
ತುಮಕೂರು:ತುಮಕೂರು ನಗರ ವೀರಶೈವ ಸಹಕಾರ ಬ್ಯಾಂಕಿನ ಆಡಳಿತ ಮಂಡಳಿ 17 ನಿರ್ದೇಶಕ ಸ್ಥಾನಗಳಿಗೆ 2025-30ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ನಗರ ವೀರಶೈವ ಸಮಾಜ ಸೇವಾ ಸಮಿತಿ ಬೆಂಬಲಿತ ಅಭ್ಯರ್ಥಿಗಳು ಅತ್ಯಧಿಕ ಮತ ಪಡೆಯುವುದರೊಂದಿಗೆ
ನಿರ್ದೇಶಕರಾಗಿ ಆಯ್ಕೆಯಾಗಿದ್ದು ಹಿಂದಿನ ಅಧ್ಯಕ್ಷರಾದ ಕೆ.ಜೆ.ರುದ್ರಪ್ಪನವರ ತಂಡ ಪ್ರಚಂಡ ಬಹುಮತದೊಂದಿಗೆ ಗೆದ್ದು ಬೀಗಿದ್ದಾರೆ.
ಬ್ಯಾಂಕ್ ಅಧ್ಯಕ್ಷರಾಗಿದ್ದ ಕೆ.ಜೆ.ರುದ್ರಪ್ಪ, ಹಾಗೂ ಉಪಾಧ್ಯಕ್ಷರಾಗಿದ್ದ ಕೆ.ಮಲ್ಲಿಕಾರ್ಜುನಯ್ಯ ಅವರ ನೇತೃತ್ವದಲ್ಲಿ ನಗರ ವೀರಶೈವ ಸಮಾಜ 17 ಮಂದಿ ಅಭ್ಯರ್ಥಿಗಳನ್ನು ಗುರುತಿಸಿ ಸಮಾಜದ ಅಂಗ ಸoಸ್ಥೆಯಾದ ವೀರಶೈವ ಸಹಕಾರ ಬ್ಯಾಂಕ್‌ನ ಚುನಾವಣೆಗೆ ಕಣಕ್ಕಿಳಿಸಿತ್ತು. ಅದರಂತೆ ನಗರದ ಸಿದ್ಧಗಂಗಾ ಕಲಾ ವಿಜ್ಞಾನ ಕಾಲೇಜಿನಲ್ಲಿ ಭಾನುವಾರ ನಡೆದ ಚುನಾವ ಣೆಯಲ್ಲಿ ಕೆಳಕಂಡ 17 ಮಂದಿ ಅಭ್ಯರ್ಥಿಗಳು ಸಾವಿರಕ್ಕೂ ಅಧಿಕ ಮತಗಳಿಕೆಯೊಂದಿಗೆ ಚುನಾಯಿತರಾಗಿದ್ದಾರೆ.
ಅರ್ಜುನ್.ಎ.ವೀರೇಶ್ 1221, ಅರುಣ್ ಕುಮಾರ್.ಕೆ.ಎಸ್.1282, ಏಕಾಂತ. ಟಿ.ಎಲ್. 1297, ಗಣೇಶ್ ಪ್ರಸಾದ್ 1219, ಗಿರೀಶ್.ಟಿ.ಜೆ.1280, ಚಂದ್ರಶೇಖರ್ ಟಿ.ವಿ.1275, ನಾಗರಾಜ್.ಜಿ.(ವಕೀಲರು)1250, ಮಲ್ಲಿಕಾರ್ಜುನಯ್ಯ.ಕೆ.1310, ಮಂಜುನಾಥ್. ಆರ್. 1267 ,ಯೋಗೀಶ್. ಟಿ.ಆರ್. 1266, ರವಿಶಂಕರ್.ಪಿ.1265, ಕೆ.ಜೆ.ರುದ್ರಪ್ಪ 1291, ರೇಣುಕಾರಾಧ್ಯ.ಬಿ.1264, ಶ್ರೀಕಂಠಸ್ವಾಮಿ.ಟಿ.ಎನ್.1251, ಸಂತೋಷ್ ಕುಮಾರ್. ಈ.ಎಸ್.1226. ಸಂತೋಷ್. ಟಿ.ಎಮ್.1227, ಷಣ್ಮುಖಸ್ವಾಮಿ ಟಿ.ಎಸ್.1164 ಮತಗಳನ್ನು ಪಡೆದು ಗೆದ್ದು ಬೀಗಿದ್ದರೆ, ಪ್ರತ್ಯೇಕವಾಗಿ ನಿಂತಿದ್ದ ನಿರಂಜನ್ 499 ಪಡೆದು ಪರಾಭವಗೊಂಡಿದ್ದಾರೆ.

