ತುಮಕೂರು-ವಾಸವಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಷ್ಟ್ರೀಯ ಗಣಿತ ದಿನ-ಗಣಿತಶಾಸ್ತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಸನ್ಮಾನ

ತುಮಕೂರು-ರಾಮಾನುಜನ್ ರವರು ನಿರಂತರ ಅಧ್ಯಯನ ಶೀಲತೆಯಿಂದಲೇ ಗಣಿತಶಾಸ್ತ್ರದಲ್ಲಿ ಉತ್ತಮ ಸಿದ್ಧಾಂತ ಮತ್ತು ಗಣಿತ ಸೂತ್ರಗಳನ್ನು ಬಿಡಿಸಲು ಸಾಧ್ಯವಾಯಿತು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ ಹೇಳಿದರು.

ನಗರದ ವಾಸವಿ ಪದವಿ ಪೂರ್ವ ಕಾಲೇಜು ವತಿಯಿಂದ ರಾಷ್ಟ್ರೀಯ ಗಣಿತ ದಿನ ಹಾಗೂ ಗಣಿತಶಾಸ್ತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಓದುವ ಕಡೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಯಶಸ್ಸು ಗಳಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ವಿಜೇತರಾದ 20 ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಿ ಜ್ಞಾನಾರ್ಜನೆಗೆ ಹೆಚ್ಚು ಗಮನ ಕೊಡಿ, ಕೇವಲ ಅಂಕಗಳಿಗೆ ಸೀಮಿತಗೊಳ್ಳದೆ ಎಲ್ಲಾ ವಿಷಯಗಳ ಬಗ್ಗೆ ಈ ರೀತಿಯ ಚಟುವಟಿಕೆಗಳನ್ನು ಮಾಡಲು ತಿಳಿಸಿದರು.ಉತ್ತಮ ವಿಶೇಷ ಉಪನ್ಯಾಸ ಏರ್ಪಡಿಸಿರುವ ವಾಸವಿ ಕಾಲೇಜಿನ ಸಂಸ್ಥೆಯವರಿಗೆ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಕೊರೊನಾ ಸಮಯದಲ್ಲಿ ಕೊರೊನಾ ತಡೆಗೆ ಔಷಧ ಕಂಡು ಹಿಡಿಯಲು ಆರೋಗ್ಯ ಇಲಾಖೆ ಗಣಿತ ಸೂತ್ರ ಬಳಸಿಕೊಂಡಿತ್ತು.ವಿದ್ಯಾರ್ಥಿಗಳು ಐ.ಐ.ಟಿ. ಐ.ಐ.ಎಸ್.ಸಿ.ಗಳಿಂದ ಉಚಿತವಾಗಿ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಚೇರ್ಪರ್ಸನ್ ಮತ್ತು ಅಸೋಸಿಯೇಟ್ ಪ್ರೊ. ಡಾ. ಚಂದ್ರಾಲಿ ಬೈಷ್ಯ ರವರು “The power of mathematics:from Ancient insights to Modern inhovations “ ಕುರಿತು 2 ಗಂಟೆಗಳ ಸಮಯ ವಿಶೇಷ ಉಪನ್ಯಾಸ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಚಂದ್ರಶೇಖರ ಆರಾಧ್ಯ ಎಚ್.ವಿ. ಮಾತನಾಡಿ, ಶ್ರೀನಿವಾಸ ರಾಮಾನುಜನ್ ರವರ ಹುಟ್ಟು, ಬೆಳವಣಿಗೆ ತಿಳಿಸಿ ಎಸ್.ಎಲ್. ಕಾಲೋನಿಯ ಟ್ರಿಗ್ನಾಮೆಟರಿ ಮತ್ತು ಕಾರ್ ಎಂಬ ಗಣಿತಜ್ಞನ ಸಿನೋಪ್ಸಿಸ್ ಆಫ್ ಪ್ಯೂರ್ ಮ್ಯಾಥಮೆಟಿಕ್ಸ್ ಎಂಬ ಗ್ರಂಥ ರಾಮಾನುಜನ್ ರವರಿಗೆ ಸ್ಫೂರ್ತಿ ಪ್ರತಿಭೆ ವಿಕಾಸಗೊಳಿಸಿದವು. ಸ್ವಯಾರ್ಜಿತವಾಗಿ ಹಲವು ಕ್ಷೇತ್ರಗಳಲ್ಲಿ ಇವರು ಸಾಧಿಸಿದ ಶ್ರಮಕ್ಕೆ ಲಂಡನ್ ಫೆಲೋ ಆಫ್ ಸೊಸೈಟಿ ಎಂಬ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಿತು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿ. ಹನುಮಂತಯ್ಯ, ವಸಂತಕುಮಾರ್, ಬಿ.ಎಂ.ಶಿವಣ್ಣ, ಪ್ರಾಚಾರ್ಯರ ಸಂಘದ ಅಧ್ಯಕ್ಷ ಪ್ರಭಾಕರ್ ರೆಡ್ಡಿ ಕೆ,ಮಾರುತಿ ಕಾಲೇಜಿನ ರವಿಕುಮಾರ್,ವಾಸವಿ ಕಾಲೇಜಿನ ಉಪನ್ಯಾಸಕ ನರೇಂದ್ರಬಾಬು, ಡಿ.ಎಲ್. ವಿನೋದ್, ಕೆ.ಎಂ. ಗೋವಿಂದರಾಜು,ನಟರಾಜು, ಸಂಧ್ಯಾ ಜೆ. ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?