ತುಮಕೂರು-‘’ಭಾರತದ ಕೀರ್ತಿ ಪತಾಕೆಯನ್ನು ಇಡೀ ವಿಶ್ವವೇ ಬೆರಗಾಗುವಂತೆ ತೋರಿಸಿಕೊಟ್ಟವರು ಮಹಾನ್ ಚೇತನ ಸ್ವಾಮಿ ವಿವೇಕಾನಂದ ಎಂದು ವಿಶ್ವವಿದ್ಯಾನಿಲಯದ ಹಿರಿಯ ಪ್ರಾಧ್ಯಾಪಕರಾದ ಪ್ರೊ.ಕೊಟ್ರೇಶ್ ರವರು ಅಭಿಪ್ರಾಯ ಪಟ್ಟರು.
ಅವರು ತುಮಕೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ವಾಣಿಜ್ಯಶಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಎಂ.ಕಾo. ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಯುವತನ ಅನ್ನುವಂತದ್ದು ದೇಹಕ್ಕೆ ಸಂಬoಧಿಸಿದಲ್ಲ ಮನಸ್ಸಿಗೆ ಸಂಬoಧಿಸಿದ್ದು, ಬುದ್ದಿ, ವಿವೇಕ, ಚಿಂತನೆಗಳು, ಧೈರ್ಯ ಇಲ್ಲದ ವ್ಯಕ್ತಿಗಳನ್ನು ವಿವೇಕಾನಂದರು ಎಂದಿಗೂ ಕ್ಷಮಿಸುವುದಿಲ್ಲ ಎಂದರು. ಧೈರ್ಯವಾಗಿರಿ ಮತ್ತು ಸಾವಿಗೆ ಎಂದಿಗೂ ಹೆದರಬೇಡಿ ಎಂಬ ಮಾತುಗಳನ್ನು ಆಡಿದರು. ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದ ಮಹಾನ್ ಚೇತನ ಮತ್ತು ಅನೇಕ ದಾರ್ಶನಿಕರ ಮೇಲೆ ಪ್ರಭಾವ ಬೀರಿದವರು. ಕೇವಲ ಬೋಧನೆಯಿಂದ ಸಾಧನೆಯಾಗುವುದಿಲ್ಲ ಕರ್ಮದಿಂದ ಮಾತ್ರ ರಾಜಯೋಗ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಭಾಗದ ಮುಖ್ಯಸ್ಥರಾದ ಪ್ರೊ. ಬಿ. ಶೇಖರ್ ರವರು,ಕೋಟ್ಯಾಂತರ ತರುಣರ ಎದೆಯಲ್ಲಿ ಮಿಂಚಿನ ಸಂಚಾರ ಮಾಡಿದ ತನ್ನ ತೀಕ್ಷ್ಣವಾದ ನೋಟ ಹಾಗೂ ಖಡ್ಗದಷ್ಟು ಹರಿತವಾದ ಮಾತುಗಳಿಂದ ದೇಶದ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ಜೀವನದ ಪ್ರತಿ ಕ್ಷಣವನ್ನು ಉಪಯೋಗವಾ ಗುವಂತೆ ಕಳೆಯಿರಿ ಎನ್ನುವ ಅವರ ಬೋಧನೆಗಳು, ಎಂತಹ ಜಾಡ್ಯ ತುಂಬಿದ ಮನಸ್ಸುಗಳನ್ನು ಕೂಡ ಬಡಿದೆಬ್ಬಿಸುತ್ತವೆ. ತಮ್ಮ 39 ವರ್ಷಗಳ ಅಲ್ಪ ಜೀವಮಾನದಲ್ಲೇ ಅವರು ನಮಗೆ ನೀಡಿದ ಬೋಧನೆಗಳು ಮತ್ತು ಸಾಧನೆಗಳು ನಮ್ಮೆಲ್ಲರ ಜೀವನಕ್ಕೆ ಬೆಳಕಾಗಿವೆ. ಆತ್ಮಶಕ್ತಿಯ ಮುಖಾಂತರ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಸ್ವಾಮಿ ವಿವೇಕಾನಂದರು ಉತ್ತಮ ಉದಾಹರಣೆ ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಪ್ರೊ. ಪಿ ಪರಮಶಿವಯ್ಯ ರವರು ಮಾತನಾಡಿ ದೇಶದ ಯುವಶಕ್ತಿಯ ಬಾಳು ಹಸನಾಗಲೂ ಸ್ವಾಮಿ ವಿವೇಕಾನಂದರ ಚಿoತನೆಗಳು ಅವಶ್ಯಕವೆಂದರು.
ಕಾರ್ಯಕ್ರಮದಲ್ಲಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಬಿ ಕೆ ಸುರೇಶ್ ಹಾಗೂ ರಕ್ಷಿತ, ಅಭಿಲಾಶ್, ಶ್ರೀನಿವಾಸ ಮೂರ್ತಿ, ನಾಗರಾಜು, ಅರುಂಧತಿ, ಸೌಮ್ಯ ಮತ್ತು ಎಂ.ಕಾo. ವಿಭಾಗದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.