ತುಮಕೂರು-ನಗರದ ಮಂಡಿಪೇಟೆ 2ನೇ ಮುಖ್ಯ ರಸ್ತೆಯಲ್ಲಿರುವ ಕರ್ನಾಟಕ ಯುವರತ್ನ ತ್ರಿಚಕ್ರ ಮತ್ತು ನಾಲ್ಕು ಚಕ್ರ ಎಲ್.ಜಿ.ವಿ. ವಾಹನಗಳ ಮಾಲೀಕರ ಸಂಘದ ವತಿಯಿಂದ 2ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಂಘದ ಅಧ್ಯಕ್ಷರಾದ ರಿಯಾಜ್ ಪಾಷರವರು ಧ್ವಜಾರೋಹಣ ನೆರವೇರಿಸಿದರು.
ನಗರ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್‌ರವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ತಮ್ಮ ಉದ್ಘಾಟನಾ ನುಡಿಗಳಲ್ಲಿ, ಮಂಡಿಪೇಟೆಯ 2ನೇ ಮುಖ್ಯರಸ್ತೆಯಲ್ಲಿನ ಎಲ್ಲಾ ವರ್ತಕರು ಹಾಗೂ ಅಂಗಡಿ ಮಾಲೀಕರ ಸಹಕಾರದೊಂದಿಗೆ ನಿಮ್ಮ ಸಂಘಟನೆಯವರು ಇಷ್ಟೊoದು ಅದ್ಧೂರಿಯಾಗಿ ಕನ್ನಡದ ಹಬ್ಬವನ್ನು ಆಚರಿಸುತ್ತಿರುವುದು ತುಂಬಾ ಸoತೋಷಕರ ಸಂಗತಿ ಎಂದರು.
ನಿತ್ಯ ಗೂಡ್ಸ್ ವಾಹನಗಳ ಚಾಲನೆ ಮತ್ತು ನಿರ್ವಹಣೆಯ ಕಾಯಕವು ಅತ್ಯಂತ ಶ್ರಮದಾಯಕವಾಗಿರುತ್ತದೆ, ನಾಗರೀಕರಿಗೆ ಅಗತ್ಯವಾದ ವಸ್ತುಗಳ ಪೂರೈಕೆಯಲ್ಲಿ ತಮ್ಮಗಳ ಪಾತ್ರವು ಸಹ ಅತ್ಯಂತ ಮುಖ್ಯವಾಗಿದೆ.ತಮ್ಮಗಳಿಗೆ ಯಾವುದೇ ರೀತಿಯಾದ ತೊಂದ ರೆಯಾದಲ್ಲಿ ನನ್ನ ಮನೆಯು ನಿಮ್ಮಗಳ ಸಹಕಾರಕ್ಕೆ ಸದಾ ತೆರೆದಿರುತ್ತದೆ ಎಂದು ತಿಳಿಸಿದರು.
ನೀವುಗಳು ನಾಗರಿಕರ ಸೇವೆಗೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ.ಎಲ್ಲಾ ಧರ್ಮದವರು ಒಟ್ಟಾಗಿ ಸೇರಿ ಈ ರೀತಿಯಾದ ಹಬ್ಬವನ್ನು ಆಚರಿಸುತ್ತಿರುವುದು ನಿಜಕ್ಕೂ ಮಾದರಿಯಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ತುಮಕೂರು ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡುತ್ತಾ,ಸರ್ವ ಧರ್ಮಿಯರು ಒಟ್ಟಾಗಿ ಸೇರಿ ಈ ಕನ್ನಡ ಹಬ್ಬವನ್ನು ಆಚರಿಸುತ್ತಾ ಎಷ್ಟೋ ಜನರಿಗೆ ಮಾದರಿಯಾಗಿದ್ದೀರಿ.ಇದೇ ರೀತಿಯಾಗಿ ಒಟ್ಟಿನಲ್ಲಿ ಸಹಬಾಳ್ವೆ ನಡೆಸುವುದರೊಂದಿಗೆ ಸಮಾಜಮುಖಿ ಕೆಲಸಗಳು ನಿಮ್ಮಿಂದ ಆಗಬೇಕಿದೆ ಎಂದು ತಿಳಿಸಿದರು.
