ತುಮಕೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಮಕೂರು ಜಿಲ್ಲಾ ವ್ಯಾಪ್ತಿಯ 8 ತಾಲ್ಲೋಕಿನಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಾತೃಶ್ರೀ ಹೇಮಾವತಿ ಹೆಗ್ಗಡೆ ರವರ ಮಾರ್ಗದರ್ಶನದೊಂದಿಗೆ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 699 ಕುಟುಂಬಗಳಿಗೆ ಪ್ರತಿ ತಿಂಗಳು ಕನಿಷ್ಠ 1000/-ದ ಹಾಗೆ ಮಾಶಾಸನವನ್ನು ನೀಡುತ್ತಾ ಒಟ್ಟು ಪ್ರತಿ ತಿಂಗಳಿಗೆ 7,07,500/- ದಂತೆ ನೀಡುತ್ತಿದ್ದು ಇದುವರೆಗೆ 5 ಕೋಟಿಗೂ ಅಧಿಕ ಮೊತ್ತ ನೀಡಲಾಗಿದೆ. 14 ವಾತ್ಸಲ್ಯ ಮನೆಗಳು ರಚನೆ,2 ಮನೆ ರಿಪೇರಿ ,2 ಶೌಚಾಲಯ ರಿಪೇರಿ,1ಶೌಚಾಲಯ ರಚನೆ 1ಸೋಲಾರ್ ಅಳವಡಿಕೆ ,47 ಜನರಿಗೆ ವಾತ್ಸಲ್ಯ ಮಿಕ್ಸ್ ಒಟ್ಟು 97 ಕೆಜಿ ವಿತರಣೆ ಆಗುತ್ತಿದೆ ಈಗಾಗಲೇ ಜಿಲ್ಲೆಯ 400ಕ್ಕೂ ಅಧಿಕ ನಿರ್ಗತಿಕರಿಗೆ ವಾತ್ಸಲ್ಯ ಕಿಟ್ ನೀಡಲಾಗಿದೆ.
ಪ್ರಸ್ತುತ ಈ ದಿನ ವಿಶೇಷ ವಾಗಿ ಮೂರನೇ ಬಾರಿ ವಾತ್ಸಲ್ಯ ಹೊಸ ಮಾಶಾಸನ ಸದಸ್ಯರ ಸಮೀಕ್ಷೆ ಮಾಡಿದ್ದು ಜಿಲ್ಲೆಯಲ್ಲಿ ಒಟ್ಟು 77 ಪಲಾನುಭವಿಗಳಿಗೆ ಜಿಲ್ಲೆಯಲ್ಲಿ ವಿತರಣೆ ಮಾಡಿದ್ದು ನಮ್ಮ ತುಮಕೂರು ಗ್ರಾಮಾಂತರ ತಾಲ್ಲೋಕಿನಲ್ಲಿ ಒಟ್ಟು 98ಫಲಾನುಭ ವಿಗಳಿಗೆ ಒಟ್ಟು 99000/-ರೂ ಮಾಶಾಸನ ಮೊತ್ತ ನೀಡಲಾಗುತ್ತಿದೆ ಒಟ್ಟು 2 ಜನರಿಗೆ ವಾತ್ಸಲ್ಯ ಮಿಕ್ಸ್, ವಾತ್ಸಲ್ಯ ಕಿಟ್ ನೀಡಲಾಗಿದೆ ಎಂದು ತುಮಕೂರು 1ಜಿಲ್ಲೆಯ ನಿರ್ದೇಶಕರಾದ ಸತೀಶ್ ಸುವರ್ಣ ರವರು ಈ ದಿನ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಜನಜಾಗೃತಿ ವೇದಿಕೆ ಸದಸ್ಯರು ಗ್ರಾಮಪಂಚಾಯ್ತಿ ಅಧ್ಯಕ್ಷರಾದ ಮಹಾಲಕ್ಷ್ಮಿ ಸೋಮಶೇಖರ್ ತಾಲೂಕಿನ ಯೋಜನಾಧಿಕಾರಿ ಪಿ.ಬಿ.ಸಂದೇಶ್,ಜಿಲ್ಲಾ ಐ.ಟಿ.ಪ್ರಬoಧಕರಾದ ಬಾಲಕೃಷ್ಣ, ಜ್ಞಾನವಿಕಾಸ ಸಮನ್ವಯಾಧಿಕಾರಿ ಧನಲಕ್ಷ್ಮಿ ಎಂ.ಪಿ,ಎಲ್ಲಾ ವಲಯದ ಮೇಲ್ವೀಚಾರಕರು,ಸೇವಾಪ್ರತಿನಿಧಿಯವರು ಪಂಚಾಯತ್ ಅಧ್ಯಕ್ಷರು, ಸದಸ್ಯರು ದೇವಸ್ಥಾನದ ಅಧ್ಯಕ್ಷರು ಗಣ್ಯರು ಉಪಸ್ಥಿತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಬಂದಿರುವ ಸೀರೆ,ನೈಟಿ,ಲಂಗ ಶರ್ಟ್, ಪಂಚೆ,ಚಾಪೆ, ದಿಂಬು, ಟವಲ್, ಸೋಪು, ಬಾಚಣಿಕೆ, ಪಾತ್ರೆ ಸೆಟ್,ವಿತರಿಸಲಾಯಿತು.
———ಕೆ.ಬಿ ಚಂದ್ರಚೂಡ