ತುಮಕೂರು:ನಗರದ ಕ್ಯಾತ್ಸಂದ್ರದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಜ್ಞಾನ ವಿಕಾಸ ಕೇಂದ್ರದ ಮಾಸಿಕ ಸಭೆ ನಡೆಯಿತು.
ಈ ಸಂದರ್ಭದಲ್ಲಿ ನಿರ್ಗತಿಕರಿಗೆ ಮಾಸಾಶನದ ಮಂಜೂರಾತಿ ಪತ್ರವನ್ನು ಸಂಘದ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ವಿತರಿಸಿ ಶುಭಹಾರೈಸಿದರು.
ನಂತರ ಮಾತನಾಡಿದ ಅವರು ಇಂದು ಶಿಕ್ಷಣ ಮತ್ತು ನಿರ್ಗತಿಕರಿಗೆ ಮಾಸಾಶನ ಪತ್ರ ನೀಡಿದ್ದು ಸಂತೋಷದಾಯಕವಾಗಿದೆ.ಜ್ಞಾನವಿಕಾಸ ಕಾರ್ಯಕ್ರಮಗಳಲ್ಲಿ ಆರೋಗ್ಯದ ಬಗ್ಗೆ, ಪೌಷ್ಟಿಕ ಆಹಾರ, ಶಿಕ್ಷಣ,ಸ್ವಉದ್ಯೋಗ, ಸರ್ಕಾರಿ ಯೋಜನೆಗಳು ಮತ್ತು ಕಾನೂನು ಇವುಗಳ ಬಗ್ಗೆ
ತಿಳಿಸಿಕೊಡಲಾಗುತ್ತಿದೆ. ಇದರ ಲಾಭವನ್ನು ಕೇಂದ್ರದ ಸದಸ್ಯರು ಪಡೆಯಬೇಕು ಮತ್ತು ಜ್ಞಾನವಿಕಾಸ ಕೇಂದ್ರವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು ಕೇಂದ್ರದ ಸದಸ್ಯರಿಗೆ ಸಲಹೆ ನೀಡಿದರು.
ಯೂಟ್ಯೂಬ್ ಚಾನೆಲ್ ನೋಡುವುದರ ಬಗ್ಗೆ ಮತ್ತು ಅದರಲ್ಲಿರುವ ಮಾಹಿತಿಯನ್ನು ಪಡೆದುಕೊಳ್ಳುವ ಬಗ್ಗೆ ತಿಳಿಸಿ ಕೊಟ್ಟರು.
ಶ್ರೀಮತಿ ಗಂಗಮ್ಮ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.ನಿವೃತ್ತ ಮುಖ್ಯ ಶಿಕ್ಷಕಿ ಪದ್ಮಾವತಿ ರವರು ಶಿಕ್ಷಣದ ಬಗ್ಗೆ ಸದಸ್ಯರಿಗೆ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಪ್ರಭಾಕರ್ ರಾಮ್ ನಾಯಕ್, ವಲಯದ ಮೇಲ್ವಿಚಾರಕರಾದ ಹೆಚ್.ಎಸ್.ಲೋಕೇಶ್, ತಾಲ್ಲೋಕು ಜ್ಞಾನವಿಕಾಸ ಸಮನ್ವಯಾಧಿಕಾರಿ ನಾಗಮಣಿ.ಎನ್.ವಿ. ಸೇವಾ ಪ್ರತಿನಿಧಿ ವಿಜಯಮ್ಮ, ಕಲಾವತಿ. ಹಾಗೂ ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು.