ಚಿಕ್ಕಮಗಳೂರು-ನಟ ಡಾ.ಪುನೀತ್‌ರಾಜ್‌ಕುಮಾರ್ 5೦ನೇ ಹುಟ್ಟುಹಬ್ಬದ ಅಂಗವಾಗಿ ಅಪ್ಪು ಯೂತ್ ಬ್ರಿಗೇಡ್ ವತಿಯಿಂದ ನಗರದ ಶ್ರೀಲೇಖಾ ಚಿತ್ರಮಂದಿರದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧ ನೆಗೈದ ಸಾಧಕರಿಗೆ ಸನ್ಮಾನಿಸುವ ಮೂಲಕ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಈ ವೇಳೆ ಮಾತನಾಡಿದ ಬ್ರಿಗ್ರೇಡ್ ಅಧ್ಯಕ್ಷ ಪ್ರದೀಪ್ ಬಾಲ್ಯದಿಂದಲೇ ನಟನೆಯಲ್ಲಿ ಖ್ಯಾತಿ ಗಳಿಸಿದ್ಧ ನಟ ಪುನೀತ್‌ರಾಜ್‌ಕುಮಾರ್ ಕಾಲಕ್ರಮೇಣ ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ವಿಶಿಷ್ಟ ಶೈಲಿಯ ಚಿತ್ರಗಳಲ್ಲಿ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದರು ಎಂದರು.
ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಪುನೀತ್‌ರಾಜ್‌ಕುಮಾರ್ ತೊಡಗಿಸಿಕೊಂಡಿದ್ದರು. ಬಡವಿದ್ಯಾರ್ಥಿನಿಯರಿಗೆ ಉಚಿತ ವಿದ್ಯಾಭ್ಯಾಸಕ್ಕೆ ಸಹಾಯಧನ ಕಲ್ಪಿಸಿದ್ದರು. ವರನಟ ಡಾ.ರಾಜ್‌ಕುಮಾರ್ ಹಾದಿಯಲ್ಲೇ ಸಾಗಿದ ಪುನೀತ್, ಕರ್ನಾಟಕದಲ್ಲಿ ಮಿಸ್ಟರ್ ಪರ್ಫೆಕ್ಟ್ ಎಂಬ ಖ್ಯಾತಿ ಗಳಿಸಿದ ದೊಡ್ಡ ಮನೆ ಯ ಮಗ ಪ್ರಖ್ಯಾತಿ ಗಳಿಸಿದ್ದರು ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕಗೈದ ಪೌರಕಾರ್ಮಿಕರು, ವಿದ್ಯುತ್‌ಲೈನ್ ಮ್ಯಾನ್, ರೈತರು ಮತ್ತು ಮಹಿಳಾ ಅಭಿಮಾನಿ, ಡಿಕೆಡಿ ಡ್ಯಾನ್ಸ್ ಸ್ಪರ್ಧೆಯ ನೃತ್ಯಗಾರನಿಗೆ ಶ್ರೀಲಾಖ ಚಿತ್ರಮಂದಿರದಲ್ಲಿ ಗೌರವಿಸಲಾಯಿತು. ಬಳಿಕ ಅನ್ನದಾನ ಹಾಗೂ ಸಿಹಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಪ್ಪು ಯೂತ್ ಬ್ರಿಗೇಡ್ ಪ್ರಧಾನ ಕಾರ್ಯದರ್ಶಿ ಶಿವು, ಸದಸ್ಯರಾದ ರಂಜು, ಜಯರಾಮ್, ಶಶಿ, ಆದರ್ಶ್, ಪ್ರಜ್ವಲ್, ರವಿ, ನಿಲಯ ಮತ್ತಿತರರಿದ್ದರು.
ಸುರೇಶ್ ಎನ್.