ತುಮಕೂರು-ಇಂದು ನಗರದ ಸಿದ್ದಗಂಗಾ ಕಾಲೇಜಿನಲ್ಲಿ ಸಂಸ್ಕೃತ ಮತ್ತು ಹಿಂದಿ ವಿಭಾಗದಿಂದ ‘ಭಾಷೆಗಳ ಮಹತ್ವ’ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ನಿಜಲಿಂಗಪ್ಪ ಟಿ.ಬಿ.ರವರು ಪ್ರತಿಯೊಂದು ಭಾಷೆಯು ಅದರದೇ ಆದ ಮಹತ್ವ ಹೊಂದಿದೆ.ಭಾಷೆ ಅದರಲ್ಲಿನ ಮೌಲ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಉತ್ಸಾಹದಾಯಕವಾಗಿ ವಿಷಯ ತಿಳಿಸಿದರು.
ಸಂಸ್ಕೃತ ವಿಷಯ ಕುರಿತು ವತ್ಸಲಾ ಜಿ. ಮಾತನಾಡಿದರು.
ಹಿಂದಿ ವಿಷಯ ಕುರಿತು ಮತಾನಾಡಿದಂತಹ ಡಾ. ಶೋಭಾರವರು ಭಾಷೆಯ ಪ್ರಾಮುಖ್ಯತೆ, ಇತಿಹಾಸ ಕುರಿತು ವಿವರಿಸಿದರು.ಹಿಂದಿ ಮುಖ್ಯಸ್ಥರಾದ ರೆಹಾನ ಭಾನು, ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಸಿದ್ಧಲಿಂಗಸ್ವಾಮಿಗಳು, ಐ.ಕ್ಯು.ಎ.ಸಿ. ಮುಖ್ಯಸ್ಥರಾದ ಸರ್ವಮಂಗಳ ಉಪಸ್ಥಿತರಿದ್ದರು.ತುಮಕೂರು ವಿಶ್ವವಿದ್ಯಾನಿಲಯದ ಡಾ. ಶೋಭಾರವರು ಅತಿಥಿಗಳಾಗಿ ಆಗಮಿಸಿದ್ದರು.