗಳಿಗೆ ನಮ್ಮ ಕಲ್ಪತರು ನಾಡಿನ ರಂಗಭೂಮಿ ಸಂಗೀತ ನೃತ್ಯ ಸೇರಿದಂತೆ ಇತರೆ ವೈವಿಧ್ಯಮಯ ಸಾಂಸ್ಕೃತಿಕ ಲೋಕವನ್ನ ಪರಿಚಯ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಅಂದು ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳು ಭಾಗವಹಿಸುವ ಕಾರಣದಿಂದಾಗಿ ನಾಡಗೀತೆ,ರೈತ ಗೀತೆ, ಸ್ವಾಗತನೃತ್ಯ, ನಮ್ಮ ಜಿಲ್ಲೆಯ ರಂಗಭೂಮಿ ಕಲಾವಿದರುಗಳಿಂದ ಪಕ್ಕಾ ವಾದ್ಯಗಳೊಂದಿಗೆ ಅತ್ಯುತ್ತಮವಾದ ರಂಗ ಗೀತ ಗಾಯನ, ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.

ನಗರದ ಮಹಾನಗರ ಪಾಲಿಕೆ ಅವರಣದಿಂದ ಅಂದು ಎಸ್. ಎಸ್. ಐ. ಟಿ ಕಾಲೇಜು ಆವರಣಕ್ಕೆ ನಡೆಯುವ ಸಮ್ಮೇಳನದ ಮೆರವಣಿಗೆಯಲ್ಲಿ ಕಲ್ಪತರು ನಾಡಿನ ಪ್ರತೀಕವಾದ ವೀರಗಾಸೆ, ಡೊಳ್ಳು ಕುಣಿತ, ನಂದಿದ್ವಜ ಕುಣಿತ, ಚಿಟ್ಟಿ ಮೇಳ, ತಮಟೆ ವಾದ್ಯ ಸೇರಿದಂತೆ ಸ್ಥಳೀಯವಾಗಿ ರೂಪುಗೊಂಡಿರುವ ವಿವಿಧ ಸಾಂಸ್ಕೃತಿಕ ಕಲಾ ಪ್ರಕಾರಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಲಿದ್ದು ಹೊರ ಜಿಲ್ಲೆಗಳಿಂದ ಬರುವ ಪತ್ರಕರ್ತರಿಗೆ ಇಲ್ಲಿಯ ಸ್ಥಳೀಯ ಸಂಸ್ಕೃತಿ ಪರಂಪರೆಯನ್ನು ಪರಿಚಯಿಸಲು ಸೂಕ್ತ ವ್ಯವಸ್ಥೆಗಳನ್ನ ಕೈಗೊಳ್ಳಲಾಗಿದೆ ಎಂದು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಕಾ.ನಿ.ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ ಇ ರಘುರಾಮ್, ಸಾಂಸ್ಕೃತಿಕ ಸಮಿತಿಯ ಗೌರವಾಧ್ಯಕ್ಷ ಜಯಣ್ಣ, ಉಪಾಧ್ಯಕ್ಷ ಮಹಾರಾಜು, ಸಂಚಾಲಕರುಗಳಾದ ಯೋಗೀಶ್, ರೇಣುಕಾ, ರವಿಂದ್ರ, ಬಸವರಾಜು ಚೇಳೂರು, ಜೆ.ಎಂ.ರಾಜೇಶ್, ಎಚ್.ಎಸ್. ನರಸಿಂಹಮೂರ್ತಿ, ಕುಣಿಗಲ್ ಶಂಕರ್, ರಾಜೇಶ್ ರಂಗನಾಥ್, ರವಿಕುಮಾರ್ ಸಿ.ಹೆಚ್. ಸಿದ್ದೇಶ್ ಎನ್‌ಎಸ್, ಸೇರಿದಂತೆ ಇತರರು ಉಪಸ್ಥಿತಿ ಇದ್ದರು.

—————–—ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?