ತುಮಕೂರು:ಸುಪ್ರೀoಕೋರ್ಟ್ ಆದೇಶದ ಅನ್ವಯ ಒಳಮೀಸಲಾತಿ ಜಾರಿಗೆ ಸಂಬoಧಿಸಿದoತೆ ಮಾಹಿತಿ ಸಂಗ್ರಹಿಸಲು ನೇಮಕವಾಗಿರುವ ನ್ಯಾ.ನಾಗಮೋಹನ್‌ದಾಸ್ ಅವರ ನೇತೃತ್ವದ ಸಮಿತಿ ನೇಮಕವಾಗಿ ಒಂದು ತಿoಗಳು ಕಳೆದರು ಕಾರ್ಯಸೂಚಿ ನೀಡದೆ ವಿಳಂಭ ಧೋರಣೆ ಅನುಸರಿಸುತ್ತಿದ್ದು,ಇದರ ವಿರುದ್ಧ ಸಮಸ್ತ ಮಾದಿಗ ಸಮಾಜ ಡಿಸೆಂಬರ್ 02ರ ಮುಖ್ಯಮಂತ್ರಿ ಕಾರ್ಯಕ್ರಮದ ಸಮಯದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಒಳಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ನಿರ್ಲಿಪ್ತರಾಗಿದ್ದಾರೆ. ಯಾವುದೇ ನೇಮಕಾತಿಗಳನ್ನು ಮಾಡುವುದಿಲ್ಲ ಎಂಬ ಆಶ್ವಾಸನೆ ನೀಡಿ, ಒಳಗೊಳಗೆ 34 ಸಾವಿರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ.ಸರಕಾರ ನುಡಿದಂತೆ ನಡೆಯುತ್ತಿಲ್ಲ.ಮಾದಿಗರನ್ನು ಅವಕಾಶದಿಂದ ವಂಚಿಸುವ ಕೆಲಸ ನಡೆಯುತ್ತಿದೆ.ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಮುಖ್ಯಮಂತ್ರಿಗಳು ಒಳ ಮೀಸಲಾತಿ ಜಾರಿಯಾಗುವವರೆಗೂ ನೇಮಕಾತಿ ಮಾಡುವುದಿಲ್ಲ ಎಂದು ಸ್ಥಗಿತ ಮಾಡಿದ್ದಾರೆ.ಆದರೆ ಕರ್ನಾಟಕದಲ್ಲಿ ನೇಮಕಾತಿ ನಡೆಯುತ್ತಿದೆ.ಹಾಗಾಗಿ ಡಿಸೆಂಬರ್ 02ರ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ವೈ.ಹೆಚ್.ಹುಚ್ಚಯ್ಯ ಸ್ಪಷ್ಟಪಡಿಸಿದರು.
ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಕೊರಟಗೆರೆ ಕ್ಷೇತ್ರದ ಮುಖಂಡರಾದ ಅನಿಲ್‌ಕುಮಾರ್ ಮಾತನಾಡಿ,ಸರಕಾರದ ಮುಂದೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ, ನ್ಯಾ.ನಾಗಮೋಹನ್‌ದಾಸ್ ವರದಿ ಹಾಗೂ ಜೆ.ಸಿ. ಮಾಧುಸ್ವಾಮಿ ವರದಿಯ ಜೊತೆಗೆ,2011ರ ಜನಗಣತಿಯ ವರದಿ ಇದ್ದರೂ ಮತ್ತೊಮ್ಮೆ ಅಂಕಿ ಆoಶಗಳ ಕ್ರೂಢೀಕರಣಕ್ಕೆ ಮುಂದಾಗುವ ಅಗತ್ಯವಿರಲಿಲ್ಲ.ಸರಕಾರ ಉದ್ದೇಶಪೂ ರ್ವಕವಾಗಿಯೇ ವಿಳಂಭ ಧೋರಣೆ ಅನುಸರಿಸುತ್ತಿದೆ.ಸರಕಾರ ಕೇಳಿದ 3 ತಿಂಗಳ ಗಡುವಿನಲ್ಲಿ 40 ದಿನಗಳು ಕಳೆದು ಹೋಗಿವೆ.ಉಳಿದ ಐವತ್ತು ದಿನಗಳಲ್ಲಿ ಅಂಕಿ ಅಂಶ ಕ್ರೂಢೀಕರಿಸಿ ವರದಿ ನೀಡಲು ಸಾಧ್ಯವೇ ? ಎಂದು ಪ್ರಶ್ನಿಸಿದ ಅವರು, ನ್ಯಾ.ನಾಗಮೋಹನ್‌ದಾಸ್ ಅವರು ಸಹ ಶೀಘ್ರವಾಗಿ ಅಂಕಿ ಆoಶಗಳನ್ನು ಕ್ರೂಡೀಕರಿಸಿ, ಪರಿಶಿಷ್ಟ ಜನಾಂಗದ ಅಸ್ಪಷ್ಯ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದರು.