ಪತ್ರಕರ್ತರೊoದಿಗೆ ಮಾತನಾಡಿದ ಕೆ.ಜೆ.ರುದ್ರಪ್ಪನವರು ವೀರಶೈವ ಸಮಾಜ ಬೆಂಬಲಿತ ಎಲ್ಲಾ 17 ಮಂದಿ ಅಭ್ಯರ್ಥಿಗಳನ್ನು ಬ್ಯಾಂಕಿನ ಸದಸ್ಯರು ಆಯ್ಕೆ ಮಾಡಿದ್ದು, ಸಮಾಜ ಬಾಂಧವರಿಗೆ ಮತ್ತಷ್ಟು ಸೇವೆ ಮಾಡಲು ಬಲ ದೊರೆತಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಹಕರಿಸಿ ಬೆಂಬಲಿಸಿದ ಸಮಾಜದ ಎಲ್ಲಾ ಹಿರಿಯರು ಪ್ರಮುಖರಿಗೆ ಧನ್ಯವಾದ ಅರ್ಪಿಸುತ್ತೇವೆ, ಮುಂದಿನ 5 ವರ್ಷದಲ್ಲಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಶ್ರಮಿಸಿ ರಾಜ್ಯದಲ್ಲಿ ನಂಬರ್-1 ಕೋ ಆಪರೇಟಿವ್ ಬ್ಯಾಂಕ್ ಮಾಡುತ್ತೇವೆ ಎಂದು ಹೇಳಿದರು.
ನೂತನ ನಿರ್ದೇಶಕರುಗಳಿಗೆ ಕೇಂದ್ರ ಜಲಶಕ್ತಿ ಮತ್ತು ರೈಲ್ವೇ ಖಾತೆ ಸಚಿವರಾದ ವಿ.ಸೋಮಣ್ಣ, ಶಾಸಕ ಜಿ.ಬಿ.ಜ್ಯೋತಿಗಣೇಶ್,ವಕೀಲರ ಸಂಘದ ಮಾಜಿ ಅಧ್ಯಕ್ಷ ಜೆ.ಕೆ.ಅನಿಲ್,ಜಯನಗರ ಪತ್ತಿನ ಸಂಘದ ಅಧ್ಯಕ್ಷರಾದ ಆರ್.ಎಸ್.ವೀರಪ್ಪದೇವರು,ತುಮಕೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಕೆಂಪರಾಜಯ್ಯ,ಪ್ರಧಾನ ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ,ಮಾಜಿ ಶಾಸಕ ಡಿ.ಸಿ.ಗೌರಿಶಂಕರ್,ವೀರಶೈವ ಸಮಾಜದ ಅಧ್ಯಕ್ಷರಾದ ಟಿ.ಬಿ.ಶೇಖರ್,ಮಾಜಿ ಪಾಲಿಕೆ ಸದಸ್ಯರಾದ ಮಂಜುಳಾ ಆದರ್ಶ್,ಟಿ.ಎo.ಮಹೇಶ್(ಮೆಸ್),ಶ್ರೀಮತಿ ನಿರ್ಮಲಾ ಶಿವ ಕುಮಾರ್,ಹಲವು ಸಂಘ- ಸoಸ್ಥೆಗಳ ಮುಖಂಡರು,ಸಮಾಜದ ವಿವಿಧ ಅಂಗ ಸಂಸ್ಥೆಗಳ ಪದಾಧಿಕಾರಿಗಳು ತಮ್ಮ ಶುಭಾಶಯ ಕೋರಿದ್ದಾರೆ.
——-——ಬಿ.ಕೆ ಚಂದ್ರಚೂಡ