ತುಮಕೂರು:ಮನುಷ್ಯನಿಗೆ ಆರೋಗ್ಯವು ಬಹುಮುಖ್ಯ ಅಂಶವಾಗಿದ್ದು ಮಾನಸಿಕ ಆರೋಗ್ಯ ಜೊತೆಗೆ ದೈಹಿಕ ಆರೋಗ್ಯವು ಬಹುಮುಖ್ಯವಾಗಿರುತ್ತದೆ ಎಂದು ಬಿಜೆಪಿ ಯುವ ಮುಖಂಡರಾದ ವಿನಯ್ ಕುಮಾರ್ ಅಭಿಪ್ರಾಯ ಪಟ್ಟರು.
ನಗರದ ಶ್ರೀ ಸಿದ್ದೇಶ್ವರ ಕನ್ವೆನ್ಷನ್ ಹಾಲ್ ನಲ್ಲಿ ಶ್ರೀ ವಿನಾಯಕ ಯೂಥ್ಅಸೋಸಿಯೇಷನ್ ಮತ್ತು ಶ್ರೀ ವಿದ್ಯಾಗಣಪತಿ ಯುವಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ,ಉಚಿತ ಬಿಪಿ, ಶುಗರ್ ಹಾಗು ಶ್ರವಣ ದೋಷ ತಪಾಸಣೆ
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗಿನ ಜೀವನಶೈಲಿ ಹಾಗು ಆಹಾರ ಪದ್ದತಿಯ ಬಗ್ಗೆ ಜಾಗೃತರಾಗಿರಬೇಕು ಮತ್ತು ನಮ್ಮ ಆರೋಗ್ಯದ ಕಾಳಜಿ ನಮ್ಮದೇ ಆಗಿರುತ್ತದೆ ಎಂದು ಹೇಳಿದರು.
ಸಾರ್ವಜನಿಕರು ಇಂತಹ ಉಚಿತ ಆರೋಗ್ಯ ತಪಾಸಣ ಶಿಬಿರಗಳನ್ನು ಸದುಪಯೋಗ ಪಡಿಸಿಕೊಂಡು ಯಶಸ್ವಿಗೊಳಿಸಬೇಕು ಎಂದು ಕೇಳಿಕೊಂಡರು.
ಜೊತೆಗೆ ವಿನಾಯಕ ಯೂಥ್ ಅಸೋಸಿಯೇಷನ್ ರವರು ಗಣಪತಿ ಪ್ರತಿಷ್ಟಾಪನೆ ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ.ಕಾರ್ಯಕ್ರಮವನ್ನು ನಡೆಸಲು ಸ್ಥಳಾವಕಾಶ ಮಾಡಿಕೊಟ್ಟ ಕಾರ್ತಿಕ್ ಗೌಡ , ಸಂದೀಪ್ (ಎಸಿಸಿ ದೀಪು),ವಿಶ್ವನಾಥ್ ರವರಿಗೆ ವಂದನೆಗಳನ್ನು ತಿಳಿಸುತ್ತಾ ಬಿಜೆಪಿ ಯೂಥ್ ಸೋಷಿಯಲ್ ಸರ್ವಿಸ್ ಸಹಯೋಗದಲ್ಲಿ ಇನ್ನಷ್ಟು ಸಮಾಜಿಕ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಜನರ ಹಿತಾಸಕ್ತಿ ಮೇರೆಗೆ ನಡೆಸಲು ಇಚ್ಚಿಸುತ್ತೇವೆ ಎಂದರು.
ನಗರದ 26ನೇ ವಾರ್ಡಿನಲ್ಲಿ ವಿನಯ್ ಕುಮಾರ್ರವರ ನೇತೃತ್ವದಲ್ಲಿ ಬಿಜೆಪಿ ಯೂಥ್ ಸೋಶಿಯಲ್ ಸರ್ವಿಸ್ ಸಕ್ರಿಯವಾಗಿದ್ದು ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಇರುವ ಯುವಕರು ಜೊತೆ ಕೈಗೂಡಿಸಿ ಯಶಸ್ವಿಗೊಳಿಸಲು ಕರೆಕೊಟ್ಟಿದ್ದಾರೆ.ಇಂತಹ ಸಮಾಜ ಸೇವೆಯ ಆಸಕ್ತರು ಎಸ್ ಐ ಟಿ ಬಡಾವಣೆಯ ಗ್ರಾಂಡ್ ಸೆವೆನ್ ಪಾರ್ಟಿ ಹಾಲ್
ನಲ್ಲಿ ತಮ್ಮನ್ನು ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷರು ಡಾ.ನಟರಾಜ್, ಲಯನ್ಸ್ ಕ್ಲಬ್ ಸದಸ್ಯ ಪ್ರಸಾದ್, ಶ್ರೇಯಸ್ ಮುಂತಾದವರು ಇದ್ದರು.