ತುಮಕೂರು:ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆಗಳ ರಾಜ್ಯ ಸಚಿವರಾದ ವಿ. ಸೋಮಣ್ಣ ನವರು ತುಮಕೂರು ಜಿಲ್ಲೆ, ಗುಬ್ಬಿ ತಾಲೂಕು,ಕಸಬಾ, ಚೇಳೂರು ಮತ್ತು ಹಾಗಲವಾಡಿ ಹೋಬಳಿಗಳ ಪ್ರವಾಸ ಕೈಗೊಂಡಿದ್ದರು.
ಕಸಬಾ ಹೋಬಳಿ ವ್ಯಾಪ್ತಿಯ 6 ಪಂಚಾಯಿತಿ, ಚೇಳೂರು ಮತ್ತು ಹಾಗಲವಾಡಿ ಹೋಬಳಿ ವ್ಯಾಪ್ತಿಯ 9 ಪಂಚಾಯಿತಿಯ ದಿವ್ಯಾಂಗ ಫಲಾನುಭವಿಗಳಿಗೆ ಭಾರತ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಎಡಿಐಪಿ ಯೋಜನೆಯಡಿಯಲ್ಲಿ ದಿವ್ಯಾಂಗ ಫಲಾನುಭವಿಗಳಿಗೆ ಸಹಾಯಕ ಸಲಕರಣೆ ವಿತರಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಆಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಇಲಾಖಾ ಅಧಿಕಾರಿಗಳಿಗೆ ಪರಿಹಾರ ಕ್ರಮಕೈಗೊಳ್ಳಲು ಆದೇಶಿಸಿದರು.
ಬೆಳಗ್ಗೆ 10.00 ರಿಂದ ಕಸಬಾ ಪಂಚಾಯಿತಿ ಆವರಣದಲ್ಲಿ ಆಗಮಿಸಿದ ನೂರಾರು ಸಾರ್ವಜನಿ ಕರ ಆಹವಾಲುಗಳನ್ನು ಇಲಾಖೆ ಅಧಿಕಾರಿಗಳೊಂದಿಗೆ ಸ್ವೀಕರಿಸಿ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಕ್ರಮ ಜರುಗಿಸಿದ್ದಾರೆ.
——–ಕೆ.ಬಿ ಚಂದ್ರಚೂಡ