ಡಾ.ಲಕ್ಷ್ಮಿಕಾಂತ್ ಮಾತನಾಡಿ,ಮಾದಿಗ ಸಮುದಾಯದ ಮುಂದಿರುವ ಏಕೈಕ ಪ್ರಶ್ನೆ ಎಂದರೆ ಒಳ ಮೀಸಲಾತಿ ಜಾರಿ.ಹಾಗಾಗಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿರುವ ಎಲ್ಲಾ ಮಾದಿಗ ಸಮುದಾಯದ ಮುಖಂಡರೊoದಿಗೆ ಮಾತುಕತೆ ನಡೆಸಿ, ಅವರನ್ನು ಸಹ ಡಿಸೆಂಬರ್ 02ರ ಪ್ರತಿಭಟನೆಗೆ ಅಹ್ವಾನ ನೀಡುತ್ತೇವೆ.ಇದೊಂದು ಪಕ್ಷಾತೀತ, ಸಮುದಾಯದ ಹಿತ ಕಾಯುವ ಹೋರಾಟವಾಗಲಿದೆ.ತುಮಕೂರು ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಗೃಹ ಇಲಾಖೆ ನೇಮಕಾತಿಯಲ್ಲಿ ವಿನಾಯಿತಿ ನೀಡುವಂತೆ ಕೇಳಿದ್ದಾರೆ.ಇದು ತರವಲ್ಲ. ಮಾದಿಗ ಸಮುದಾಯ ಮಧುಗಿರಿ ಮತ್ತು ಕೊರಟಗೆರೆ ಎರಡು ಕ್ಷೇತ್ರಗಳಲ್ಲಿ ಅವರ ಹಿತ ಕಾಯ್ದಿದೆ.ಈ ಸಂದರ್ಭದಲ್ಲಿ ಸಮುದಾಯಕ್ಕೆ ಅನ್ಯಾಯ ಮಾಡುವುದು ಒಳ್ಳೆಯದಲ್ಲ.ಹಾಗಾಗಿ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ನೇಮಕಾತಿಯನ್ನು ತಡೆಹಿಡಿಯಲು ಅವರು ಸಹ ಸರಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದರು.
ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ಮಾದಿಗ ಸಮುದಾಯಕ್ಕೆ ತೀವ್ರ ಹಿನ್ನೆಡೆಯಾಗಿದೆ. ಉದಾಹರಣೆಗೆ ಕರ್ನಾಟಕ ವಿಶ್ವವಿದ್ಯಾಲಯದ ಪ್ರೊಫೇಸರ್ ನೇಮಕಾತಿಯಲ್ಲಿ 24 ಜನ ಹೊಲಯ ಸಮುದಾಯದ,4 ಜನ ಮಾದಿಗ ಸಮುದಾ ಯದವರಿದ್ದಾರೆ.ಪರಿಶಿಷ್ಟ ಜಾತಿಯ ಬೇರೆ ಸಮುದಾಯಗಳ ಪ್ರಾತಿನಿಧ್ಯವು ಕಡಿಮೆ ಇದೆ.ಇಂತಹ ಹಲವು ಉದಾಹರಣೆಗಳಿದ್ದು,ಈ ತಾರತಮ್ಯ ಸರಿಪಡಿಸಲು ಒಳಮೀಸಲಾತಿ ಜಾರಿಯೊಂದೇ ಪರಿಹಾರ.ಹಾಗಾಗಿ ಸರಕಾರ ಕೂಡಲೇ ನ್ಯಾ.ನಾಗಮೋಹನ್‌ದಾಸ್ ಸಮಿತಿಗೆ ಕಾರ್ಯಸೂಚಿ ನೀಡಿ,ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಮಾಡಬೇಕು ಎಂದು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಪ್ರತಿಭಟನೆಯ ಸ್ವರೂಪವನ್ನು ಈಗಲೇ ತಿಳಿಸುವುದಿಲ್ಲ. ಒಂದು ವೇಳೆ ಸರಕಾರ ನಮ್ಮನ್ನು ಬಂಧಿಸಿದರೂ ಹೆದರುವ ಪ್ರಶ್ನೆಯೇ ಇಲ್ಲವೆಂದು ಲಕ್ಷ್ಮಿಕಾಂತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಅಂಜನಪ್ಪ, ಬೆಳಗುಂಬ ವೆಂಕಟೇಶ್,ಸೊರೆಕುoಟೆ ಯೋಗಿಶ್,ರಘು,ಅಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.
————-ಕೆ.ಬಿ ಚಂದ್ರಚೂಡ