ಈ ಜಗತ್ತಿನಲ್ಲಿ ಹುಟ್ಟಿರುವ ಪ್ರತಿಯೊಬ್ಬನ್ನು ಮನುಷ್ಯನಲ್ಲಿಯೂ ತನ್ನದೇ ಆದ ಶಕ್ತಿಯನ್ನು ಹೊಂದಿರುತ್ತಾರೆ, ಅದನ್ನು ಸದುಪಯೋಗಪಡಿಸಿಕೊಂಡಾಗ ಮಾತ್ರ ಪರಿಪೂರ್ಣ ಮಾನವನಾಗುತ್ತಾನೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಯಿಸಿದ್ದ ಅಡಿಷನಲ್ ಎಸ್.ಪಿ. ಅಬ್ದುಲ್ ಖಾದರ್‌ರವರು ಮಾತನಾಡಿ, ನನ್ನ ಮಾತೃಭಾಷೆ ತಮಿಳು ಆದರೆ ಕನ್ನಡ ನನಗೆ ಅತ್ಯಂತ ಪ್ರೀತಿಪಾತ್ರವಾದ ಭಾಷೆ. ಈ ಭಾಷೆಯ ಪ್ರತಿಯೊಂದು ಉಚ್ಛಾರಣೆಯಲ್ಲಿ ಒಂದೊoದು ಅರ್ಥವಿದೆ.ಇಂಗ್ಲೀಷ್ ಭಾಷೆಯಲ್ಲಿಯೂ ಸಹ ಈ ರೀತಿಯ ಅರ್ಥಗಳು ಸಿಗುವುದು ಕಷ್ಟ ಎಂದರು. ಕನ್ನಡ ಒಂದು ಸುಮಧುರವಾದ ಭಾಷೆ ನಾನು ಇದನ್ನು ಮಾತನಾಡುತ್ತಿದ್ದರೆ ಮತ್ತಷ್ಟು ಮಾತನಾಡಬೇಕು ಎನ್ನುವಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ನಗರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ದಿನೇಶ್ ಕುಮಾರ್ ಮಾತನಾಡಿ, ನೀವುಗಳು ವಾಹನ ಸಾಗಾಣಿಕೆ ವ್ಯವಹಾರ ನಡೆಸುತ್ತಿದ್ದು,ಆರ್.ಟಿ.ಓ. ಅಧಿಕಾರಿಗಳಾದ ಸದ್ರುಲ ಷರೀಫ್‌ರವರು ವಾಹನಗಳಿಗೆ ಸಂಬoಧಿಸಿದ ಕಛೇರಿ ಕೆಲಸಗಳು ತ್ವರಿತಗತಿಯಲ್ಲಿ ಆಗುವಂತೆ ಸಾಕಷ್ಟು ಬದಲಾವಣೆಗಳನ್ನು ತುಮಕೂರು ಆರ್.ಟಿ.ಓ. ಕಛೇರಿಯಲ್ಲಿ ತಂದಿದ್ದಾರೆ. ನೀವು ಅವರಿಗೆ ಋಣಿಗಳಾಗಿರಬೇಕು.ಅವರಂತಹ ದಕ್ಷ ಅಧಿಕಾರಿಗಳು ನಮ್ಮ ತುಮಕೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಆರ್.ಟಿ.ಓ. ಅಧಿಕಾರಿಯಾದ ಸದ್ರುಲ ಷರೀಫ್, ಪಾಲಿಕೆ ಮಾಜಿ ಸದಸ್ಯರಾದ ನಯಾಜ್ ಅಹಮ್ಮದ್, ಸಂಘದ ಅಧ್ಯಕ್ಷರಾದ ರಿಯಾಜ್ ಪಾಷ, ಉಪಾಧ್ಯಕ್ಷರಾದ ಟಿ.ಸಿ.ಸುರೇಶ್, ಗೌ|| ಅಧ್ಯಕ್ಷರುಗಳಾದ ಶಫೀಉಲ್ಲಾ, ಅಜಗರ್,ಕಾರ್ಯಕಾರಿ ಸಮಿತಿಯವರಾದ ಕಿರಣ್, ಕರೀಂ ಪಾಷ, ಚಾಂದ್, ಭರತ್ ಟಿ.ಎನ್, ಶಹಬಾಜ್ ಆರ್, ಸಿದ್ಧರಾಜು, ಶಿವು ದೊಡ್ಡಸಾರಂಗಿ, ಗೌಸ್, ಸಲೀಂ, ಸಾದಿಕ್, ಮುನ್ನ, ಶಫೀ ಸಾಬರಪಾಳ್ಯ,ಚಿಕ್ಕಣ್ಣ, ರಂಗನಾಥ್ ಸೇರಿದಂತೆ ಹಲವಾರು ಸದಸ್ಯರುಗಳು ಇದ್ದರು.