ತುಮಕೂರು-ನಗರದ ಬಟವಾಡಿಯ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಜ.10 ರಿಂದ 12 ರವರೆಗೆ ಶ್ರೀ ವೆಂಕಟೇಶ್ವರ ವೈಕುಂಠ ವೈಭವವನ್ನು ಹಮ್ಮಿಕೊಳ್ಳಲಾಗಿದೆ.
ಜ.10 ರಂದು ವೈಕುಂಠ ಏಕಾದಶಿ ಪ್ರಯುಕ್ತ ಶ್ರೀ ಸ್ವಾಮಿಗೆ ವಜ್ರ ಕಿರೀಟ ಹಾಗೂ ವಜ್ರ ಶಂಖ, ತಿರುಮಲ ತಿರುಪತಿಯ ಶೈಲಿಯಲ್ಲಿ 48 ಆಭರಣಗಳ ವಿಶೇಷ ಅಲಂಕಾರ ಏರ್ಪಡಿಸಲಾಗಿದೆ.
ಮೂರು ದಿನಗಳ ಕಾಲ ವೈಕುಂಠ ದ್ವಾರದ ಪ್ರವೇಶವಿದ್ದು, ಜ. 10 ರಂದು ಬೆಳಿಗ್ಗೆ 3 ಗಂಟೆಗೆ ಸುಪ್ರಭಾತ, ನಿತ್ಯವಿಧಿ, ವಿಶೇಷ ಮಹಾಭಿಷೇಕ, ಬೆಳಿಗ್ಗೆ 5.30ಕ್ಕೆ ರಾಜ ಬೀದಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆ ನಂತರ ವೈಕುಂಠ ದ್ವಾರದ ಪೂಜೆ ಹಾಗೂ ಬೆಳಿಗ್ಗೆ 6 ಗಂಟೆಗೆ ಶ್ರೀ ಸ್ವಾಮಿಯ ದಿವ್ಯದರ್ಶನ ಮಹಾಮಂಗಳಾರತಿ ಹಾಗೂ ಬಂದ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ ಎಂದು ಶ್ರೀ ಶ್ರೀನಿವಾಸ ಟ್ರಸ್ಟ್ ನ ಅಧ್ಯಕ್ಷರಾದ ಡಿ.ಎಸ್. ಕುಮಾರ್ ತಿಳಿಸಿದ್ದಾರೆ.