ತುಮಕೂರು: ಸುಪ್ರಸಿದ್ಧ ಯಾತ್ರಾಸ್ಥಳವಾದ ದೇವರಾಯನದುರ್ಗದ ಶ್ರೀ ಲಕ್ಷ್ಮೀನರ ಸಿಂಹ ಸ್ವಾಮಿ ದೇವಾಲಯದಲ್ಲಿ ವಿವಿಧ ಮೂಲಗಳಿಂದ 2023-24 ನೇ ಸಾಲಿನಲ್ಲಿ ಒಟ್ಟು ರೂ. 2,54,57,380 ಆದಾಯ ಸಂಗ್ರಹವಾಗಿದೆ.
ಸಾಲಿನಲ್ಲಿ ಹುಂಡಿಯೊoದರಿoದಲೇ ಒಟ್ಟು ರೂ.1,09,79,254 ರಷ್ಟು ಬ್ರಹತ್ ಮೊತ್ತದ ಹಣ ಸಂಗ್ರಹವಾಗಿದೆ.
ತುಮಕೂರಿನ ಸಾಮಾಜಿಕ ಕಾರ್ಯಕರ್ತ ಆರ್.ವಿಶ್ವನಾಥನ್ ಅವರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ನೀಡಿರುವ ಉತ್ತರದಲ್ಲಿ ಈ ಮಾಹಿತಿ ದೊರೆತಿದೆ.
ಹರಿದುಬಂದ ಆದಾಯ
ಈ ದೇವಾಲಯವನ್ನು ಧಾರ್ಮಿಕದತ್ತಿ ಇಲಾಖೆಯು ‘ಎ’ ಶ್ರೇಣಿಯ ದೇವಾಲಯವೆಂದು ಗುರುತಿಸಿದೆ.ಶ್ರೀ ಯೋಗಾಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಹುಂಡಿ ಶ್ರೀ ಭೋಗಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿನ ಹುಂಡಿಯಲ್ಲಿ ಒಟ್ಟು ರೂ. 1,09,79,254 ಸಂಗ್ರಹವಾಗಿದೆ.
ಅದರಲ್ಲಿ ಸೇವಾರ್ಥ ಕಾಣಿಕೆಗಳು,ಇತರೆ ಸೇವೆಗಳ ಮೂಲಕ ರೂ. 46,85,851, ಕಾಣಿಕೆ ರೂಪದಲ್ಲಿ ಬಂದ ಒಟ್ಟು ಹಣ ರೂ. 21,05,554, ಆನ್‌ಲೈನ್ ಮುಖಾಂತರ ಬಂದ ಮೊತ್ತ ರೂ. 4,82,708, ಶಾಶ್ವತ ಸೇವೆಯಲ್ಲಿ ತೊಡಗಿಸಿದ ಹಣಕ್ಕೆ ಬಂದ ಬಡ್ಡಿ ರೂ. 16,34,394, ವಿಶೇಷ ದರ್ಶನ ವ್ಯವಸ್ಥೆಯಿಂದ ರೂ. 3,19,200,ಯಾತ್ರಿ ನಿವಾಸ ಕಟ್ಟಡದ ಬಾಡಿಗೆಯಿಂದ ರೂ. 3,54,500, ದೇವರ ಶೇಷ ವಸ್ತುಗಳ ಮಾರಾಟದಿಂದ ರೂ. 3,46,780, ಕರಿಗಿರಿ ವಸತಿಗೃಹಗಳ ಬಾಡಿಗೆಯಿಂದ ರೂ. 3,20,200, ಮತ್ತೊಂದು ಹುoಡಿಯಿoದ ರೂ. 3,80,189, ಕಲ್ಯಾಣಮಂದಿರದಿoದ ಬಂದ ಬಾಡಿಗೆ ರೂ.2,31,450, ಎಸ್.ಬಿ.ಖಾತೆಯಿಂದ ಬಂದ ಬಡ್ಡಿ ಹಣ ರೂ. 1,91,943, ಚಪ್ಪಲಿ ಸ್ಟಾಂಡ್ ಹರಾಜಿನಿoದ ರೂ. 1,19,000 ಆದಾಯ ಹರಿದು ಬಂದಿದೆ ಎಂದು ಒಟ್ಟು 21 ಬಾಬ್ತುಗಳ ಪಟ್ಟಿಯನ್ನು ಸದರಿ ಅಧಿಕಾರಿ ನೀಡಿದ್ದಾರೆ.
ದಾನಿಗಳಿಂದ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ಸ್ವೀಕರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ವಿಶ್ವನಾಥನ್ ತಿಳಿಸಿದ್ದಾರೆ.
ಮಾಹಿತಿಹಕ್ಕು ಕಾಯ್ದೆ ಪ್ರಕಾರ ವೇತನದ ಮೊತ್ತದ ವಿವರವನ್ನು ನೀಡದೆ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ ಎಂದು ಆರ್.ವಿಶ್ವನಾಥನ್ ಆಕ್ಷೇಪಿಸಿದ್ದಾರೆ.