ತುಮಕೂರು:ಆಸಕ್ತಿ ಇಚ್ಚಾಶಕ್ತಿಯಿಂದ ಚಿತ್ರಕಲೆ ಒಲಿಯಲು ಸಾಧ್ಯ-ಬಿ.ವಿ.ಎ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ: ಡಾ.ಡಿ.ಟಿ. ವಸಂತ

ತುಮಕೂರು:ಚಿತ್ರಕಲೆಯ ಜ್ಞಾನಾರ್ಜನೆ ಎಲ್ಲರಿಗೂ ಸುಲಭವಾಗಿ ಒಲಿಯುವಂತದ್ದಲ್ಲ, ಆಸಕ್ತಿ ಮತ್ತು ಇಚ್ಚಾಶಕ್ತಿಯಿಂದ ಮಾತ್ರ ಈ ಕಲೆಯನ್ನು ಕರಗತ ಮಾಡಿಕೊಳ್ಳಲು ಸಾಧ್ಯವಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯೆ ಡಾ.ಡಿ.ಟಿ.ವಸಂತ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪ್ರಥಮ ದರ್ಜೆ ಕಾಲೇಜಿನ ವಿಶ್ವಮಾನವ ಸಭಾಂಗಣದಲ್ಲಿ ನಡೆದ ಬಿ.ವಿ.ಎ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಈ ತರಹದ ಕಾರ್ಯಕ್ರಮಗಳು ಅತ್ಯಗತ್ಯವಾಗಿವೆ.ಒಳ್ಳೆಯದನ್ನು ಆಲೋಚಿಸಿ ಮುಂದೆ ಬನ್ನಿ. ನಮ್ಮ ಮನಸ್ಸಿಗೆ ತಕ್ಕಂತೆ ನಾವು ಕೆಲಸ ಮಾಡಬೇಕಾಗುತ್ತದೆ. ನಮ್ಮ ಕಾಲೇಜಿನಲ್ಲಿ ಎಲ್ಲಾ ಸೌಲಭ್ಯಗಳು ಇದ್ದು ಅವನ್ನು ಸಮರ್ಪಕವಾಗಿ ಬಳಸಿಕೊಂಡು ಅಭ್ಯುದಯ ಸಾಧಿಸುವಂತೆ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಿಕಟಪೂರ್ವ ಪ್ರಾಂಶುಪಾಲರಾದ ಪ್ರೊ.ತರುನ್ನಂ ನಿಖತ್ ಎಸ್ ಮಾತನಾಡಿ, ಚಿತ್ರಕಲಾ ಕಾಲೇಜಿನಿಂದ ನಮ್ಮ ಕಾಲೇಜಿಗೆ ಕಳೆ ಬಂದಂತಾಗಿದೆ.ಹೆಚ್ಚಿನ ಪ್ರವೇಶಾತಿಗಳು ಕೂಡ ನಡೆದಿರುವುದು ಸಂತಸ ತಂದಿದೆ ಎಂದರು.

ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಿ.ಎಲ್.ನಟರಾಜ್ ಮಾತನಾಡಿ, ಸಮಯ ವ್ಯರ್ಥ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ.ಇಂದು ಕಳೆದ ಸಮಯ ಮುಂದೆ ಸಿಗುವುದಿಲ್ಲ ಆ ದೃಷ್ಟಿಯಲ್ಲಿ ವಿದ್ಯಾರ್ಥಿಗಳು ಶ್ರದ್ಧೆ ವಹಿಸಿ ಕಲಿತು ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಸಿ.ಸಿ.ಬಾರಕೇರ ಮಾತನಾಡಿ,ನನ್ನ ನಿವೃತ್ತಿ ಸಮಯ ಹತ್ತಿರ ಬಂದಿದೆ. ಧಾರವಾಡದಿಂದ ವರ್ಗಾವಣೆಯಾಗಿ ಬಂದು ಸುಮಾರು 10 ವರ್ಷಗಳು ಕಳೆಯುತ್ತಾ ಬಂದಿವೆ. ಕಲೆಯ ಕುರಿತು ನನಗಾದಷ್ಟು ಕಲಿಸಿದ್ದೇನೆ. ಸರ್ಕಾರಿ ಚಿತ್ರಕಲಾ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿಗಳ ಸಂಘವನ್ನು ಕಟ್ಟಿದ್ದೇವೆ. ಸಂಘವು ಇಂದಿನವರೆಗೆ ನನಗೆ ಸಹಕಾರ ನೀಡುತ್ತಾ ಬಂದಿದೆ. ಹಾಗೆಯೇ ವಿದ್ಯಾರ್ಥಿಗಳು ಕಲಿಯುವ ಕಡೆ ಹೆಚ್ಚಿನ ಆಸಕ್ತಿ ತೋರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಶ್ರೀನಿವಾಸಮೂರ್ತಿ, ರಾಜಣ್ಣ, ಯತೀಶ್‌ಕುಮಾರ್ ಇದ್ದರು.

ಸ್ವಾಗತವನ್ನು ಶ್ರೀಮತಿ ಅಮೃತ, ನಿರೂಪಣೆಯನ್ನು ವಿದ್ಯಾಬಾಯಿ ವಂದನಾರ್ಪಣೆಯನ್ನು ರಂಗಸ್ವಾಮಿ ಆರ್ ನೆರವೇರಿಸಿಕೊಟ್ಟರು.

Leave a Reply

Your email address will not be published. Required fields are marked *

× How can I help you?