ತುಮಕೂರು:ತಮಿಳುನಾಡು ಚಂಡಮಾರುತ:ಸoತ್ರಸ್ತರಿಗೆ ಜಪಾನಂದ ಸ್ವಾಮೀಜಿ ನೆರವು

ತುಮಕೂರು:ತುಮಕೂರಿನ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ,ಇನ್ಫೋಸಿಸ್ ಫೌಂಡೇಶನ್ ಹಾಗೂ ತುಮಕೂರು ವಿವಿಯ ಸಮಾಜಕಾರ್ಯ ವಿಭಾಗದ ಸಹಯೋಗದಲ್ಲಿ ತಮಿಳುನಾಡಿನ ಕೃಷ್ಣಗಿರಿ,ತಿರುವಣ್ಣಾಮಲೈ, ತಿಂಡಿವನo, ವಿಲ್ಲುಪುರಂ ಪ್ರದೇಶಗಳಲ್ಲಿ ಫೆಂಗಲ್ ಚಂಡಮಾರುತದಿoದ ಸಂತ್ರಸ್ತರಾದ ಜನರಿಗೆ ಪರಿಹಾರ ವಸ್ತುಗಳನ್ನು ವಿತರಿಸಲಾಯಿತು.

ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳು, ಕಂಬಳಿ, ಬಟ್ಟೆ ಸೇರಿದಂತೆ 3000 ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ವಿತರಿಸಿದರು.ಕಳೆದ ಒಂದು ವಾರದಿಂದ ಶುರುವಾಗಿರುವ ಪರಿಹಾರ ವಿತರಣಾ ಕಾರ್ಯವು ಇದೇ ಡಿ.30ರ ವರೆಗೂ ಮುಂದುವರಿಯಲಿದ್ದು, ಫೆಂಗಲ್ ಚoಡಮಾರುತದಿoದ ಹಾನಿಗೊಳಗಾಗಿರುವ ತಮಿಳುನಾಡಿನ ವಿವಿಧ ಪ್ರದೇಶಗಳ ಸಂತ್ರಸ್ತರಿಗೆ ನೆರವಾಗಲಿದೆ.

ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಜನರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡಲು ಇನ್ಫೋಸಿಸ್ ಪ್ರತಿಷ್ಠಾನವು ಶ್ರೀ ರಾಮಕೃಷ್ಣ ಸೇವಾಶ್ರಮದೊಂದಿಗೆ ಕಳೆದ 32 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಪುದುಚೇರಿ, ವಿಲ್ಲುಪುರಂ, ಕಡಲೂರು, ತಿರುವಣ್ಣಾಮಲೈ, ಕೃಷ್ಣಗಿರಿ ಸೇರಿದಂತೆ ಫೆಂಗಲ್ ಪೀಡಿತ ಜಿಲ್ಲೆಗಳಿಗೆ ಪರಿಹಾರ ಸಾಮಗ್ರಿಗಳನ್ನು ನೀಡುತ್ತಿದ್ದೇವೆ. ಮೊದಲ ಹಂತದಲ್ಲಿ ಕೃಷ್ಣಗಿರಿ ಜಿಲ್ಲೆ ಹಾಗೂ ಸಮೀಪದ ವೆಟ್ಟಿಯಂಪಟ್ಟಿ, ಕಲ್ಲಾವಿಯಲ್ಲಿ 1,000 ಜನರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.

ಮುಂದುವರಿದು, ಒಟ್ಟು 4,000 ಜನರಿಗೆ ಪರಿಹಾರ ಸಾಮಗ್ರಿಗಳನ್ನು ಡಿ.30ರ ಒಳಗಾಗಿ ವಿತರಿಸಲಾಗುವುದು’ ಎಂದು ಶ್ರೀ ರಾಮಕೃಷ್ಣ ಸೇವಾಶ್ರಮದ ಅಧ್ಯಕ್ಷ ಸ್ವಾಮಿ ಜಪಾನಂದಜಿ ತಿಳಿಸಿದ್ದಾರೆ.

ತುಮಕೂರು ವಿಶ್ವವಿದ್ಯಾನಿಲಯದ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು, ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ. ಪರಶುರಾಮ ಕೆ.ಜಿ., ಬೆಂಗಳೂರಿನ ಸಮರ್ಪಣ್ ಇನ್ಫೋಸಿಸ್ ಹಾಗೂ ಚನ್ನೈ ಸ್ನೇಹಂ ಇನ್ಫೋಸಿಸ್ ಸಂಸ್ಥೆಗಳು ಸ್ವಯಂಸೇವಕರಾಗಿ ಭಾಗವಹಿಸಿ ಪರಿಹಾರ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸುವಲ್ಲಿ ಸಹಕರಿಸಿದರು.

———–——–ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?