ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗಗಳು ಬಿದರಕಟ್ಟೆ ನೂತನ ಕ್ಯಾಂಪಸ್ ಗೆ ಸ್ಥಳಾಂತರ-ಕುಲಪತಿ ಪ್ರೊ.ಎo. ವೆoಕಟೇಶ್ವರಲು ಮಾಹಿತಿ

ತುಮಕೂರು:ಗ್ರಾಮಾoತರ ತಾಲೂಕಿಗೆ ಸೇರಿದ ಬಿದರಕಟ್ಟೆ ಗ್ರಾಮದಲ್ಲಿ 240 ಎಕರೆ ವಿಶಾಲ ಪ್ರದೇಶದಲ್ಲಿ ಜ್ಞಾನಸಿರಿ ಕ್ಯಾಂಪಸ್ ನಿರ್ಮಾಣವಾಗಿದೆ.ಒಟ್ಟು ನಾಲ್ಕು ಹಾಸ್ಟೆಲ್ ಗಳನ್ನು ವಿವಿಧ ಅನುದಾನದಲ್ಲಿ ನಿರ್ಮಿಸಿದ್ದು ಇದರಲ್ಲಿ 700 ಜನ ವಿದ್ಯಾರ್ಥಿಗಳು ಇರಬಹುದು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ವೆಂಕಟೇಶ್ವರಲು ಮಾಹಿತಿ ನೀಡಿದರು.

ಇಂದು ಪತ್ರಿಕಾಘೋಷ್ಠಿ ನಡೆಸಿ ಮಾತನಾಡಿದ ಅವರು,

ಈ ಸುಸಜ್ಜಿತ ಕ್ಯಾಂಪಸ್ ನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಯೋಗಾಲಯ,ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ,40 ಕೋಟಿ ರುಪಾಯಿ ವೆಚ್ಚದ 16,843 ಚದರ ಮೀಟರ್ ವಿಸ್ತೀರ್ಣದ ಬೃಹತ್,ಶೈಕ್ಷಣಿಕ ಭವನದ ನಿರ್ಮಾಣವು ಪೂರ್ಣಗೊಂಡಿದೆ.

ಸುಸಜ್ಜಿತ ತರಗತಿ ಕೊಠಡಿಗಳು,ವಿಶಾಲ ಹಜಾರಗಳು, ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯ,ಬೋಧಕ-ಬೋಧಕೇತರ ಸಿಬ್ಬಂದಿಗಳ ಕಚೇರಿಗಳು ಸಜ್ಜುಗೊಂಡಿದೆ.ಪರೀಕ್ಷಾಪೂರ್ವ ತರಬೇತಿ ಕೇಂದ್ರ, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ, 2.5 ಕೋಟಿ ರೂ ವೆಚ್ಚದ ಪ್ರಧಾನ ದ್ವಾರ ಹಾಗೂ ಆವರಣ ಗೋಡೆ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಕೇಂದ್ರ ಗ್ರಂಥಾಲಯ, ಒಳಾಂಗಣ ಕ್ರೀಡಾಂಗಣ,ಕೇoದ್ರೀಕೃತ ಅಡುಗೆಮನೆ, ಎರಡನೆಯ ಶೈಕ್ಷಣಿಕ ಭವನ, ಆಡಳಿತ ಕಚೇರಿ, ಇತ್ಯಾದಿ ಅವಶ್ಯಕವಾಗಿದೆ, ಹೊಸ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿರುವ ಇತರ ಸೌಲಭ್ಯಗಳಾದ ಊಟೋಪಚಾರಕ್ಕಾಗಿ ಕೆಫೆಟೀರಿಯಾ, ವೈಫೈ,ಜೆರಾಕ್ಸ್, ಸ್ಟೇಶನರಿ ಸೌಲಭ್ಯ, ಗ್ರಂಥಾಲಯ ಮತ್ತ ಮಾಹಿತಿ ವಿಜ್ಞಾನ ಪ್ರಯೋಗಾಲಯ, ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಲಿರುವ ಕಲಾಭವನ ಇದೆ ಎಂದು
ತಿಳಿಸಿದರು.

30 ಎಕರೆ ಜಾಗದಲ್ಲಿ ನೂತನವಾಗಿ ಹಿರಿಯ ಚಲಚಿತ್ರ ನಿರ್ದೇಶಕ ರಾಜೇಂದ್ರಸಿoಗ್ ಬಾಬು ರವರ ಸಹಕಾರದಿಂದ ಫಿಲ್ಮ್ ಇನ್ಸ್ಟಿಟ್ಯೂಟ್ ನಿರ್ಮಾಣ ,ಮಾಡಲಾಗುವುದು.175 ಮಂದಿ ಸರ್ಕಾರಿ ಉಪನ್ಯಾಸಕರಿದ್ದು 150 ಮಂದಿ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದು ಖಾಯಂ ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿಗಳ ಕೊರತೆ ಇದೆ.

ಕೇಂದ್ರ ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆಯುವ ನಿಟ್ಟಿನಲ್ಲಿ ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣನವರನ್ನು ಸಂಪರ್ಕಿಸಲಾಗಿದೆ.ಸಚಿವರು ಕೇಂದ್ರದಿoದ ಶೀಘ್ರವಾಗಿ ಅನುದಾನ ದೊರೆಯುವಂತೆ ಮಾಡುತ್ತೇನೆ ನಿಮ್ಮನ್ನು ದೆಹಲಿಗೆ ಆಹ್ವಾನಿಸುತ್ತೇನೆ ಎಂದು ಹೇಳಿದ್ದಾರೆ ಎಂದರು.

ಉದ್ಯೋಗ ನಿರ್ವಹಿಸುವ ಮಹಿಳೆಯರಿಗೆ ಪಿಜಿ ನಿರ್ಮಾಣ ಮಾಡಲು 42 ಕೋಟಿ ಅನುದಾನ ದೊರೆತಿದೆ,ಇದರಿಂದ ನಮ್ಮ ಕ್ಯಾಂಪಸ್ ನಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಅನುಕೂಲವಾಗಲಿದೆ,85ಕೋಟಿ ಖರ್ಚು ಮಾಡಿ ಇಲ್ಲಿವರೆವಿಗೂ ಕ್ಯಾಂಪಸ್ ನಿರ್ಮಾಣ ಮಾಡಿದ್ದೇವೆ. ಮುಂದಿನ ವಾರವೇ ವಿಜ್ಞಾನ ವಿಭಾಗವನ್ನು ಸ್ಥಳಾಂತರ ಮಾಡಲಾಗುವುದು,2 ತಿಂಗಳಲ್ಲಿ ತರಗತಿಗಳಿಗೆ ಅವಶ್ಯವಿರುವ ಅಗತ್ಯ ಮೂಲಭೂತ ಸೌಕರ್ಯಗಳನ್ನು ನೀಡಿ ಮುಕ್ತಾಯಗೊಳಿಸಲಾಗುವುದು,ಇದೊಂದು ನಮ್ಮ ಕನಸಿನ ವಿಶ್ವವಿದ್ಯಾಲಯ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ರಿಜಿಸ್ಟ್ರಾರ್ ಪ್ರೊ .ಸುರೇಶ್,ಕಾರ್ಯಪಾಲಕ ಅಭಿಯಂತರರಾದ ಸುರೇಶ್ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

× How can I help you?