ತುಮಕೂರು-ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ವತಿಯಿಂದ ಅಕ್ಷರದ ಅವ್ವ ಸಾವಿತ್ರಿಭಾಯಿ ಬಾಪುಲೆ ರವರ ಜಯಂತಿಯನ್ನು ತುಮಕೂರು ಅಮಾನಿಕೆರೆ ಗಾಜಿನ ಮನೆಯ ಆವರಣದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಮೂಲಕ ಆಚರಿಸಲಾಯಿತು.
ಪುಷ್ಪನಮನ ಸಲ್ಲಿಸಿ ಮಾತನಾಡಿದ ಅಖಿಲ ಭಾರತ ಡಾ ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾ ಅಧ್ಯಕ್ಷ ಎನ್.ಕೆ.ನಿಧಿ ಕುಮಾರ್, ಭಾರತದ ನಾರಿಯರು ಇಂದು ಸಾಮಾಜಮುಖಿಯಾಗಿ ಮುಂದೆ ಬರಲು ಕಾರಣ ಸಾವಿತ್ರಿಭಾಯಿ ಪುಲೆ ರವರು, ಅವರು ಅಂದು ಮೊಟ್ಟಮೊದಲ ಮಹಿಳಾ ಶಿಕ್ಷಕಿಯಾಗಿ ಅಂದಿನ ಕಾಲದಲ್ಲಿ ಇದ್ದ ಸಮಾಜಿಕ ಪಿಡುಗನ್ನು ಪಕ್ಕಕ್ಕೆ ತಳ್ಳಿ ಒಂದೊಳ್ಳೆ ಸಮಾಜವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದಂತಹ ಧೀರ ವನಿತೆ ಎಂದರೆ ತಪ್ಪಾಗಲಾರದು.ಅಂತಹ ಮಹಾನ್ ಚೇತನರ
ಹುಟ್ಟಿದ ದಿನವನ್ನು ಇಂದು ನಾವು ಆಚರಿಸುತ್ತಿದ್ದೇವೆ ಎಂದರೇ ಅದು ನಮ್ಮ ಸೌಭಾಗ್ಯವೇ ಸರಿ ಎಂದು ಹೇಳಿದರು.
ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಉಪಾಧ್ಯಕ್ಷರಾದ ನಾರಾಯಣ ಎಸ್. ಮಾತನಾ ಡಿ, ಹೆಣ್ಣು ಮಕ್ಕಳನ್ನು ಮನೆಯ ನಾಲ್ಕು ಗೋಡೆಗಳ ಮಧ್ಯಕ್ಕೆ ಸೀಮಿತವಾಗಿರಿಸಿದಂತಹ ಕಾಲಘಟ್ಟದಲ್ಲಿದ್ದ ಮೂಡ ನಂಬಿಕೆಯನ್ನು ಲೆಕ್ಕಿಸದೇ ಸಮಾಜದ ಒಳತಿಗಾಗಿ ಹೆಣ್ಣು ಮಕ್ಕಳು ಸುಶಿಕ್ಷಿತರಾಗಬೇಕು, ಹೆಣ್ಣು ಮಕ್ಕಳು ಸಮಾಜದ ಒಂದು ಭಾಗವಾಗಬೇಕು ಆಗಲೇ ದೇಶದ ಒಳಿತು ಸಾಧ್ಯ ಎಂಬ ನಾನ್ನುಡಿಯನ್ನು ಸಾರಿ ಹಲವಾರು ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ಕಲಿಸಿದ ಮಹಾನ್ ತಾಯಿ ಸಾವಿತ್ರಿಭಾಯಿ ಪುಲೆ ಅವರ ಜನ್ಮ ದಿನವನ್ನು ನಾವು ಆಚರಿಸಿ ಇಂದಿನ ನಾರಿಯರಿಗೆ ಬುನಾದಿ ಹಾಕಿಕೊಟ್ಟಂತಹ ಅಕ್ಷರದ ಅವ್ವಳನ್ನು ನೆನೆಯುತ್ತಿದ್ದೇವೆಂದು ಭಾವುಕರಾದರು.
ಈ ಸಂದರ್ಭದಲ್ಲಿ ಆಗಮಿಸಿದ್ದ ಸಾರ್ವಜನಿಕರಿಗೆ ಸಿಹಿಯನ್ನು ವಿತರಿಸಲಾಯಿತು.ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂದ್ರ ಕುಮಾರ್ ಡಿ.ಕೆ., ಡಾ ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾ ಸಂಘಟನೆಯ ಕಾರ್ಯದರ್ಶಿ ಸುರೇಶ್, ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷರಾದ ಶಿವಣ್ಣ ಕೊಂತ್ತಿಹಳ್ಳಿ, ತುಮಕೂರು ತಾಲೂಕು ಗೌರವಾಧ್ಯಕ್ಷರಾದ ಗಂಗಾಧರ್ ಜಿ ಆರ್,ನಗರ ಉಪಾಧ್ಯಕ್ಷರಾದ ನಿತಿನ್, ಮುಖಂಡರುಗಳಾದ ಶಿವರಾಜ್, ಗಿರೀಶ್ ದಿಬ್ಬೂರು, ನಾಗರಾಜ್, ಗೋವಿಂದರಾಜ್ ಕೆ, ರಂಗಸ್ವಾಮಯ್ಯ ಕೆ.ಎಸ್,ಹನುಮನರಸಯ್ಯ ಇನ್ನು ಮುಂತಾದವರು ಉಪಸ್ಥಿರಿದರು.