ತುಮಕೂರು:ರೋಟರಿ ತುಮಕೂರು,ರೋಟರಿ ಚಾರಿಟಬಲ್ ಟ್ರಸ್ಟ್ ಹಾಗೂ ಜೈನ ಸ್ನೇಹಿತರ ಬಳಗ ಇವರ ಸಹಯೋಗದೊಂದಿಗೆ ನಗರದ ರಿಂಗ್ ರಸ್ತೆ ಬದಿ ಇರುವ ಗುಡಿಸಲುಗಳಲ್ಲಿ ವಾಸವಾಗಿರುವ ತೀವ್ರ ಚಳಿಗೆ ಕಷ್ಟಪಡುತ್ತಿರುವ ಬಡಜನರಿಗೆ ಹೊದಿಕೆಗಳನ್ನು ವಿತರಿಸ ಲಾಯಿತು.
ದಾನಿಗಳಾದ ರೊ.ಪಿ.ಎಚ್.ಎಫ್.ಕಾಂತಿಲಾಲ್, ರೋಟರಿ ಅಧ್ಯಕ್ಷರಾದ ರಾಜೇಶ್ವರಿ ರುದ್ರಪ್ಪ, ಕಾರ್ಯದರ್ಶಿ ನಾಗಮಣಿಪ್ರಭಾಕರ್ ಮತ್ತು ರೋಟರಿ ಸದಸ್ಯರುಗಳು ಭಾಗವಹಿಸಿದ್ದರು.
——-ಕೆ.ಬಿ ಚಂದ್ರಚೂಡ