ತುಮಕೂರು:ಯುವಜನೋತ್ಸವ-ವಿದ್ಯೋದಯ ಕಾನೂನು ಕಾಲೇಜಿನ ವಿದ್ಯಾರ್ಥಿಗಳ ಅಪ್ರತಿಮ ಸಾಧನೆ

ತುಮಕೂರು:ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯ ಹುಬ್ಬಳ್ಳಿಯವರು ಬೆಂಗಳೂರು ವಲಯ-01, 2024-25ರ ಯುವಜನೋತ್ಸವವನ್ನು ವಿಶ್ವೇಶ್ವರಪುರ ಕಾನೂನು ಕಾಲೇಜುನಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮದಲ್ಲಿ ಸುಮಾರು 37ಕ್ಕೂ ಹೆಚ್ಚಿನ ಕಾನೂನು ಕಾಲೇಜುಗಳು ಭಾಗವಹಿಸಿದ್ದು, ಅದರಲ್ಲಿ ವಿದ್ಯೋದಯ ಕಾನೂನು ಕಾಲೇಜು ತುಮಕೂರಿನ ವಿದ್ಯಾರ್ಥಿಗಳು ಭಾಗವಹಿಸಿ ಹೆಚ್ಚಿನ ಸ್ಪರ್ಧೆಗಳಲ್ಲಿ ವಿಜೇತರಾಗಿ ಕಾರ್ಯಕ್ರಮದ ಆಕರ್ಷಕ ಕೇಂದ್ರ ಬಿoದುಗಳಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಜಾನಪದ ವಾದ್ಯಗೋಷ್ಠಿ, ಚರ್ಚಾಸ್ಪರ್ಧೆ, ನಾಟಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಸಮೂಹ ಗಾಯನದಲ್ಲಿ ದ್ವೀತಿಯ ಸ್ಥಾನವನ್ನು ಪಡೆದು ಯಶಸ್ವಿಯಾಗಿರುವುದಕ್ಕೆ ವಿದ್ಯೋದಯ ಫೌಂಡೇಶನ್ (ರಿ) ಟ್ರಸ್ಟ್ ನ ಗೌರವಾಧ್ಯಕ್ಷರಾದ ಜಸ್ಟೀಸ್ ಕೆಂಪಣ್ಣ ರವರು,ಪುಟ್ಟಕೆಂಪಣ್ಣ, ಹೆಚ್.ಎಸ್.ರಾಜು, ಮತ್ತು ಟ್ರಸ್ಟ್ ನ ಸದಸ್ಯರುಗಳು, ಸಿ.ಇ.ಓ.ಪ್ರೊ.ಕೆ. ಚಂದ್ರಣ್ಣ, ಪ್ರಾoಶುಪಾಲರಾದ ಶ್ರೀಮತಿ ಶಮಾಸೈಯಿದಿ,ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಡಾ||ನಟರಾಜ.ಜಿ.ವೈ, ರವರು ಹಾಗೂ ಐಕ್ಯೂಎಸಿ ಸಂಚಾಲಕರಾದ ಎನ್.ಹೆಚ್.ಕುಮಾರ್, ಬೋಧಕ-ಬೋಧಕೇತರ ಸಿಬ್ಬಂದಿಯವರು ವಿದ್ಯಾರ್ಥಿಗಳನ್ನು ಅಭಿನಂಧಿಸಿದರು.

————-—ಕೆ.ಬಿ ಚಂದ್ರಚೂಡ

Leave a Reply

Your email address will not be published. Required fields are marked *

× How can I help you?